ETV Bharat / state

ಉಪಸಮರಕ್ಕೆ ಕೋವಿಡ್ ಹೊರೆ: ಎರಡು ಉಪಚುನಾವಣೆಯ ವೆಚ್ಚ ಈ ಬಾರಿ ಸುಮಾರು 50% ದುಬಾರಿ! - By election cost increased

ಕೋವಿಡ್ ಮಧ್ಯೆ ಚುನಾವಣಾ ಆಯೋಗ ಈ ಬಾರಿ ಎರಡು ಕ್ಷೇತ್ರದ ಉಪಸಮರವನ್ನು ಯಶಸ್ವಿಯಾಗಿ ಮುಗಿಸಿದೆ. ಆದರೆ ಈ ಬಾರಿಯ ಉಪಚುನಾವಣೆ ಇನ್ನುಷ್ಟು ದುಬಾರಿಯಾಗಿದೆ.

By election
ಉಪಚುನಾವಣೆ
author img

By

Published : Nov 3, 2020, 11:04 PM IST

ಬೆಂಗಳೂರು: ಆರ್.ಆರ್.ನಗರ ಹಾಗೂ ಶಿರಾ ಉಪಸಮರ ಅಂತ್ಯಗೊಂಡಿದೆ. ಕೋವಿಡ್ 19 ಮಧ್ಯೆ ಈ‌ ಉಪಚುನಾವಣೆ ವಾರ್ ಮುಗಿದಿದೆ.‌ ಆದರೆ, ಕೋವಿಡ್ ಮುಂಜಾಗ್ರತಾ ಕ್ರಮದೊಂದಿಗೆ ‌ನಡೆದ ಉಪಸಮರಕ್ಕಾಗಿ ಸರ್ಕಾರದ ಮೇಲೆ ಹೆಚ್ಚುವರಿ ಹೊರೆಯೂ ಜೋರಾಗೇ ಬಿದ್ದಿದೆ.

ಕೊನೆಗೂ ಜಿದ್ದಾಜಿದ್ದಿನಿಂದ ಕೂಡಿದ ಎರಡು ಕ್ಷೇತ್ರಗಳ ಉಪಸಮರ ಮುಕ್ತಾಯ ಗೊಂಡಿದೆ. ಇನ್ನೇನಿದ್ದರೂ ಎಲ್ಲರ ಚಿತ್ತ ನ.10ರ ಫಲಿತಾಂಶದ ಮೇಲೆ. ಆರ್.ಆರ್.ನಗರ ಹಾಗೂ ಶಿರಾದ ಉಪಚುನಾವಣೆ ಕೋವಿಡ್ ಮಾಹಾಮಾರಿಯ ಮಧ್ಯೆ ನಡೆದ ಮೊದಲ ಚುನಾವಣೆಯಾಗಿದೆ. ಹೀಗಾಗಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು. ಅದರಂತೆ ಕೋವಿಡ್ ಸುರಕ್ಷತಾ ಕ್ರಮಗಳನ್ನು ಕೈ ಗೊಂಡೇ ಈ ಬಾರಿ ಉಪಸಮರವನ್ನು ನಡೆಸಲಾಗಿದೆ.

ಮತದಾರರು ಮತ್ತು ಮತಗಟ್ಟೆ ಸಿಬ್ಬಂದಿಗಳ ಸುರಕ್ಷತೆಗೆ ಆದ್ಯತೆ ನೀಡಿನೇ ಕೋವಿಡ್ ಮಾರ್ಗಸೂಚಿಯನ್ವಯ ಚುನಾವಣೆ ನಡೆಸಬೇಕಾಗಿತ್ತು. ಆ ನಿಟ್ಟಿನಲ್ಲಿ ಚುನಾವಣಾ ಆಯೋಗ ಎಲ್ಲಾ ಕೋವಿಡ್ ಸುರಕ್ಷತಾ ಮಾರ್ಗಸೂಚಿಯನ್ನು ಅನುಸರಿಸಿನೇ ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಸಿದೆ. ಕೋವಿಡ್ ಮುಂಜಾಗ್ರತಾ ಕ್ರಮದೊಂದಿಗೆ ನಡೆದ ಉಪಸಮರಕ್ಕಾಗಿ ಚುನಾವಣಾ ಆಯೋಗ ಹೆಚ್ಚುವರಿ ವೆಚ್ಚವನ್ನೂ ಅನುಭವಿಸಿದೆ.

