ಬೆಂಗಳೂರು: ಬಿಎಂಟಿಸಿ ಆಗಸ್ಟ್ 10ರೊಳಗೆ ಎಲೆಕ್ಟ್ರಿಕ್ ಬಸ್ (ಇ-ಬಸ್) ಪಡೆಯುವ ಸಾಧ್ಯತೆಯಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಮುನ್ನ, ನಿಗಮವು ಸ್ಮಾರ್ಟ್ ಸಿಟಿ ಯೋಜನೆಯಡಿ 90 ನಾನ್ ಎಸಿ ಇ-ಬಸ್‌ಗಳನ್ನು ರಸ್ತೆಗಳಿಸಲು ತೀರ್ಮಾನಿಸಲಾಗಿತ್ತು. ಆದರೆ ಕೋವಿಡ್ ನಿಂದಾಗಿ ಇ-ಬಸ್‌ಗಳ ಸೇವೆ ಪ್ರಾರಂಭಮಾಡಲು ಸಾಧ್ಯವಾಗಿಲ್ಲ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳು ಆಗಸ್ಟ್ 10 ರೊಳಗೆ, ಇ-ಬಸ್ಸಿನ ಮೊದಲ ಮಾದರಿಯನ್ನು ಟೆಂಡರ್‌ನಲ್ಲಿ ನಿರ್ದಿಷ್ಟಪಡಿಸಿರುವ ಪ್ರಕಾರ ಒದಗಿಸಲಿದ್ದಾರೆ. ನಗರದ ರಸ್ತೆಗಳಲ್ಲಿ ಕಾರ್ಯನಿರ್ವಹಣೆಗೆ ನಿಯೋಜಿಸಲಾಗುವುದು ಎಂದಿದ್ದಾರೆ.
9 ಮೀಟರ್ ಉದ್ದದ 31 ಆಸನಗಳ ಇ-ಬಸ್ ಲಭ್ಯವಾಗುತ್ತಿದ್ದು. ನಾವು ಇ-ಬಸ್ ಸ್ವೀಕರಿಸಿದ ನಂತರ ಟೆಂಡರ್‌ನಲ್ಲಿನ ನಿರ್ದಿಷ್ಟತೆಗಳ ಪ್ರಕಾರ ವಾಹನವನ್ನು ಪೂರೈಸಲಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಗರದ ರಸ್ತೆಗಳಲ್ಲಿ ಓಡಿಸಲಾಗುತ್ತದೆ. ಅನುಮೋದನೆ ನೀಡಿದ ನಂತರ ಉಳಿದ ಇ-ಬಸ್‌ಗಳನ್ನು ತರಿಸಿಕೊಂಡು ರೋಡಿಗಿಳಿಸಲಾಗುವುದು. ನಿಗಮವು ಮುಂದಿನ ಆರು ತಿಂಗಳಲ್ಲಿ ಎಲ್ಲಾ 90 ಇ-ಬಸ್‌ಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಿಎಂಟಿಸಿ ಇ-ಬಸ್‌ಗಳನ್ನು ಒಟ್ಟು ವೆಚ್ಚದ ಒಪ್ಪಂದ (ಜಿಸಿಸಿ) ಆಧಾರದ ಮೇಲೆ ನಿರ್ವಹಿಸುತ್ತದೆ. ನಿಗಮವು ವಿದ್ಯುತ್ ಬಳಕೆ ಸೇರಿದಂತೆ ಆಪರೇಟರ್‌ಗೆ ಪ್ರತಿ ಕಿಲೋಮೀಟರಿಗೆ 51 ರೂ ಪಾವತಿಸಲಿದೆ ಎನ್ನುತ್ತಾರೆ.
ಫೇಮ್ ಯೋಜನೆ:
ಸ್ಮಾರ್ಟ್ ಸಿಟಿ ಯೋಜನೆಯ ಜೊತೆಗೆ, ನಿಗಮವು ಇ-ಬಸ್‌ಗಳನ್ನು ಫೇಮ್ II ಯೋಜನೆಯಡಿ (ಭಾರತದಲ್ಲಿ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ವೇಗವಾಗಿ ಅಳವಡಿಸಿಕೊಳ್ಳುವುದು ಮತ್ತು ತಯಾರಿಕೆ) ಯೋಜನೆಯನ್ನು ಜಾರಿಗೊಳಿಸಲಿದೆ. ಮೊದಲೇ ಟೆಂಡರ್ ನೀಡಲಾಗಿದ್ದರೂ, ಉಲ್ಲೇಖಿಸಿದ ಕಾರ್ಯಾಚರಣೆಯ ವೆಚ್ಚವು ಬಿಎಂಟಿಸಿಗೆ ಒಗ್ಗದ ಕಾರಣ ರದ್ದುಪಡಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ನಿಗಮವು ಫೇಮ್ II ಅಡಿಯಲ್ಲಿ 300 ಎಸಿ ಇ-ಬಸ್‌ಗಳನ್ನು ನಿರ್ವಹಿಸಲು ಯೋಜಿಸಿದೆ. ಕೋವಿಡ್ -19 ಸಾಂಕ್ರಾಮಿಕ ರೋಗ ಹರಡಿದ ನಂತರ, ಬಹುಪಾಲು ಎಸಿ ಇ-ಬಸ್ಸುಗಳು ರಸ್ತೆಗಳಿಂದ ಹೊರಗುಳಿದವು. ಬಿಎಂಟಿಸಿ ಯೋಜನೆಯನ್ನು ಬದಲಿಸಲು ಮತ್ತು 300 ನಾನ್ಎಸಿ ಇ- ಬಸ್‌ಗಳನ್ನು ನಿರ್ವಹಿಸಲು ಟೆಂಡರ್ ಪ್ರಕ್ರಿಯೆಗೆ ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಗಸ್ಟ್ 10ರೊಳಗೆ ರೋಡಿಗಿಳಿಯಲಿದೆ BMTC ಎಲೆಕ್ಟ್ರಿಕ್ ಬಸ್ : ವರ್ಷಾಂತ್ಯದೊಳಗೆ 90 E-bus ಸಾರ್ವಜನಿಕ ಸೇವೆಗೆ ಲಭ್ಯ