ETV Bharat / state

ಹಲವು ಇಲಾಖೆಗಳಿಗೆ ಹೆಚ್​​ಡಿಕೆ ನೀಡಿದಷ್ಟೇ ಆದ್ಯತೆ ನೀಡಿದ ಬಿಎಸ್​ವೈ.. - 2020-21 ಬಜೆಟ್​ ಸುದ್ದಿ

ಹಿಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಬಜೆಟ್ ಗಾತ್ರದ ಶೇ. 11ರಷ್ಟು ಶಿಕ್ಷಣಕ್ಕೆ, ಶೇ.4ರಷ್ಟು ಹಣ ಕಂದಾಯ ಹಾಗೂ ಶೇ. 1ರಷ್ಟು ವಸತಿ ಇಲಾಖೆಯ ಯೋಜನೆಗಳಿಗೆ ಹಣ ಒದಗಿಸಿದ್ದರು. ಈಗಿನ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಈ ಇಲಾಖೆಗಳಿಗೆ ಅಷ್ಟೇ ಹಣ ಮೀಸಲಿಟ್ಟಿದ್ದಾರೆ.

bsy budget
ಹಲವು ಇಲಾಖೆಗಳಿಗೆ ಹೆಚ್​​ಡಿಕೆ ನೀಡಿದಷ್ಟೇ ಆದ್ಯತೆ ನೀಡಿದ ಬಿಎಸ್​ವೈ
author img

By

Published : Mar 8, 2020, 9:50 PM IST

ಬೆಂಗಳೂರು : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಂಡಿಸಿರುವ ಆರ್ಥಿಕ ಮುಂಗಡ ಬಜೆಟ್‌ನಲ್ಲಿ ಇಲಾಖಾವಾರು ಅನುದಾನ ಹಂಚಿಕೆಯಲ್ಲಿ ಕಳೆದ ಬಜೆಟ್‌ಗೆ ಹೋಲಿಸಿದರೆ ಅಂತಹ ವ್ಯತ್ಯಾಸ ಕಂಡುಬಂದಿಲ್ಲ, ಪ್ರಮುಖ ಇಲಾಖೆಗಳಾದ ಕಂದಾಯ, ವಸತಿ, ಶಿಕ್ಷಣ ಇಲಾಖೆಗೆ ಹಿಂದಿನ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ನೀಡಿದಷ್ಟೇ ಪ್ರಮಾಣದ ಅನುದಾನವನ್ನು ಯಡಿಯೂರಪ್ಪ ನೀಡಿದ್ದಾರೆ.

ಹಿಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಬಜೆಟ್ ಗಾತ್ರದ ಶೇ. 11ರಷ್ಟು ಶಿಕ್ಷಣಕ್ಕೆ, ಶೇ.4ರಷ್ಟು ಹಣ ಕಂದಾಯ ಹಾಗೂ ಶೇ. 1ರಷ್ಟು ವಸತಿ ಇಲಾಖೆಯ ಯೋಜನೆಗಳಿಗೆ ಹಣ ಒದಗಿಸಿದ್ದರು. ಈಗಿನ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಈ ಇಲಾಖೆಗಳಿಗೆ ಅಷ್ಟೇ ಹಣ ಮೀಸಲಿಟ್ಟಿದ್ದಾರೆ.

ಕಂದಾಯ : ಹೆಚ್​ಡಿಕೆ ಕಳೆದ ಬಜೆಟ್​ನಲ್ಲಿ ಕಂದಾಯ ಇಲಾಖೆಗೆ 10293 ಕೋಟಿ ರೂ. ಗಳನ್ನು ನೀಡಿದ್ದರು. ಸಿಎಂ ಯಡಿಯೂರಪ್ಪ‌ 2020-21ನೇ ಸಾಲಿನಲ್ಲಿ ಮಠ ಮಾನ್ಯಗಳಿಗೆ ಯಾವುದೇ ಅನುದಾನ ನೀಡಿಲ್ಲ. ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ‌3060 ಕೋಟಿ, ಸಾರ್ವಜನಿಕರಿಗೆ‌ ಒದಗಿಸುವ ವಿವಿಧ ಪ್ರಮಾಣ ಪತ್ರಗಳನ್ನು ತಕ್ಷಣ ನೀಡಲು ರೂಪಿಸಿರುವ ಸಿದ್ದಸೇವೆ ಯೋಜನೆಗೆ 3 ಕೋಟಿ ಅನುದಾನ ಸೇರಿ ಕಂದಾಯ ಇಲಾಖೆಗೆ 11860 ಕೋಟಿ ರೂ.ಗಳನ್ನು ಒದಗಿಸಿದ್ದಾರೆ.

ವಸತಿ: ವಸತಿ ಇಲಾಖೆಗೆ ಕುಮಾರಸ್ವಾಮಿ ಸರ್ಕಾರ 2990 ಕೋಟಿ ಮೀಸಲಿಟ್ಟಿದ್ದರೆ ಈ ಬಾರಿ ಯಡಿಯೂರಪ್ಪ 2971 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದಾರೆ. ಕುಮಾರಸ್ವಾಮಿ ನೀಡಿದ ಅನುದಾನಕ್ಕಿಂತಲೂ 19 ಕೋಟಿ ಕಡಿಮೆ ಅನುದಾನ ಹಂಚಿಕೆ ಮಾಡಿದ್ದಾರೆ.

ಶಿಕ್ಷಣ : ಶಿಕ್ಷಣ ಇಲಾಖೆಗೆ ಹಿಂದಿನ ಸರ್ಕಾರ 28151 ಕೋಟಿ ನೀಡಿದ್ದರೆ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ 29768 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿಟ್ಟಿದೆ. ಕಳೆದ ಬಾರಿಗಿಂತ 1617 ಕೋಟಿ ರೂ.ಹೆಚ್ಚಿನ ಅನುದಾನ ನೀಡಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆ ಹೊಸ ಯೋಜನೆಗಳ ಘೋಷಿಸಿ, ಹೆಚ್ಚಿನ ಅನುದಾನ ನೀಡುವ ರಿಸ್ಕ್ ತೆಗೆದುಕೊಳ್ಳದ ಸಿಎಂ ಯಡಿಯೂರಪ್ಪ ಕಳೆದ ಬಾರಿಯ ಬಜೆಟ್ ಗಾತ್ರ ಹಾಗೂ ಹಂಚಿಕೆಯನ್ನು ಮುಂದುವರೆಸುವಂತೆ ಬಜೆಟ್ ಮಂಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.