ಬೆಂಗಳೂರು: ಅನರ್ಹರಿಂದ ತೆರವಾಗಿ ತೀವ್ರ ಕತೂಹಲಕ್ಕೆ ಕಾರಣವಾಗಿರುವ 15 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಮೊದಲ ಹಂತದಲ್ಲಿ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ.
ಮೊದಲ ಪಟ್ಟಿಯಲ್ಲಿ ಉತ್ತರ ಕನ್ನಡ ಯಲ್ಲಾಪುರ ಕ್ಷೇತ್ರದಿಂದ ಭೀಮಣ್ಣ ನಾಯ್ಕ್, ಹಿರೇಕೆರೂರಿಂದ ಬಿ.ಹೆಚ್. ಬನ್ನಿಕೋಡ್, ರಾಣೆಬೆನ್ನೂರಿಂದ ಕೆ.ಬಿ. ಕೋಳಿವಾಡ, ಚಿಕ್ಕಬಳ್ಳಾಪುರದಿಂದ ಎಂ. ಅಂಜನಪ್ಪ, ಕೆ.ಆರ್. ಪುರ ಎಂ. ನಾರಾಯಣ ಸ್ವಾಮಿ, ಮಹಾಲಕ್ಮಿ ಲೇಔಟ್ ಎಂ. ಶಿವರಾಜ್, ಹೊಸಕೋಟೆ ಪದ್ಮಾವತಿ ಸುರೇಶ್, ಹುಣಸೂರು ಹೆಚ್.ಪಿ. ಮಂಜುನಾಥ್ಗೆ ಟಿಕೆಟ್ ನೀಡಲಾಗಿದೆ.
ಅನರ್ಹ ಶಾಸಕರಿಂದ ತೆರವಾದ 15 ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಉಪ ಚುನಾವಣೆ ನಡೆಯಲಿದ್ದು, ಡಿಸೆಂಬರ್ 9ರಂದು ಮತ ಎಣಿಕೆ ನಡೆಯಲಿದೆ.
ವಿಧಾನ ಪರಿಷತ್ 2 ಕ್ಷೇತ್ರಗಳಿಗೆ ಕೈ ಅಭ್ಯರ್ಥಿಗಳು:
ಮೇಲ್ಮನೆಯ 2 ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗೂ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿ ಪ್ರಕಟಿಸಿದೆ. ರಾಜ್ಯ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಡಾ. ಆರ್. ಎಂ. ಕುಬೇರಪ್ಪ ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಶರಣಪ್ಪ ಮಟ್ಟೂರು ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.