ETV Bharat / state

ಕೋವಿಡ್​ ವ್ಯಾಕ್ಸಿನ್​ ಎರಡೂ ಡೋಸ್​ ಪೂರ್ಣಗೊಳ್ಳಲು ಬೇಕು 8 ವರ್ಷ... ಡೇಟಾ ಅನಾಲಿಸ್ಟ್​ ಬಯಲು ಮಾಡಿದ ಸತ್ಯ! - ಕೋವಿಡ್​ ವ್ಯಾಕ್ಸಿನ್ ಡೋಸ್​

ಡೆಡ್ಲಿ ವೈರಸ್ ಕೊರೊನಾ ತಡೆಗಟ್ಟಲು ಲಸಿಕೆ ನೀಡುವ ಪ್ರಕ್ರಿಯೆ ನಡೆಯುತ್ತಿದ್ದು, ಆದರೆ ದೇಶದಲ್ಲಿ ಪ್ರತಿಯೊಬ್ಬರಿಗೂ ವ್ಯಾಕ್ಸಿನ್​ ಸರಿಯಾಗಿ ಲಭ್ಯವಾಗಲು(ಎರಡು ಡೋಸ್​​) ಬರೋಬ್ಬರಿ 8 ವರ್ಷಗಳ ಕಾಲಾವಕಾಶಬೇಕು ಎಂಬ ವರದಿವೊಂದು ಬಹಿರಂಗಗೊಂಡಿದೆ.

covid vaccine
covid vaccine
author img

By

Published : Jul 13, 2021, 12:27 AM IST

Updated : Jul 13, 2021, 6:25 AM IST

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್​ ವಿರುದ್ಧದ ರಾಮಬಾಣವಾಗಿರುವ ಕೋವಿಡ್​ ವ್ಯಾಕ್ಸಿನೇಷನ್​ ನೀಡುವ ಕಾರ್ಯ ನಡೆಯುತ್ತಿದ್ದು, ಲಸಿಕೆ ಹಂಚಿಕೆ ಇದೇ ಪ್ರಮಾಣದಲ್ಲಿ ನಡೆಯುತ್ತಿದ್ದರೆ ಎಲ್ಲರಿಗೂ ಲಸಿಕೆ ಸಿಗಲು ಇನ್ನೂ ಎಂಟು ವರ್ಷ(ಎರಡು ಡೋಸ್​​​​) ತೆಗೆದುಕೊಳ್ಳಲಿದೆ ಎಂಬ ಅಸಲಿ ಸತ್ಯ ವರದಿಯೊಂದರಲ್ಲಿ ಬಹಿರಂಗಗೊಂಡಿದೆ.

Data Analyst
ಡೇಟಾ ಅನಾಲಿಸ್ಟ್​​ ಬಯಲು ಮಾಡಿದ ಸತ್ಯ

ಮಹಾರಾಷ್ಟ್ರ ಮೂಲದ ಡೇಟಾ ಅನಾಲಿಸ್ಟ್ ಈ ವರದಿ ಸಿದ್ಧಪಡಿಸಿದೆ. ರಾಜ್ಯದ ಖ್ಯಾತ ವೈದ್ಯರು ಹಾಗೂ ಜಿನೋಮಿಕ್ ಸರ್ವೈಲೆನ್ಸ್ ಕಮೀಟಿ ಸದಸ್ಯರಾಗಿರುವ ಡಾ.ವಿಶಾಲ್ ರಾವ್ ಹೇಳುವ ಪ್ರಕಾರ, ಈ ವ್ಯಾಕ್ಸಿನೇಷನ್​ ನೀಡಿಕೆ ಪ್ರಮಾಣದ ವಿಶ್ಲೇಷಣೆ ಪ್ರತಿ ರಾಜ್ಯಗಳಲ್ಲಿಯೂ ಆಗುತ್ತಿದೆ. ವ್ಯಾಕ್ಸಿನ್​ ಹಾಕುವ ಪ್ರಕ್ರಿಯೆ ಹೇಗೆ ನಡೆಯುತ್ತಿದೆ? ಎಷ್ಟು ಬೇಗ ಎಲ್ಲರಿಗೂ ತಲುಪಬಹುದು ಎಂಬ ಅನಾಲಿಸಿಸ್ ನಡೆಯುತ್ತಿದೆ. ಜೊತೆಗೆ ಈ ಅಂಕಿ-ಅಂಶಗಳು ಪ್ರತೀ ದಿನ ಬದಲಾಗುವ ಸಾಧ್ಯತೆಯೂ ಇರುತ್ತದೆ. ದೇಶದಲ್ಲಿ 3 ಹಾಗೂ 4ನೇ ಅಲೆ ಬರುವ ಮೊದಲೇ ಈ ಸಿದ್ಧತೆ ಬೇಕಾಗಿದೆ. ಹೀಗಾಗಿ ಹೆಚ್ಚು ಜನ ಬಂದು ವ್ಯಾಕ್ಸಿನ್ ಪಡೆಯಬೇಕು. ಮುಂಬರುವ ದಿನಗಳಲ್ಲಿ ವ್ಯಾಕ್ಸಿನ್ ಲಭ್ಯತೆಯೂ ವೇಗ ಪಡೆಯುವ ಸಾಧ್ಯತೆ ಇದೆ ಎಂದಿದ್ದಾರೆ.