ಕೋವಿಡ್ ಮಧ್ಯೆ ನಡೆದ ಉಪಸಮರ ವೆಚ್ಚ 50% ಹೆಚ್ಚಳ: ಕೋವಿಡ್ ಮಧ್ಯೆ ಚುನಾವಣಾ ಆಯೋಗ ಈ ಬಾರಿ ಎರಡು ಕ್ಷೇತ್ರದ ಉಪಸಮರವನ್ನು ಯಶಸ್ವಿಯಾಗಿ ಮುಗಿಸಿದೆ. ಆದರೆ ಈ ಬಾರಿಯ ಉಪಚುನಾವಣೆ ಇನ್ನುಷ್ಟು ದುಬಾರಿಯಾಗಿದೆ.

ಚುನಾವಣೆ ನಡೆಸಲು ಭದ್ರತೆ, ಮತಗಟ್ಟೆಗಳ ಸ್ಥಾಪನೆ, ಮತಗಟ್ಟೆ ಸಿಬ್ಬಂದಿಗಳಿಗೆ ಸಾರಿಗೆ ವ್ಯವಸ್ಥೆ ಸೇರಿ ಚುನಾವಣಾ ಸಿದ್ಧತೆಗಳಿಗಾಗಿ ಚುನಾವಣಾ ಆಯೋಗ ಕೋಟ್ಯಂತರ ರೂ. ವ್ಯಯಿಸುತ್ತದೆ. ಆದರೆ ಈ ಬಾರಿಯ ಎರಡು ಕ್ಷೇತ್ರದ ಉಪಚುನಾವಣೆ ಸಾಮಾನ್ಯದಂತಲ್ಲ. ಕೋವಿಡ್ ಮಧ್ಯೆ ಸುರಕ್ಷಿತವಾಗಿ ಉಪಸಮರ ನಡೆಸುವುದು ಚುನಾವಣಾ ಆಯೋಗದ ಮುಂದಿದ್ದ ದೊಡ್ಡ ಸವಾಲಾಗಿತ್ತು. ಇದಕ್ಕಾಗಿನೇ ಚುನಾವಣಾ ಆಯೋಗ ಎಲ್ಲಾ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತ್ತು. ಹೀಗಾಗಿ ಈ ಬಾರಿಯ ಉಪಸಮರದ ವೆಚ್ಚದಲ್ಲಿ ಸುಮಾರು 50% ಹೆಚ್ಚಳವಾಗಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಕಳೆದ ವರ್ಷ ನಡೆದ 15 ಕ್ಷೇತ್ರಗಳ ಉಪ ಚುನಾವಣೆಗಾಗಿ ಸುಮಾರು 30 ಕೋಟಿ ರೂ. ವ್ಯಯಿಸಲಾಗಿತ್ತು. ಅದರಂತೆ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಸರಾಸರಿ 2 ಕೋಟಿ ರೂ. ವೆಚ್ಚ ತಗುಲಿದೆ. ಈ ಬಾರಿ ನಡೆದ ಎರಡು ಉಪಚುನಾವಣಾ ವೆಚ್ಚ ತಲಾ ಎರಡು ಕೋಟಿ ರೂ. ವೆಚ್ಚ ಆಗುವ ಸಾಧ್ಯತೆ ಇದ್ದು, ಕೋವಿಡ್ ಮುಂಜಾಗ್ರತಾ ಕ್ರಮಕ್ಕಾಗಿ ಹೆಚ್ಚುವರಿ ಒಂದು ಕೋಟಿ ರೂ. ತಗುಲಿದೆ. ಅಂದರೆ ಹೆಚ್ಚುವರಿ 50% ವೆಚ್ಚ ತಗುಲುವುದರೊಂದಿಗೆ, ಪ್ರತಿ ಕ್ಷೇತ್ರಕ್ಕೆ ಚುನಾವಣಾ ವೆಚ್ಚ ಸುಮಾರು ಮೂರು ಕೋಟಿ ರೂ.ಗೆ ಹೋಗುವ ಸಾಧ್ಯತೆ ಇದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚುವರಿ ಕೋವಿಡ್ ಸುರಕ್ಷತಾ ಕ್ರಮಗಳೇನು?: ಪ್ರತಿ ಮತಗಟ್ಟೆಗಳಲ್ಲಿ ಥರ್ಮಲ್ ಸ್ಕ್ಯಾನರ್ ಗಳು, ಸ್ಯಾನಿಟೈಸರ್ ಹಾಗೂ ಪ್ರತಿ ಮತದಾರರಿಗೆ ಹ್ಯಾಂಡ್ ಗ್ಲೌಸನ್ನು ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಮತಗಟ್ಟೆಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಇವಿಎಂ ಹಾಗೂ ವಿವಿಪ್ಯಾಟ್ ಗಳನ್ನೂ ಸ್ಯಾನಿಟೈಸ್ ಮಾಡಲಾಗಿದೆ.

