ETV Bharat / state

ಬೆಂಗಳೂರು: ವಿದ್ಯಾರ್ಥಿನಿಯರಿಗೆ ಉಪಟಳ ನೀಡಿದ ಬಾಲಕ ವಶಕ್ಕೆ - ಅಶ್ಲೀಲವಾಗಿ ಮಾತನಾಡಿ ಕಿರುಕುಳ

ರಾತ್ರಿ ಸಮಯದಲ್ಲಿ ವಿದ್ಯಾರ್ಥಿನಿಯರ ರೂಮ್​ ಬಳಿ ಬಂದಿದ್ದ ಬಾಲಕನೊಬ್ಬ ಅಸಭ್ಯವಾಗಿ ವರ್ತಿಸಿ ಆತಂಕ ಉಂಟುಮಾಡಿದ್ದನಂತೆ.

boy was arrested for misbehaving  misbehaving near the girls room  Boy misbehaving near the girls room  Bengaluru crime news  ವಿದ್ಯಾರ್ಥಿನಿಯರ ರೂಮ್ ಬಳಿ ಉಪಟಳ ಕೊಟ್ಟ ಬಾಲಕ  ರೂಮ್ ಬಳಿ ಉಪಟಳ ಕೊಟ್ಟ ಬಾಲಕನ ಬಂಧನ  ವಿದ್ಯಾರ್ಥಿನಿ ರೂಮ್​ ಬಳಿ ಬಾಲಕನೊಬ್ಬ ಅಸಭ್ಯವಾಗಿ ವರ್ತಿಸಿ  ಅಸಭ್ಯವಾಗಿ ವರ್ತಿಸಿ ಉಪಟಳ ಕೊಟ್ಟ ಆತಂಕಕಾರಿ ಘಟನೆ  ಅಶ್ಲೀಲವಾಗಿ ಮಾತನಾಡಿ ಕಿರುಕುಳ  ಸದಾಶಿವನಗರ ಠಾಣೆಗೆ ಯುವತಿಯರು ನೀಡಿದ್ದ ದೂರಿನನ್ವಯ ಪ್ರಕರಣ
ವಿದ್ಯಾರ್ಥಿನಿಯರ ರೂಮ್ ಬಳಿ ಉಪಟಳ ಕೊಟ್ಟ ಬಾಲಕನ ಬಂಧನ
author img

By

Published : Apr 7, 2023, 3:07 PM IST

ಬೆಂಗಳೂರು : ವಿದ್ಯಾರ್ಥಿನಿಯರ ಕೊಠಡಿ ಬಳಿ ಬಂದಿದ್ದ ಅಪ್ರಾಪ್ತ ಅಸಭ್ಯವಾಗಿ ವರ್ತಿಸಿ ಉಪಟಳ ನೀಡಿರುವ ಘಟನೆ ಸದಾಶಿವನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಏಪ್ರಿಲ್ 1ರ ರಾತ್ರಿ 9 ಗಂಟೆಯ ಸುಮಾರಿಗೆ ಮನೆಗೆ ಬರುತ್ತಿದ್ದ ಬಿಹಾರ ಮೂಲದ ವಿದ್ಯಾರ್ಥಿನಿ ಸೇರಿದಂತೆ ಮೂವರಿಗೆ ಎದುರಾದ ಆರೋಪಿ ಅಶ್ಲೀಲವಾಗಿ ಮಾತನಾಡಿ ಕಿರುಕುಳ ನೀಡಿದ್ದಾನೆ ಎಂದು ದೂರಲಾಗಿದೆ.

ಘಟನೆಯ ವಿವರ: 23 ವರ್ಷದ ಬಿಹಾರ ಮೂಲದ ವಿದ್ಯಾರ್ಥಿನಿ ಮತ್ತು ಆಕೆಯ ಇಬ್ಬರು ಸ್ನೇಹಿತೆಯರು ಸದಾಶಿವನಗರದಲ್ಲಿರುವ ತಮ್ಮ ಮನೆಗೆ ಬಂದಾಗ ಬಾಲಕ ನಮ್ಮ ಮನೆಯ ಬಾಗಿಲ ಬಳಿ ನಿಂತು ಕೆಟ್ಟ ರೀತಿಯಲ್ಲಿ ವರ್ತಿಸುತ್ತಿದ್ದ. ನಾವು ತಕ್ಷಣ ರೂಮ್‌ನೊಳಗೆ ಸೇರಿಕೊಂಡು ಬಾಗಿಲು ಲಾಕ್ ಮಾಡಿಕೊಂಡೆವು. ನಾವು ಆತನನ್ನು ಯಾರೆಂದು ಕೇಳಿದಾಗ ತನ್ನ ಹೆಸರು ಹೇಳಿದ್ದಾನೆ. ಬಳಿಕ ಬಾಗಿಲು ತೆರೆಯಿರಿ, ವಿಡಿಯೋ ತೋರಿಸುತ್ತೇನೆ ಎಂದಿದ್ದಾನೆ. ಬಾಗಿಲು ತೆರೆಯಲು ಆತ ಯತ್ನಿಸಿದ. ಇದರಿಂದ ಗಾಬರಿಗೊಂಡು ಸ್ನೇಹಿತರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡೆವು. ಅಷ್ಟೊತ್ತಿಗಾಗಲೇ ಸ್ಥಳದಿಂದ ಪರಾರಿಯಾಗಿದ್ದ ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ.

ಸ್ನೇಹಿತರ ಸಹಾಯದಿಂದ ಸದಾಶಿವನಗರ ಠಾಣೆಗೆ ಯುವತಿಯರು ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಬಾಲಕನನ್ನು ವಶಕ್ಕೆ ಪಡೆದು ಸರ್ಕಾರಿ ಬಾಲ ಮಂದಿರಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಚಾಕೊಲೇಟ್​ ತರಲು ತಡ ಮಾಡಿದ ಪತಿ, ನೇಣಿಗೆ ಶರಣಾದ ಪತ್ನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.