ಮಹಾರಾಷ್ಟ್ರದ ದತ್ತಾಂಶಗಳನ್ನ ತಜ್ಞರು ಹಾಗೂ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಸೇರಿ ಚಾರ್ಟ್ ಸಿದ್ಧಪಡಿಸಿದ್ದಾರೆ. ಬೇರೆ ಬೇರೆ ರಾಜ್ಯದಲ್ಲಿ ಅಧ್ಯಯನ ಮಾಡಲು ಇದನ್ನು ಸಿದ್ಧಪಡಿಸಲಾಗಿದೆ. ಈ ಬಗ್ಗೆ ರಾಜ್ಯದ ವೈದ್ಯಕೀಯ ತಜ್ಞರ ಜೊತೆ ಚರ್ಚೆಯೂ ನಡೆದಿದೆ ಎಂದರು. 18 ವರ್ಷ ಕೆಳಗಿನವರಿಗೆ ಈವರೆಗೆ ಲಸಿಕೆ ನೀಡುತ್ತಿಲ್ಲ. 18-44 ವರ್ಷದವರು ರಾಜ್ಯದಲ್ಲಿ ಶೇಕಡಾ 80 ರಷ್ಟು ಜನಸಂಖ್ಯೆ ಇದ್ದು, 45 ವರ್ಷ ಮೇಲ್ಪಟ್ಟವರು 20 ಶೇಕಡಾ ಜನಸಂಖ್ಯೆ ಇದೆ. ಈ ನಿಟ್ಟಿನಲ್ಲಿ 45 ವರ್ಷ ಮೇಲ್ಪಟ್ಟವರಲ್ಲಿ ಶೇ 66ರಷ್ಟು ಜನ ಈಗಾಗಲೇ ಲಸಿಕೆ ಪಡೆದಿದ್ದಾರೆ.

