ETV Bharat / state

ಬಿಜೆಪಿ ಗೆಲ್ಲಿಸಲು ಪಣ ತೊಟ್ಟ ಸಿಎಂ: ನಾಳೆ ಮತ್ತೆ ಯಶವಂತಪುರದಲ್ಲಿ ಪ್ರಚಾರ - ಯಶವಂತಪುರ ಕ್ಷೇತ್ರ ದಲ್ಲಿ ಸಿಎಂ ಪ್ರಚಾರ

ಉಪಚುನಾವಣ ಕಣ ದಿನೇ ದಿನೇ ರಂಗೇರುತ್ತಿದ್ದು, ಮೂರು ಪಕ್ಷಗಳು ಸಹ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಹರಸಾಹಸ ಪಡುತ್ತಿವೆ. ಇನ್ನು ಸಿಎಂ ಬಿಎಸ್​ವೈ ತಮ್ಮ ಸ್ಥಿರ ಸರ್ಕಾರ ಉಳಿಸಿಕೊಳ್ಳಲು ಶತಾಯು ಗತಾಯವಾಗಿ ಪ್ರಯತ್ನಿಸುತ್ತಿದ್ದು, ನಾಳೆ ಮತ್ತೆ ಯಶವಂತಪುರ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ.

Yadiyurappa
ಸಿಎಂ ಯಡಿಯೂರಪ್ಪ
author img

By

Published : Nov 29, 2019, 8:00 PM IST

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ಗೆಲ್ಲಿಸಲು ಪಣ ತೊಟ್ಟಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಾಳೆ ಮತ್ತೊಮ್ಮೆ ಯಶವಂತಪುರ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

ಹಾವೇರಿ ಪ್ರವಾಸ ಮುಗಿಸಿ ನಗರಕ್ಕೆ ಹಿಂದಿರುಗುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಾಳೆ ಬೆಂಗಳೂರಿನಲ್ಲಿ ಪ್ರಚಾರ ನಡೆಸಲಿದ್ದು, ಯಶವಂತಪುರ ಕ್ಷೇತ್ರ ವ್ಯಾಪ್ತಿಯ ಹೆಮ್ಮಿಗೆಪುರ, ಕೆಂಗೇರಿ, ಉಲ್ಲಾಳುವಿನಲ್ಲಿ ಪ್ರತ್ಯೇಕವಾಗಿ ಪ್ರಚಾರ ನಡೆಸಲಿದ್ದಾರೆ.

Tomorrow's time table
ನಾಳೆ ದಿನದ ತಾತ್ಕಾಲಿಕ ಪ್ರವಾಸದ ಪಟ್ಟಿ

ಯಶವಂತಪುರ ಕ್ಷೇತ್ರದ ನಂತರ ಮಹಾಲಕ್ಷ್ಮಿ ಲೇಔಟ್ ನಲ್ಲಿ ಪ್ರಚಾರ ನಡೆಸಲಿದ್ದು, ಕ್ಷೇತ್ರ ವ್ಯಾಪ್ತಿಯ ಕುರುಬರಹಳ್ಳಿಯಲ್ಲಿ ಆಯೋಜಿಸಿರುವ ಸಭೆಯಲ್ಲಿ ಭಾಗಿಯಾಗಿ, ಮಹಾಲಕ್ಷ್ಮಿ ಲೇಔಟ್ ಅಭ್ಯರ್ಥಿ ಗೋಪಾಲಯ್ಯ ಪರ ಮತಯಾಚನೆ ಮಾಡಲಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಈ ಭಾಗದಲ್ಲಿ ಪ್ರಚಾರ ನಡೆಸಿದ್ದ ಸಿಎಂ, ನಾಳೆ ಮತ್ತೊಂದು ಸುತ್ತಿನ ಪ್ರಚಾರದ ಮೂಲಕ ಪಕ್ಷದ ಗೆಲುವಿಗೆ ಪ್ರಯತ್ನಿಸಲಿದ್ದಾರೆ.

Intro:PhotoBody:PhotoConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.