ಬೆಂಗಳೂರು: ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ 5 ನೇ ದಿನಕ್ಕೆ ಕಾಲಿಟ್ಟಿದೆ. ಇತ್ತ ನಗರದಲ್ಲಿ ಮುಷ್ಕರದ ನಡುವೆಯು ಕೆಲ ಬಸ್ಸುಗಳ ಕಾರ್ಯಾಚರಣೆ ಆಗ್ತಿದೆ.
ಆದರೆ ಮುಷ್ಕರ ನಿರತ ನೌಕರನೋರ್ವ ಬಿಎಂಟಿಸಿ ಬಸ್ಗಳಿಗೆ ಅಡ್ಡಲಾಗಿ ಮಲಗಿ ವಿರೋಧ ವ್ಯಕ್ತಪಡಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಸ್ಗೆ ಅಡ್ಡಲಾಗಿ ಮಲಗಿದ ವ್ಯಕ್ತಿ ಬಸ್ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಅಂತರ ನಿಗಮ ವರ್ಗಾವಣೆ ಪರಿಗಣಿಸೋದಿಲ್ಲ:
ಮುಷ್ಕರಕ್ಕೆ ಪ್ರಚೋದನೆ ನೀಡಿ, ಕರ್ತವ್ಯ ನಿರ್ವಹಿಸುತ್ತಿರುವ ಸಹ ಸಿಬ್ಬಂದಿಗೆ ಬೆದರಿಕೆ ಹಾಕಿ, ಬಸ್ಸುಗಳ ಕಾರ್ಯಾಚರಣೆಗೆ ಅಡ್ಡಿಪಡಿಸಲಾಗುತ್ತಿದೆ. ಈ ಮೂಲಕ ಸಾರ್ವಜನಿಕರಿಗೆ ಸಾರಿಗೆ ಸೇವೆ ಒದಗಿಸುವಲ್ಲಿ ತೊಂದರೆ ಮಾಡುತ್ತಿರುವ ನೌಕರರ "ಅಂತರ ನಿಗಮ ವರ್ಗಾವಣೆ" ಕೋರಿಕೆಯನ್ನು ಪರಿಗಣಿಸದಿರಲು ಕೆಎಸ್ಆರ್ಟಿಸಿ ನಿಗಮ ತೀರ್ಮಾನಿಸಿದೆ.
ಹಾಗೇ ಈಗಾಗಲೇ ಕೋರಿಕೆ ಮೇರೆಗೆ ಅಂತರ ವಿಭಾಗ ವರ್ಗಾವಣೆಗೊಂಡು, ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಈ ಅವಧಿಯಲ್ಲಿ ಕೂಡಲೇ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಈ ಸಂಬಂಧ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಿ, ಮೂಲ ವಿಭಾಗಕ್ಕೆ ಮರು ವರ್ಗಾವಣೆ ಮಾಡಲಾಗುವುದು ಅಂತ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಮಾಹಿತಿ ನೀಡಿದ್ದಾರೆ.