Data Analyst
ಕೋವಿಡ್​ನ ಎರಡು ಡೋಸ್ ನೀಡಲು ಬೇಕು 8 ವರ್ಷ

ಆದರೆ 18-44 ವರ್ಷದವರು ಕೇವಲ ಶೇ. 20ರಷ್ಟು ಜನರು ಮಾತ್ರ ವ್ಯಾಕ್ಸಿನ್ ಪಡೆದಿದ್ದಾರೆ. ಹೀಗಾಗಿ ರಾಜ್ಯದ ಜನಸಂಖ್ಯೆ ಹಾಗೂ ಈಗ ವ್ಯಾಕ್ಸಿನೇಷನ್ ನಡೆಯುತ್ತಿರುವ ಪ್ರಮಾಣ ಗಣನೆಗೆ ತೆಗೆದುಕೊಂಡಾಗ ವ್ಯಾಕ್ಸಿನ್ ಪ್ರಮಾಣ ಶೇ. 65ರಷ್ಟು ತಲುಪಲು ಒಂದು ವರ್ಷ ಅವಧಿ ಬೇಕಾಗುತ್ತದೆ. ಎರಡನೇ ಡೋಸ್ ಹೆಚ್ಚು ಪೆಂಡಿಂಗ್ ಇರುವ ಕಾರಣ, ಇನ್ನೂ ಹೆಚ್ಚು ಕಾಲಾವಕಾಶ ತೆಗೆದುಕೊಳ್ಳುತ್ತದೆ. ಜನವರಿಯಿಂದ ವ್ಯಾಕ್ಸಿನ್ ಆರಂಭಿಸಿದ್ದರೂ ಇನ್ನೂ ಒಂದು ಡೋಸ್ ಕೂಡಾ ಎಲ್ಲರನ್ನೂ ತಲುಪಿಲ್ಲ. ಇದಕ್ಕೆ ಒಂದು ವರ್ಷದ ಅವಧಿ ಹಿಡಿಯುತ್ತಿದೆ. ಈ ಎಲ್ಲಾ ಜನರಿಗೂ ಎರಡನೇ ಡೋಸ್ ಕೊಡಬೇಕಾಗುತ್ತದೆ. ಆದರೆ ಇದರ ಅಂತರ ಹೆಚ್ಚಾಗುತ್ತಾ ಹೋಗುತ್ತದೆ. ಎರಡನೇ ಡೋಸ್​ನ ಬೇಡಿಕೆಯೂ ಹೆಚ್ಚುವ ಕಾರಣ, ಹೆಚ್ಚು ಸಮಯ ತೆಗೊಳ್ಳಬಹುದು ಎಂದರು.

  • ಪ್ರಮುಖಾಂಶಗಳು:
    ರಾಜ್ಯದ ವ್ಯಾಕ್ಸಿನ್ ಹಂಚಿಕೆ ಲೆಕ್ಕಾಚಾರ ಹೀಗಿದೆ
  • 18 ರಿಂದ 44 ವರ್ಷದ 1,24,868 ಜನರಿಗೆ ಪ್ರತೀ ದಿನ ಮೊದಲನೇ ಡೋಸ್ ವಿತರಣೆ
  • 45 ಮೇಲ್ಪಟ್ಟವರಿಗೆ 27,383 ವ್ಯಾಕ್ಸಿನ್ ವಿತರಣೆ
    ಎರಡನೇ ಡೋಸ್
  • 18 ರಿಂದ 44 ವಯಸ್ಸಿನ ಸರಾಸರಿ 7,281 ಜನರಿಗೆ ಎರಡನೇ ಡೋಸ್ ವಿತರಣೆ
  • 45 ಮೇಲ್ಪಟ್ಟವರಿಗೆ 63,513 ಜನರಿಗೆ ಎರಡನೇ ಡೋಸ್ ವ್ಯಾಕ್ಸಿನ್ ವಿತರಣೆ

ಈವರೆಗೆ 2.23 ಲಕ್ಷ ವ್ಯಾಕ್ಸಿನ್ ಡೋಸ್ ನೀಡಲಾಗಿದೆ. ಈ ಪೈಕಿ 1.52 ಲಕ್ಷ ಮೊದಲನೇ ಡೋಸ್, 70 ಲಕ್ಷ ಎರಡನೇ ಡೋಸ್