ಈ ಬಾರಿ ಗಾಳಿ ಬೆಳಕು ಇರುವಂಥ ಹಿರಿದಾದ ಮತಗಟ್ಟೆ ಕೊಠಡಿಗಳನ್ನು ಆಯ್ಕೆ ಮಾಡಲಾಗಿದೆ. ಮತಗಟ್ಟೆಗಳಲ್ಲಿ ಹೆಚ್ಚಿನ ಜನಜಮಾವಣೆ ಆಗದಂತೆ ಪ್ರತಿ ಮತಕೇಂದ್ರಗಳಲ್ಲಿ ಮತದಾರರ ಸಂಖ್ಯೆಯನ್ನು 1,500 ರಿಂದ 1,000 ಕ್ಕೆ ಕಡಿತಗೊಳಿಸಲಾಗಿದೆ. ಹೀಗಾಗಿ ಅದಕ್ಕನುಗುಣವಾಗಿ ಎರಡೂ ಕ್ಷೇತ್ರಗಳಲ್ಲಿ ಈ ಬಾರಿ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಕೋವಿಡ್ ಹಿನ್ನೆಲೆ ಈ ಬಾರಿ ಮೊದಲ ಬಾರಿಗೆ ಚುನಾವಣಾ ಆಯೋಗ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಧ್ಯೆ ಸಮನ್ವಯತೆ ಸಾಧಿಸಲು ನೋಡಲ್ ಅರೋಗ್ಯಾಧಿಕಾರಿಯನ್ನು ನೇಮಿಸಲಾಗಿದೆ.

ಇನ್ನು ಕೋವಿಡ್ ಸೋಂಕಿತರಿಗೆ ಮತದಾನದ ವ್ಯವಸ್ಥೆಗೆ ವಿಶೇಷವಾದ ಸಿದ್ಧತೆಗಳನ್ನು ಈ ಬಾರಿ ಮಾಡಲಾಗಿದೆ. ಕೊನೆಯ ಒಂದು ಗಂಟೆಗಳ ಕಾಲ ಕೋವಿಡ್ ಸೋಂಕಿತರಿಗೆ ಮತಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಅದಕ್ಕಾಗಿ ಆ ಮತ ಕೇಂದ್ರದ ಸಿಬ್ಬಂದಿಗೆ ಪಿಪಿಇ ಕಿಟ್ ನೀಡಲಾಗಿದೆ. ಜೊತೆಗೆ ಕೋವಿಡ್ ಸೋಂಕಿತ ಮತದಾರನಿಗೂ ಪಿಪಿಇ ಕಿಟ್ ನೀಡಲಾಗಿದ್ದು, ಅವರನ್ನು ಕರೆದೊಯ್ಯಲು ಆಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡಲಾಗಿದೆ.

ಕೋವಿಡ್ ಹಿನ್ನೆಲೆ ಉಪಚುನಾವಣೆಗಾಗಿ ಹೆಚ್ಚಿನ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.‌ ಜೊತೆಗೆ ಹೆಚ್ಚಿನ ಮತ ಎಣಿಕೆ ಕೇಂದ್ರಗಳನ್ನೂ ಸ್ಥಾಪಿಸಲು ನಿರ್ಧರಿಸಲಾಗಿದೆ. ಒಂದು ಮತ ಎಣಿಕೆ ಕೊಠಡಿಯಲ್ಲಿ ಈ ಬಾರಿ ಕೇವಲ 7 ಕೌಂಟಿಂಗ್ ಟೇಬಲ್ ಇರಲಿದೆ. ಹೆಚ್ಚಿನ ವಾಹನಗಳು, ಹೆಚ್ಚುವರಿ ಪಿಪಿಇ ಕಿಟ್ ಗಾಗಿ ವೆಚ್ಚ ತಗುಲಿರುವುದರಿಂದ ಈ ಬಾರಿ ಉಪಸಮರದ ಚುನಾವಣಾ ವೆಚ್ಚ 50% ಹೆಚ್ಚುವರಿ ದುಬಾರಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.