ETV Bharat / state

ಬಸ್ ಪ್ರಯಾಣಿಕರಿಗೆ ಸಿಹಿ‌ ಸುದ್ದಿ : ವೀಕೆಂಡ್‌ನಲ್ಲೂ ಸಂಚರಿಸಲಿದೆ ಬಿಎಂಟಿಸಿ - ಬಿಎಂಟಿಸಿ

ಕೆಎಸ್ಆರ್​ಟಿಸಿ ಈಗಾಗಲೇ ದಿನದ 24 ಗಂಟೆಯೂ ಬಸ್ ಕಾರ್ಯಾಚರಣೆ ನಡೆಸುತ್ತಿದೆ. ಆದರೆ ಬಿಎಂಟಿಸಿ ಬೆಳಗ್ಗೆ 6 ರಿಂದ ಸಂಜೆ 7 ಗಂಟೆಯವರೆಗೆ ಮಾತ್ರ ಬಸ್ ಕಾರ್ಯಾಚರಣೆ ಮಾಡುತ್ತಿತ್ತು. ಅಲ್ಲದೆ ವಾರಾಂತ್ಯದಲ್ಲಿ ಬಸ್ ಸಂಚಾರ ಇರುವುದಿಲ್ಲ ಎಂದು ಹೇಳಿತ್ತು. ಆದರೆ ಪ್ರಯಾಣಿಕರ ಅನುಕೂಲಕ್ಕಾಗಿ ನಾಳೆಯೂ ಬಿಎಂಟಿಸಿ ಬಸ್ ಕಾರ್ಯಚರಣೆಯಲ್ಲಿರಲಿವೆ.

bmtc
ಬಿಎಂಟಿಸಿ
author img

By

Published : Jun 25, 2021, 3:24 PM IST

ಬೆಂಗಳೂರು: ಸಾರಿಗೆ ಇಲಾಖೆಯು ಕೆಎಸ್ಆರ್​ಟಿಸಿ ಮತ್ತು ಬಿಎಂಟಿಸಿ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ವೀಕೆಂಡ್​ ಕರ್ಫ್ಯೂನಲ್ಲೂ ಬಿಎಂಟಿಸಿ, ಕೆಎಸ್ಆರ್​ಟಿಸಿ ಬಸ್‌ಗಳು ಓಡಾಟ ನಡೆಸಲಿವೆ. ಹೀಗಾಗಿ ನಾಳೆಯೂ ಸಾರಿಗೆ ಬಸ್​ಗಳ ಸಂಚಾರ ಇರಲಿದೆ.

ಕೆಎಸ್ಆರ್​ಟಿಸಿ ಈಗಾಗಲೇ ದಿನದ 24 ಗಂಟೆಯೂ ಬಸ್ ಕಾರ್ಯಾಚರಣೆ ನಡೆಸುತ್ತಿದೆ. ಆದರೆ ಬಿಎಂಟಿಸಿ ಬೆಳಗ್ಗೆ 6 ರಿಂದ ಸಂಜೆ 7 ಗಂಟೆಯವರೆಗೆ ಮಾತ್ರ ಬಸ್ ಕಾರ್ಯಾಚರಣೆ ಮಾಡುತ್ತಿತ್ತು. ಅಲ್ಲದೆ ವಾರಾಂತ್ಯದಲ್ಲಿ ಬಸ್ ಸಂಚಾರ ಇರುವುದಿಲ್ಲ ಎಂದು ಹೇಳಿತ್ತು. ಆದರೆ ಪ್ರಯಾಣಿಕರ ಅನುಕೂಲಕ್ಕಾಗಿ ನಾಳೆಯೂ ಬಿಎಂಟಿಸಿ ಬಸ್ ಕಾರ್ಯಚರಣೆಯಲ್ಲಿರಲಿವೆ.

ಈ ಬಗ್ಗೆ ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ರಾಜೇಶ್ ಮಾತನಾಡಿದ್ದು, ಈಗಾಗಲೇ ವಾರದ 5 ದಿನಗಳು 4 ಸಾವಿರ ಬಸ್ ಕಾರ್ಯಾಚರಣೆ ಮಾಡಲಾಗುತ್ತಿದೆ.. ಆದ್ರಲ್ಲಿ ಬೆಳಗ್ಗೆ 6 ರಿಂದ ಸಂಜೆ 7 ರವರೆಗೆ ಬಸ್ ಓಡಾಟವಿದೆ. ವೀಕೆಂಡ್​ ಕರ್ಫ್ಯೂನಲ್ಲಿ ಅಗತ್ಯ ವಸ್ತುಗಳ ಸೇವೆ ಹೊರತು ಪಡಿಸಿ ಎಲ್ಲವೂ ಕ್ಲೋಸ್ ಆಗುತ್ತದೆ. ಆದ್ದರಿಂದ ನಾಳೆ ಬಿಎಂಟಿಸಿ ಬಸ್​ಗಳ ಕಾರ್ಯಾಚರಣೆ ಕಡಿಮೆ ಇರಲಿದೆ. ನಾಳೆ ಬೆಳಗ್ಗೆ 6 ರಿಂದ ಸಂಜೆ 7 ರವರೆಗೆ 1200 ಬಸ್ಸುಗಳು ಓಡಾಟ ನಡೆಸಲಿವೆ. ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ‌‌. ಬಿಎಂಟಿಸಿಗೆ ನಿನ್ನೆ 1 ಕೋಟಿ 7 ಲಕ್ಷ ಆದಾಯ ಬಂದಿದೆ. 9 ಲಕ್ಷ 31 ಸಾವಿರ ಪ್ರಯಾಣಿಕರು ಸಂಚಾರ ಮಾಡಿದ್ದಾರೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.