covid vaccine
ಡೇಟಾ ಅನಾಲಿಸ್ಟ್​​​ನಲ್ಲಿ ಮಹತ್ವದ ಮಾಹಿತಿ
ಬಾಕಿ ಉಳಿದುಕೊಂಡಿರುವವರು ಎಷ್ಟು ಗೊತ್ತಾ?
  • ಮೊದಲನೇ ಡೋಸ್ ಪಡೆಯಲು ಬಾಕಿ ಇರುವ 18 ರಿಂದ 44 ವರ್ಷದ ಜನರು: ಒಟ್ಟು 2,51,84,357
  • ಮೊದಲನೇ ಡೋಸ್ ಪಡೆಯಲು ಬಾಕಿ ಇರುವ 45 ವರ್ಷ ಮೇಲ್ಪಟ್ಟವರು: 54,94,944
  • ಎರಡನೇ ಡೋಸ್ ಪಡೆಯಲು ಬಾಕಿ ಇರುವ 18-44 ವಯಸ್ಕರು: 3,24,28,829
  • ಎರಡನೇ ಡೋಸ್ ಪಡೆಯಲು ಬಾಕಿ ಇರುವ 45 ವರ್ಷ ಮೇಲ್ಪಟ್ಟವರು: 1,32,48,073
  • ಶೇ. 65ರಷ್ಟು ಜನರಿಗೆ ಮೊದಲ ಡೋಸ್ ವ್ಯಾಕ್ಸಿನ್ ಹಂಚಲು 1 ವರ್ಷ ಅಗತ್ಯ
  • ಅದೇ ರೀತಿ ಶೇ. 65 ಜನರಿಗೆ ಎರಡನೇ ಡೋಸ್ ವ್ಯಾಕ್ಸಿನ್ ಹಂಚಲು 8 ವರ್ಷ ಬೇಕು
  • ಅಂದಾಜಿನ ಪ್ರಕಾರ 18-44 ವಯಸ್ಸಿನ ಶೇ. 65 ಜನರಿಗೆ ವ್ಯಾಕ್ಸಿನ್ ಮೊದಲ ಡೋಸ್ ಕೊಡಲು 131 ದಿನ ಬೇಕು ಅಂದರೆ 4 ತಿಂಗಳು ಸಮಯಾವಕಾಶ
  • 45 ವರ್ಷ ಮೇಲ್ಪಟ್ಟವರಿಗೆ ಶೇ. 65ರಷ್ಟು ಜನರನ್ನು ವ್ಯಾಕ್ಸಿನ್ ತಲುಪಲು 130 ದಿನಗಳು ಅಂದರೆ 4 ತಿಂಗಳು ಕಾಲಾವಕಾಶ
  • 18-44 ವಯಸ್ಸಿನ ಶೇ. 65 ರಷ್ಟು ಜನರಿಗೆ ಎರಡನೇ ಡೋಸ್ ಪಡೆಯಲು 2,895 ದಿನಗಳು, ಒಟ್ಟು 97 ತಿಂಗಳು
  • 45 ವರ್ಷ ಮೇಲ್ಪಟ್ಟವರ ಎರಡನೇ ಡೋಸ್ ವಿತರಣೆಗೆ ಬೇಕು 136 ದಿನಗಳು, ಅಂದರೆ 5 ತಿಂಗಳ ಕಾಲವಕಾಶ
  • ಈ ಪ್ರಕಾರ ಶೇ. 65ರಷ್ಟು ಜನರಿಗೆ ಮೊದಲನೇ ಡೋಸ್​ಗೆ 1 ವರ್ಷ, ಎರಡನೇ ಡೋಸ್ ಗೆ 8 ವರ್ಷ
  • 18 ಮೇಲ್ಪಟ್ಟು ಎಲ್ಲಾ ವಯೋಮಾನದ ಜನರಿಗೆ ಎರಡೂ ಡೋಸ್ ಶೇಕಡಾ 100 ರಷ್ಟು ಜನರನ್ನು ತಲುಪಲು ಬರೋಬ್ಬರಿ 13 ವರ್ಷ ಕಾಲಾವಕಾಶ
  • 18-44 ವಯಸ್ಸಿನವರಿಗೆ 100% ಕವರ್ ಮಾಡಲು ಮೊದಲ ಡೋಸ್ ಕೊಡಲು 202 ದಿನ ಬೇಕು -ಅಂದರೆ 7 ತಿಂಗಳ ಅವಧಿ
  • 18-44 ವಯಸ್ಸಿನವರಿಗೆ 100% ಎರಡನೇ ಡೋಸ್ ಮುಗಿಸಲು 4,454 ದಿನ ಬೇಕು ಅಂದರೆ 148 ತಿಂಗಳ ಅವಧಿ
  • 45 ವರ್ಷ ಮೇಲ್ಪಟ್ಟವರಿಗೆ 100% ಮೊದಲ ಡೋಸ್ ಕೊಡಲು 201 ದಿನ ಬೇಕು, ಎರಡನೇ ಡೋಸ್ ಕೊಡೋದಕ್ಕೆ 209 ದಿನ ಬೇಕು(7 ತಿಂಗಳ ಅವಧಿ)

