ಬೆಂಗಳೂರು : ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲದಲ್ಲೆ ಇದ್ದ ಜೆಡಿಎಸ್ ಕೊನೆಗೂ 14 ಕ್ಷೇತ್ರಗಳಿಗೂ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸಿದೆ.
ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆದಿನವಾಗಿದ್ದರೂ ಕೊನೆ ಹಂತದವರಿಗೂ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ಏರ್ಪಟ್ಟಿತ್ತು. ಆದರೆ, ಕೊನೆ ಹಂತದಲ್ಲಿ ಜೆಡಿಎಸ್ ವರಿಷ್ಠರು ಹದಿನಾಲ್ಕು ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಎಲ್ಲಾ ಹದಿನಾಲ್ಕು ಕ್ಷೇತ್ರಗಳಿಗೂ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದ್ದಾರೆ.
ಜೆಡಿಎಸ್ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಈ ಕೆಳಕಂಡಂತಿದೆ:
ಬೆಳಗಾವಿ ಜಿಲ್ಲೆ : ಅಥಣಿ ವಿಧಾನಸಭಾ ಕ್ಷೇತ್ರ- ಗುರುದಾಸ್ಯಳ್
ಕಾಗವಾಡ: ಶೈಲ ಪರಸಪ್ಪ ತೂಬಶೆಟ್ಟಿ
ಗೋಕಾಕ್: ಅಶೋಕ್ ನಿಂಗಯ್ಯ ಪೂಜಾರಿ
ಉತ್ತರ ಕನ್ನಡ ಜಿಲ್ಲೆ : ಯಲ್ಲಾಪುರ- ಎ.ಚೈತ್ರಾಗೌಡ
ಹಾವೇರಿ ಜಿಲ್ಲೆ : ಹಿರೇಕೆರೂರು- ಶಿವಲಿಂಗ ಶಿವಚಾರ್ಯ ಮಹಾಸ್ವಾಮಿ
ರಾಣೆಬೆನ್ನೂರು: ಮಲ್ಲಿಕಾರ್ಜುನ ಹಲಗೇರಿ
ಬಳ್ಳಾರಿ ಜಿಲ್ಲೆ : ವಿಜಯನಗರ ಕ್ಷೇತ್ರ- ಎನ್ ಎಂ ನಭಿ
ಚಿಕ್ಕಬಳ್ಳಾಪುರ ಜಿಲ್ಲೆ : ಚಿಕ್ಕಬಳ್ಳಾಪುರ ಕ್ಷೇತ್ರ- ಕೆ ಪಿ ಬಚ್ಚೇಗೌಡ
ಬೆಂಗಳೂರು ನಗರ ಜಿಲ್ಲೆ : ಕೆಆರ್‌ಪುರಂ- ಸಿ ಕೃಷ್ಣಮೂರ್ತಿ
ಯಶವಂತಪುರ: ಟಿ ಎನ್ ಜವರಾಯಿಗೌಡ
ಮಹಾಲಕ್ಷ್ಮಿಲೇಔಟ್ : ಡಾ. ಗಿರೀಶ್ ಕೆ.ನಾಶಿ
ಶಿವಾಜಿನಗರ: ತನ್ವೀರ್ ಅಹಮ್ಮದ್ ವುಲ್ಲಾ
ಬೆಂಗಳೂರು ಗ್ರಾಮಾಂತರ ಜಿಲ್ಲೆ : ಹೊಸಕೋಟೆ- ಪಕ್ಷೇತರ ಅಭ್ಯರ್ಥಿಗೆ ಬೆಂಬಲ
ಮಂಡ್ಯ ಜಿಲ್ಲೆ : ಕೆಆರ್‌ಪೇಟೆ: ಬಿ ಎಲ್ ದೇವರಾಜ್
ಮೈಸೂರು ಜಿಲ್ಲೆ: ಹುಣಸೂರು ಕ್ಷೇತ್ರ-ಸೋಮಶೇಖರ್