ETV Bharat / state

ಬೊಮ್ಮನಹಳ್ಳಿ ಮತಕ್ಷೇತ್ರದ 7500 ಮತದಾರರು ಬೆಂಗಳೂರು ದಕ್ಷಿಣ ವ್ಯಾಪ್ತಿಗೆ ಸೇರ್ಪಡೆ: ಶಾಸಕ ಸತೀಶ್ ರೆಡ್ಡಿ ಆಕ್ರೋಶ

ಬೊಮ್ಮನಹಳ್ಳಿ ಮತಕ್ಷೇತ್ರದ ಮತದಾರರನ್ನು ಬೆಂಗಳೂರು ದಕ್ಷಿಣಕ್ಕೆ ಸೇರ್ಪಡೆಗೊಳಿಸಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಗೆ ಕಾರಣವಾಗಿದೆ ಎಂದು ಶಾಸಕ ಸತೀಶ್ ರೆಡ್ಡಿ ಕಿಡಿಕಾರಿದರು.

ಬೊಮ್ಮನಹಳ್ಳಿ ಮತಕ್ಷೇತ್ರದ 7500 ಮತದಾರರು ಬೆಂಗಳೂರು ದಕ್ಷಿಣ ವ್ಯಾಪ್ತಿಗೆ ಸೇರ್ಪಡೆ: ಶಾಸಕ ಸತೀಶ್ ರೆಡ್ಡಿ ಆಕ್ರೋಶ
Bommanahalli constituency 7,500 voters shift to Bengaluru South: MLA Satish Reddy
author img

By

Published : Sep 10, 2022, 3:57 PM IST

ಬೆಂಗಳೂರು: ಬೊಮ್ಮನಹಳ್ಳಿ ಮತಕ್ಷೇತ್ರದ 7500 ಮತದಾರರನ್ನು ಬೆಂಗಳೂರು ದಕ್ಷಿಣ ವಿಧಾನಸಭಾ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿರುವ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರಲಾಗುತ್ತದೆ ಎಂದು ವಿಧಾನಸಭೆಯ ಮುಖ್ಯ ಸಚೇತಕರಾದ ಶಾಸಕ ಸತೀಶ್ ರೆಡ್ಡಿ ತಿಳಿಸಿದರು.

ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹುಳಿಮಾವು ಭಾಗದಲ್ಲಿ ಬರುವ ಸಾಯಿ ಲೇಔಟ್, ಅಕ್ಷಯಾ ಗಾರ್ಡನ್, ಹಿರಾನಂದಾನಿ ಅಪಾರ್ಟ್​ಮೆಂಟ್​, ಶಿರಡಿ ಸಾಯಿ‌ನಗರ ಭಾಗಗಳಲ್ಲಿನ ಮತದಾರರನ್ನು ಬೆಂಗಳೂರು ದಕ್ಷಿಣಕ್ಕೆ ಸೇರ್ಪಡೆಗೊಳಿಸಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಗೆ ಕಾರಣವಾಗಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ತಿಳಿಸಿದರು.

ಬೊಮ್ಮನಹಳ್ಳಿ ಮತಕ್ಷೇತ್ರದ 7500 ಮತದಾರರು ಬೆಂಗಳೂರು ದಕ್ಷಿಣ ವ್ಯಾಪ್ತಿಗೆ ಸೇರ್ಪಡೆ: ಶಾಸಕ ಸತೀಶ್ ರೆಡ್ಡಿ ಆಕ್ರೋಶ

ಇದನ್ನೂ ಓದಿ: ಬಿಬಿಎಂಪಿ ಮತದಾರರ ಕರಡು ಪಟ್ಟಿ : ಆಕ್ಷೇಪಣೆ ಸಲ್ಲಿಕೆಗೆ ಏಳು ದಿನ ಅವಧಿ ವಿಸ್ತರಣೆ

ಕಳೆದ ಆರೇಳು ವರ್ಷದಲ್ಲಿ ಜನ ವಾಸ ಹೆಚ್ಚಾಗಿದೆ. ಭೌಗೋಳಿಕವಾಗಿ ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ನನ್ನ ಕ್ಷೇತ್ರದ ಮತದಾರರು ಬೇರೆ ಕ್ಷೇತ್ರಕ್ಕೆ ವರ್ಗಾಯಿಸಿರುವುದು ಸರಿಯಲ್ಲ. ಅಲ್ಲಿನ ಮತದಾರರ ಪಟ್ಟಿಯಲ್ಲಿ ಸೇರಿಸಿರುವ ಅಧಿಕಾರಿಗಳ‌ ಮೇಲೆ ಕ್ರಮ ಕೈಗೊಳ್ಳಬೇಕೆಂದು ಶಾಸಕರು ಒತ್ತಾಯಿಸಿದರು.

ಇದೇ ವೇಳೆ, ಚುನಾವಣೆ ವಿಳಂಬವಾಗಲಿ ಎಂಬ ಯಾವುದೇ ಉದ್ದೇಶ ನಮಗಿಲ್ಲ. ಸಮಯಕ್ಕೆ ಸರಿಯಾಗಿಯೇ ಬಿಬಿಎಂಪಿ ಚುನಾವಣೆ ನಡೆಯಲಿದೆ. ಬಿಬಿಎಂಪಿ ಚುನಾವಣೆಗೂ ಇದಕ್ಕೂ ಸಂಬಂಧವಿಲ್ಲ. ಅಧಿಕಾರಿಗಳು ಗೊಂದಲ‌ ಮಾಡಿದ್ದಾರೆ. ಹೀಗಾಗಿಯೇ ಅನಿವಾರ್ಯವಾಗಿ ನ್ಯಾಯಾಲಯದ ಮೆಟ್ಟಿಲೇರಿರುವುದಾಗಿ ಅವರು ಪ್ರಕಟಿಸಿದರು.

ಇದನ್ನೂ ಓದಿ: ಬಿಬಿಎಂಪಿ ವಾರ್ಡ್​ ಪುನರ್​ ವಿಂಗಡಣೆ ಸಮರ್ಥಿಸಿಕೊಂಡ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.