ETV Bharat / state

ಸುಪ್ರೀಂ ತೀರ್ಪಿನ ಬಳಿಕ ಶುಭ'ಮಂಗಳ'.. ಆಮೇಲೆ ಬಿಜೆಪಿ ನಡೆ ನಿರ್ಧಾರ- ಬಿ ಎಸ್ ಯಡಿಯೂರಪ್ಪ - ಸವಾಲು

ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸುತ್ತೇನೆ ಎಂದು ವಿಧಾನ ಸಭೆಯಲ್ಲಿ ಹೇಳಿದ್ದಾರೆ. ಮುಖ್ಯಮಂತ್ರಿಗಳ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಈಗಾಗಲೇ 18 ಶಾಸಕರನ್ನು ಕಳೆದುಕೊಂಡಿರುವ ಅವರು ಬಹುಮತ ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.

ಯಡಿಯೂರಪ್ಪ
author img

By

Published : Jul 13, 2019, 8:21 PM IST

ಬೆಂಗಳೂರು: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬಹುಮತ ಸಾಬೀತು ಪಡಿಸುತ್ತೇವೆ ಎಂದು ಹೇಳಿರುವ ಮಾತಿಗೆ ನಮ್ಮ ಸ್ವಾಗತವಿದೆ. ಸುಪ್ರೀಂ ತೀರ್ಪಿನ ನಂತರ ನಮ್ಮ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿದರು.

ಕುಮಾರಸ್ವಾಮಿ ಬಹುಮತ ಸಾಬೀತುಪಡಿಸಲಿ.. ಯಡಿಯೂರಪ್ಪ ಸವಾಲು

ಯಲಹಂಕದ ಹೊನ್ನೇನಹಳ್ಳಿಯ ರಮಡ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಬಿಜೆಪಿ ಶಾಸಕರೊಂದಿಗೆ ಬಿ ಎಸ್‌ ಯಡಿಯೂರಪ್ಪ ಸಭೆ ನಡೆಸಿದರು. ಸಭೆ ನಡೆಸಿ ವಾಪಸ್ ತೆರಳುವ ವೇಳೆ ಮಾತನಾಡಿದ ಯಡಿಯೂರಪ್ಪ, ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸುತ್ತೇನೆ ಎಂದು ವಿಧಾನಸಭೆಯಲ್ಲಿ ಹೇಳಿದ್ದಾರೆ. ಸಿಎಂ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಈಗಾಗಲೇ 18 ಶಾಸಕರನ್ನು ಕಳೆದುಕೊಂಡಿರುವ ಅವರು ಬಹುಮತ ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.

ಸುಪ್ರೀಂಕೋರ್ಟ್​​​ನಲ್ಲಿ ಮಂಗಳವಾರ ಮೊದಲನೇ ಕೇಸ್ ನಮ್ಮದು. 10 ಜನರ ಜೊತೆಗೆ ಶಾಸಕರಾದ ಮುನಿರತ್ನ, ಡಾ. ಸುಧಾಕರ್, ಆನಂದ್‌ಸಿಂಗ್, ಎಂಟಿಬಿ ನಾಗರಾಜ್, ರೋಷನ್‌ಬೇಗ್ 10ಜನರ ಜೊತೆಗೆ ನಮ್ಮ 5ಜನರನ್ನು ಸೇರಿಸಬೇಕೆಂದು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದಾರೆ. ಪಕ್ಷೇತರ ಶಾಸಕರಾದ ನಾಗೇಶ್, ಶಂಕರ್ ಬಿಜೆಪಿಗೆ ಬೆಂಬಲ ಸೂಚಿಸಿ ಮುಂಬೈಗೆ ಹೋಗಿದ್ದಾರೆ. ವಿಪಕ್ಷದ ಕಡೆ ಕೂರಲು ಅವಕಾಶ ಕೋರಿ ಸ್ಪೀಕರ್​​ಗೆ ಪತ್ರ ಕಳಿಸಿದ್ದಾರೆ. ರಾಮಲಿಂಗಾರೆಡ್ಡಿ ಸೇರಿ ಸಮ್ಮಿಶ್ರ ಸರ್ಕಾರದ 18 ಶಾಸಕರ ಬಗ್ಗೆ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಮಾತನಾಡುವುದಾಗಿ ಹೇಳಿದರು.

ಸಚಿವ ಡಿ ಕೆ ಶಿವಕುಮಾರ್ ಸ್ವತಃ ತಾವೇ ಎಂಟಿಬಿ ನಾಗರಾಜ್ ಅವರ ಮನೆಗೆ ತೆರಳಿ ಮಾತುಕತೆ ನಡೆಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಎಸ್‌ವೈ, ಎಂಟಿಬಿ ನಾಗರಾಜ್ ಈಗಾಗಲೇ ಸುಪ್ರೀಂನಲ್ಲಿ ದಾವೆ ಹೂಡಿರುವುದರಿಂದ, ಹಿಂದೆ ಸರಿಯಲು ಆಗುವುದಿಲ್ಲ. ಹೀಗಾಗಿ ಡಿ ಕೆ ಶಿವಕುಮಾರ್ ಭೇಟಿಯಿಂದ ಯಾವುದೇ ಪ್ರಯೋಜನವಿಲ್ಲ. ಈಗಾಗಲೇ ಬಹುಮತವನ್ನು ಕಳೆದುಕೊಂಡಿರುವ ಹೆಚ್ ಡಿ ಕುಮಾರಸ್ವಾಮಿ ಇನ್ನೂ ಕೆಲವೇ ದಿನಗಳಲ್ಲಿ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂದು ಯಡಿಯೂರಪ್ಪ ಮಾರ್ಮಿಕವಾಗಿ ನುಡಿದರು.