    16-01-2021 ರಿಂದ 6-07-2021 ರವರೆಗೆ ವ್ಯಾಕ್ಸಿನ್ ಪಡೆದವರ ವಯೋಮಾನಾಧಾರಿತ ವಿವರ
  • 18-44 ವರ್ಷ ಮೇಲ್ಟಟ್ಟ ವಯೋಮಾನದವರ ಅಂದಾಜು ಜನಸಂಖ್ಯೆ 3,26,00,000 , ಈ ಪೈಕಿ ಮೊದಲನೇ ಡೋಸ್ ಪಡೆದವರು ಜನವರಿಯಿಂದ ಜುಲೈವರೆಗೂ 74,15,643 ಜನ ವ್ಯಾಕ್ಸಿನ್ ಪಡೆದಿದ್ದು, ಅಂದರೆ ಶೇ. 22.75ರಷ್ಟು ಪೂರ್ಣಗೊಂಡಿದೆ.
  • ಅದೇ ರೀತಿ ಈ ವಯಸ್ಸಿನ ಎರಡನೇ ಡೋಸ್ ಪಡೆದವರು 1,71,171 ಜನರಾಗಿದ್ದು, ಒಟ್ಟು ಶೇ.0.53 ಪೂರ್ಣ
  • 45 ವರ್ಷ ಮೇಲ್ಪಟ್ಟವರು ರಾಜ್ಯದಲ್ಲಿ 1,66,00,000 ಜನರಿದ್ದು, ಈ ಪೈಕಿ ಮೊದಲನೇ ಡೋಸ್ ಪಡೆದವರು 1,11,05,056 ಅದರೆ ಶೇ.66.90 ಪೂರ್ಣ
  • ಎರಡನೇ ಡೋಸ್ ಪಡೆದವರು 33,51,927 ಜನ, ಒಟ್ಟು ಶೇ. 20.19 ಮಾತ್ರ

    ಹಾಗಿದ್ರೆ ವ್ಯಾಕ್ಸಿನೇಷನ್ ಚುರುಕುಗೊಳಿಸಲು ಏನು ಮಾಡ್ಬೇಕು?
  • 18 ಮೇಲ್ಟಟ್ಟವರಿಗೆ ಮೂರು ತಿಂಗಳಳೊಳಗೆ ಶೇ.65 ರಷ್ಟು ವ್ಯಾಕ್ಸಿನ್ ಪೂರ್ಣಗೊಳಿಸಲು ಪ್ರತೀದಿನ 5.52 ಲಕ್ಷ ಡೋಸ್ ವ್ಯಾಕ್ಸಿನ್ ನೀಡಿಕೆ
  • 18 ವರ್ಷ ಮೇಲ್ಪಟ್ಟವರಿಗೆ ಆರು ತಿಂಗಳೊಳಗೆ ಶೇ. 65 ರಷ್ಟು ವ್ಯಾಕ್ಸಿನ್ ಪೂರ್ಣಗೊಳಿಸಲು ಪ್ರತಿ ದಿನ 2.76 ಲಕ್ಷ ಡೋಸ್ ನೀಡುವುದು
  • 18 ಮೇಲ್ಟಟ್ಟವರಿಗೆ ಮೂರು ತಿಂಗಳೊಳಗೆ ಶೇ.100 ರಷ್ಟು ವ್ಯಾಕ್ಸಿನ್ ಪೂರ್ಣಗೊಳಿಸಲು ಪ್ರತೀದಿನ 8 ಲಕ್ಷ ಡೋಸ್​
  • 18 ವರ್ಷ ಮೇಲ್ಪಟ್ಟವರಿಗೆ ಆರು ತಿಂಗಳೊಳಗೆ ಶೇ. 100 ರಷ್ಟು ಪೂರ್ಣಗೊಳಿಸಲು ಪ್ರತಿ ದಿನ 4 ಲಕ್ಷದ 24 ಸಾವಿರ ಡೋಸ್
  • ರಾಜ್ಯದ ಶೇ. 30ರಷ್ಟು ಜನಸಂಖ್ಯೆ ಹೊಂದಿರುವ 18 ವರ್ಷದ ಕೆಳಗಿನವರನ್ನು ಈ ವ್ಯಾಕ್ಸಿನ್ ಲೆಕ್ಕಾಚಾರದ ವ್ಯಾಪ್ತಿಗೆ ತರಲಾಗಿಲ್ಲ.

Last Updated : Jul 13, 2021, 6:25 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.