ಬೆಂಗಳೂರು: ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಚೇತರಿಸಿಕೊಂಡಿದ್ದು ಕೃತಕ ಉಸಿರಾಟ ತೆರವು ಮಾಡಲಾಗಿದೆ. ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿರುವ ಹಿನ್ನಲೆಯಲ್ಲಿ ಅತಿಥಿಗಳ ಭೇಟಿಗೆ ಅವಕಾಶ ಕಲ್ಪಿಸಿದ್ದು, ಸಿಎಂ ಭೇಟಿ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಸ್ಪತ್ರೆಗೆ ಭೇಟಿ ನೀಡಿದರು.
ಕಳೆದ ರಾತ್ರಿ ಉಸಿರಾಟದ ತೊಂದರೆ ಇದ್ದ ಕಾರಣಕ್ಕೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಿದ್ದ ವೈದ್ಯರು ಬೆಳಗ್ಗೆ ಉಸಿರಾಟ ಸಹಜ ಸ್ಥಿತಿಗೆ ಮರಳಿದ್ದರಿಂದ ಕೃತಕ ಉಸಿರಾಟ ವ್ಯವಸ್ಥೆ ತೆರವು ಮಾಡಿದ್ದು, ಬಳಲಿಕೆ, ಆಯಾಸ, ಜ್ವರಕ್ಕೆ ಚಿಕಿತ್ಸೆ ಮುಂದುವರೆಸಿದ್ದಾರೆ.
![BS Yediyurappa inquired about SM Krishna health](https://etvbharatimages.akamaized.net/etvbharat/prod-images/kn-bng-04-smk-bsy-meet-script-7208080_25092022161811_2509f_1664102891_811.jpg)
ಗಣ್ಯರ ಭೇಟಿಗೆ ವೈದ್ಯರು ಅನುಮತಿಸಿದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿದ್ದ ಯಡಿಯೂರಪ್ಪ ಅವರು ಎಸ್ ಎಂ ಕೃಷ್ಣ ಅವರ ಯೋಗಕ್ಷೇಮ ವಿಚಾರಿಸಿದರು. ಕೃಷ್ಣ ಅವರ ಕೈಹಿಡಿದು ಕುಶಲೋಪರಿ ವಿಚಾರಿಸಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು. ಕೆಲಕಾಲ ಮಾತನಾಡಿ, ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದರು.
ಇದನ್ನೂ ಓದಿ : ಎಸ್ಎಂ ಕೃಷ್ಣ ಚೇತರಿಸಿಕೊಳ್ಳುತ್ತಿದ್ದಾರೆ, ಯಾರೂ ಆತಂಕಕ್ಕೆ ಒಳಗಾಗಬೇಡಿ: ಸಿಎಂ ಬೊಮ್ಮಾಯಿ