ETV Bharat / state

ಆರ್ಥಿಕ ಸಂಕಷ್ಟದ ಮಧ್ಯೆ ಕುಂಟುತ್ತಾ ಸಾಗುತ್ತಿರುವ 2021-22 ಸಾಲಿನ ಬಜೆಟ್ ಅನುಷ್ಠಾ‌ನ: ಏನಿದೆ ಸ್ಥಿತಿಗತಿ?

2021-22 ಸಾಲಿನ ಸೆಪ್ಟೆಂಬರ್​ವರೆಗಿನ ಬಜೆಟ್ ಅನುಷ್ಠಾನದಲ್ಲಿ ಸರ್ಕಾರ ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಯೋಜನೆ ಇಲಾಖೆ ನೀಡಿದ ಅಂಕಿ-ಅಂಶದ ಪ್ರಕಾರ, ಸೊರಗಿದ ಆದಾಯದ ಹಿನ್ನೆಲೆ ಇಲಾಖಾವಾರು ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗದಿರುವುದು ಸ್ಪಷ್ಟವಾಗುತ್ತದೆ.

vidhanasoudha
ವಿಧಾನಸೌಧ
author img

By

Published : Oct 28, 2021, 10:55 PM IST

ಬೆಂಗಳೂರು: ಆರ್ಥಿಕ ಸಂಕಷ್ಟದ ಮಧ್ಯೆ ಸರ್ಕಾರಕ್ಕೆ 2021-22 ಸಾಲಿನ ಬಜೆಟ್ ಅನುಷ್ಠಾನ ಮಾಡುವ ಅನಿವಾರ್ಯತೆ ಎದುರಾಗಿದೆ. ಈಗಾಗಲೇ ಆರ್ಥಿಕ ವರ್ಷದ ಮೊದಲಾರ್ಧ ಕಳೆದಿದೆ. ಆದರೆ, ಆಯ-ವ್ಯಯದ ಅನುಷ್ಠಾನದ ಪ್ರಗತಿ ಮಾತ್ರ ನಿರೀಕ್ಷಿತ ಮಟ್ಟದಲ್ಲಿಲ್ಲ. ಅದರ ಸಮಗ್ರ ವರದಿ ಇಲ್ಲಿದೆ.

ಈ ಬಾರಿಯೂ ರಾಜ್ಯ ಕೋವಿಡ್ ಲಾಕ್‌ಡೌನ್​ನಿಂದ ನರಳಿ ಹೋಗಿದೆ. ಆರ್ಥಿಕ ಸಂಕಷ್ಟ ರಾಜ್ಯ ಸರ್ಕಾರದ ಬೊಕ್ಕಸ ಹೈರಾಣಾಗಿಸಿದೆ. ಸೊರಗಿದ ಆದಾಯದಿಂದ ಬಜೆಟ್ ಅನುಷ್ಠಾನವೇ ದುಸ್ತರವಾಗಿ ಪರಿಣಮಿಸಿದೆ. ಕಳೆದ ವರ್ಷವೂ ಕೋವಿಡ್ ಹೇರಿದ ಲಾಕ್‌ಡೌನ್​ನಿಂದ ಆರ್ಥಿಕ ಸಂಕಷ್ಟ ತಲೆದೋರಿ ಬಜೆಟ್ ಅನುಷ್ಠಾನ ತಲೆನೋವಾಗಿ ಪರಿಣಮಿಸಿತ್ತು. ಈ ಬಾರಿಯೂ ಕೋವಿಡ್-ಲಾಕ್‌ಡೌನ್​​​ನಿಂದ ರಾಜ್ಯದ ಸಂಪನ್ಮೂಲ ಕ್ರೂಢೀಕರಿಸಿ ಸೊರಗಿದೆ. ಹೀಗಾಗಿ, 2021-22ಸಾಲಿನ ಸೆಪ್ಟೆಂಬರ್​​ವರೆಗಿನ ಮೊದಲಾರ್ಧದಲ್ಲಿ ಬಜೆಟ್ ಅನುಷ್ಠಾನದಲ್ಲೂ ಪ್ರಗತಿ ಕುಂಠಿತವಾಗಿದೆ.

budget implementation slowdown amid economical crisis
ಆಯ-ವ್ಯಯ ಘೋಷಣೆ ಮೇಲೆ ತೆಗೆದುಕೊಂಡ ಕ್ರಮ

ಬಜೆಟ್ ಅನುಷ್ಠಾನದಲ್ಲಿ ಹಿಂದೆ ಬಿದ್ದ ಸರ್ಕಾರ: 2021-22 ಸಾಲಿನ ಸೆಪ್ಟೆಂಬರ್​ವರೆಗಿನ ಬಜೆಟ್ ಅನುಷ್ಠಾನದಲ್ಲಿ ಸರ್ಕಾರ ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಯೋಜನೆ ಇಲಾಖೆ ನೀಡಿದ ಅಂಕಿ - ಅಂಶದ ಪ್ರಕಾರ, ಸೊರಗಿದ ಆದಾಯದ ಹಿನ್ನೆಲೆ ಇಲಾಖಾವಾರು ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗದಿರುವುದು ಸ್ಪಷ್ಟವಾಗುತ್ತದೆ.