Intro:ಎಚ್ಡಿಕೆ ಬಹುಮತ ಸಾಬೀತುಪಡಿಸಲಿ: ಸುಪ್ರೀಂ ತೀರ್ಪಿನ ನಂತರ ನಮ್ಮ ಮುಂದಿನ ಹೆಜ್ಜೆ ಇಡುತ್ತೇವೆ ಬಿಎಸ್ವೈ

ಬೆಂಗಳೂರು:ರಿವರ್ಸ್ ಆಪರೇಷನ್ ಭೀತಿಯಿಂದ ಯಲಹಂಕದ ಹೊನ್ನೇನಹಳ್ಳಿಯ ರಮಡ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿರುವ ಬಿಜೆಪಿ ಶಾಸಕರೊಂದಿಗೆ ಬಿಎಸ್.ಯಡಿಯೂರಪ್ಪ ಸಭೆನಡೆಸಿದರು. ಸಭೆ ನಡೆಸಿದ ಬಳಿಕ ಬಹಳ ಆತ್ಮವಿಶ್ವಾಸದಿಂದ ಹೊರ ಬಂದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಹುಮತ ಸಾಬೀತು ಪಡಿಸುತ್ತೇವೆ ಎಂದು ಹೇಳಿರುವ ಮಾತಿಗೆ ನಮ್ಮ ಸ್ವಾಗತವಿದೆ. ಸುಪ್ರೀಂ ತೀರ್ಪಿನ ನಂತರ ನಮ್ಮ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದರು.

ರಮಡ ರೆಸಾರ್ಟ್ ನಲ್ಲಿ ಬಿಜೆಪಿ ಶಾಸಕರೊಂದಿಗೆ ಸಭೆ ನಡೆಸಿ ವಾಪಾಸ್ ತೆರಳುವ ವೇಳೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸುತ್ತೇನೆ ಎಂದು ವಿಧಾನ ಸಭೆಯಲ್ಲಿ ಹೆಳಿದ್ದಾರೆ. ಮುಖ್ಯಮಂತ್ರಿಗಳ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಈಗಾಗಲೇ 18 ಶಾಸಕರನ್ನು ಕಳೆದುಕೊಂಡಿರುವ ಅವರು ಬಹುಮತ ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.

Body:ಸುಪ್ರೀಂ ಕೋರ್ಟ್ ನಲ್ಲಿ ಮಂಗಳವಾರ ಮೊದಲನೇ ಕೇಸ್ ನಮ್ಮದು. 10 ಜನರ ಜೊತೆಗೆ ಶಾಸಕರಾದ ಮುನಿರತ್ನ, ಸುಧಾಕರ್, ಆನಂದ್ ಸಿಂಗ್, ಎಂಟಿಬಿ ನಾಗರಾಜ್, ರೋಷನ್ ಬೇಗ್ 10ಜನರ ಜೊತೆಗೆ ನಮ್ಮ 5ಜನರನ್ನು ಸೇರಿಸಬೇಕೆಂದು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದಾರೆ. ಪಕ್ಷೇತರ ಶಾಸಕರಾದ ನಾಗೇಶ್, ಶಂಕರ್ ಬಿಜೆಪಿಗೆ ಬೆಂಬಲ ಸೂಚಿಸಿ ಮುಂಬೈಗೆ ಹೋಗಿದ್ದಾರೆ. ವಿರೋಧ ಪಕ್ಷದ ಕಡೆ ಕೂರಲು ಅವಕಾಶ ಕೋರಿ ಸ್ಪೀಕರ್ ಗೆ ಪತ್ರ ಕಳಿಸಿದ್ದಾರೆ.ರಾಮಲಿಂಗಾರೆಡ್ಡಿ ಸೇರಿದಂತೆ ಸಮ್ಮಿಶ್ರ ಸರ್ಕಾರ18ಶಾಸಕರನ್ನು ಮಒಟ್ಟು ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ನಮ್ಮ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಹೇಳಿದರು.

Conclusion:ಡಿಕೆಶಿ ಭೇಟಿ ಪ್ರಯೋಜನವಿಲ್ಲ: ಡಿ.ಕೆ.ಶಿವಕುಮಾರ್ ಎಂ.ಟಿ.ಬಿ ನಾಗರಾಜ್ ಮನೆಗೆ ತೆರಳಿ ಭೇಟಿ ಮಾಡಿ ಮಾತುಕತೆ ನಡೆಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಂ.ಟಿ.ಬಿ ನಾಗರಾಜ್ ಈಗಾಗಲೆ ಸುಪ್ರೀಂ ನಲ್ಲಿ ದಾವೆ ಹೂಡಿರುವುದರಿಂದ ಹಿಂದೆ ಸರಿಯಲು ಆಗುವುದಿಲ್ಲ. ಹೀಗಾಗಿ, ಡಿ.ಕೆ.ಶಿವಕುಮಾರ್ ಭೇಟಿಯಿಂದ ಯಾವುದೇ ಪ್ರಯೋಜನವಿಲ್ಲ.ಈಗಾಗಲೆ ಬಹುಮತವನ್ನು ಕಳೆದುಕೊಂಡಿರುವ ಎಚ್.ಡಿ.ಕುಮಾರಸ್ವಾಮಿ ಇನ್ನೂ ಕೆಲವೆ ದಿನಗಳಲ್ಲಿ ಸ್ಥಾನದಿಂದ ಕೆಳಗಿಯುತ್ತಾರೆ ಎಂದು ಬಿಎಸ್ವೈ ಮಾರ್ಮಿಕವಾಗಿ ನುಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.