2021-22 ಸಾಲಿನ ಸೆಪ್ಟೆಂಬರ್​ವರೆಗಿನ ಒಟ್ಟು ಬಜೆಟ್ ಪ್ರಗತಿಯನ್ನು ನೋಡಿದರೆ, ಒಟ್ಟು ಹಂಚಿಕೆಯಾಗಿರುವ ಅನುದಾನ 2,16,730.84 ಕೋಟಿ ರೂ. ಸೆಪ್ಟೆಂಬರ್​​ವರೆಗೆ 77,883.77 ಕೋಟಿ ರೂ. ವೆಚ್ಚ ಆಗಿದೆ. ಅದರಂತೆ ಶೇ 35.94 ಪ್ರಗತಿ ಸಾಧಿಸಲಾಗಿದೆ. 21,331.65 ಕೋಟಿ ರೂ. ವೆಚ್ಚವಾಗದೇ ಅನುದಾನ ಖರ್ಚಾಗದೇ ಬಾಕಿ ಉಳಿದುಕೊಂಡಿದೆ.

2020-21 ಸಾಲಿನಲ್ಲಿ ಇದೇ ಅವಧಿಗೆ ಒಟ್ಟು 2,19,834.1 ಕೋಟಿ ರೂ. ಬಜೆಟ್ ಹಂಚಿಕೆ ಆಗಿತ್ತು. ಸೆಪ್ಟೆಂಬರ್ ವರೆಗೆ ವಿವಿಧ ಇಲಾಖೆಗಳಿಂದ ಒಟ್ಟು 62065.15 ಕೋಟಿ ರೂ. ವೆಚ್ಚ ಆಗಿದ್ದು, ಶೇ 28.23ರಷ್ಟು ಪ್ರಗತಿ ಸಾಧಿಸಲಾಗಿತ್ತು.

ಇಲಾಖಾವಾರು ಪ್ರಗತಿ ಏನಿದೆ?: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಸೆಪ್ಟೆಂಬರ್​ವರೆಗೆ ಕೇವಲ 40% ಪ್ರಗತಿ ಸಾಧಿಸಿದೆ. ಇನ್ನು ನಗರಾಭಿವೃದ್ಧಿ ಇಲಾಖೆ 42.93%, ಗೃಹ ಇಲಾಖೆ 39.40%, ಕಂದಾಯ ಇಲಾಖೆ 31.94%, ವಸತಿ ಇಲಾಖೆ 22.85%, ಆರೋಗ್ಯ ಇಲಾಖೆ 38.19%, ಲೋಕೋಪಯೋಗಿ ಇಲಾಖೆ 30.84%, ಉನ್ನತ ಶಿಕ್ಷಣ ಇಲಾಖೆ 41%, ಸಮಾಜ ಕಲ್ಯಾಣ ಇಲಾಖೆ 35.90%ರಷ್ಟು ಮಾತ್ರ ಪ್ರಗತಿ ಸಾಧಿಸಿದೆ.

ಗ್ರಾಮೀಣಾಭಿವೃದ್ಧಿ ಇಲಾಖೆ 35.76%, ಕೃಷಿ ಇಲಾಖೆ 19.24%, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 31.43%, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 19.01%, ಸಣ್ಣ ನೀರಾವರಿ ಇಲಾಖೆ 39.09%, ಪಶುಸಂಗೋಪನೆ ಇಲಾಖೆ 43.93%, ಜಲಸಂಪನ್ಮೂಲ ಇಲಾಖೆ 18.51% ಮತ್ತು ಇಂಧನ ಇಲಾಖೆ 49.93% ಪ್ರಗತಿ ಸಾಧಿಸಿದೆ.

ಬಜೆಟ್ ಯೋಜನೆಗಳ ಅನುಷ್ಠಾನ ಹೇಗಿದೆ?: ಕೆಡಿಪಿ ಸಭೆಯಲ್ಲಿ ನೀಡಿದ ಅಂಕಿ - ಅಂಶದಂತೆ 2021-22ನೇ ಸಾಲಿನ ಬಜೆಟ್ ನಲ್ಲಿ ಒಟ್ಟು 266 ಘೋಷಣೆಗಳನ್ನು ಮಾಡಲಾಗಿದೆ. ಇದರಲ್ಲಿ ಹೊಸ ಹಾಗೂ ಮಾರ್ಪಾಡಿತ ಯೋಜನೆಗಳ ಸಂಖ್ಯೆ 192. ಮುಂದುವರಿದ ಯೋಜನೆಗಳ ಸಂಖ್ಯೆ 74.

ಯೋಜನಾ ಇಲಾಖೆಯಲ್ಲಿ ಯೋಜನೆ ಜಾರಿ ಸಂಬಂಧ ಅನುಮತಿಗಾಗಿ 102 ಕಡತಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ 101 ಕಡತಗಳನ್ನು ಸಮ್ಮತಿಸಲಾಗಿದೆ. ಇನ್ನು ಆರ್ಥಿಕ ಇಲಾಖೆಯ ಅನುಮತಿಗಾಗಿ 96 ಕಡತಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ 84 ಕಡತಗಳನ್ನು ಸಮ್ಮತಿಸಲಾಗಿದೆ.

ಒಟ್ಟು 177 ಯೋಜನೆ ಜಾರಿ ಸಂಬಂಧ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಬಜೆಟ್​ನಲ್ಲಿ ಘೋಷಿಸಿದ ಯೋಜನೆಗಳಲ್ಲಿ ಈವರೆಗೆ 7 ಯೋಜನೆಗಳನ್ನು ಕೈ ಬಿಡಲಾಗಿದೆ. ಒಟ್ಟು 82 ಯೋಜನೆಗಳು ಇನ್ನೂ ಜಾರಿಯಾಗದೇ ಬಾಕಿ ಉಳಿದುಕೊಂಡಿದೆ.

ಓದಿ: ಆಟೋದಲ್ಲಿ ಬಿಟ್ಟು ಹೋದ ಬ್ಯಾಗ್ ಹಿಂದಿರುಗಿಸಿ ಮಾನವೀಯತೆ ಮೆರೆದ ಚಾಲಕ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.