ಬೆಂಗಳೂರು: ಸುಮಾರು 2 ತಿಂಗಳ ಲಾಕ್‌ಡೌನ್ ನಂತರ ನಾಳೆಯಿಂದ ರಾಜ್ಯಾದ್ಯಂತ ಅನ್‌ಲಾಕ್ ಆರಂಭವಾಗಲಿದೆ. ಈ ಮಧ್ಯೆ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ ಸೇವೆ ನಾಳೆಯಿಂದ ಪುನಾರಂಭಿಸಲು ನಿಗಮಗಳು ಸಿದ್ಧತೆ ನಡೆಸುತ್ತಿವೆ.
ಪ್ರಯಾಣಿಕರ ಬೇಡಿಕೆ ಆಧರಿಸಿ ಬಸ್ ಸಂಚಾರ ಇರಲಿದ್ದು, ಶೇ 50 ರಷ್ಟು ಬಸ್ ಓಡಿಸಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ನಾಳೆ ಒಟ್ಟು 2 ಸಾವಿರ ಬಿಎಂಟಿಸಿ ಬಸ್ಸ್ಉಗಳು ರಸ್ತೆಗಿಳಿಯಲಿವೆ. ಬೆಂಗಳೂರು ನಗರ ಹಾಗೂ ಹೊರ ಭಾಗದಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸಂಜೆ 7 ಗಂಟೆಯ ನಂತರ ಬಿಎಂಟಿಸಿ ಓಡಾಟ ಇರಲ್ಲ. ಹೀಗಾಗಿ ಸಂಜೆ 7 ಗಂಟೆಗೆ ನಿಲ್ದಾಣದಿಂದ ಬಸ್‌ಗಳು ನಿರ್ಗಮಿಸಲಿವೆ. ಇನ್ನು ಬೆಳ್ಳಂಬೆಳಗ್ಗೆ ಹಾಗೂ ತಡ ರಾತ್ರಿಯಲ್ಲಿ ಬಸ್ ಸಂಚಾರ ನಿಷೇಧಿಸಲಾಗಿದೆ. ಜೊತೆಗೆ ಚಾಲನ ಸಿಬ್ಬಂದಿ ಅವಧಿಯನ್ನ 8 ಗಂಟೆ ಮೀರದಂತೆ ಕ್ರಮಕೈಗೊಳ್ಳಲಾಗಿದೆ. ಪ್ರತಿ ಡಿಪೋಗಳಲ್ಲಿ 5 ಹೆಚ್ಚುವರಿ ಬಸ್ಗಳನ್ನ ಕಾಯ್ದಿರಿಸುವುದು. ಬಸ್ಗಳಲ್ಲಿ ಮಾರ್ಗಸೂಚಿ ಫಲಕ ಕಡ್ಡಾಯವಾಗಿ ಪ್ರದರ್ಶಿಸುವುದು. ಬಸ್ ನಲ್ಲಿ ಶೇ 50 ಜನರಿಗೆ ಮಾತ್ರ ಅವಕಾಶ ಎಂಬ ನಿಯಮಗಳನ್ನ ಪಾಲಿಸಬೇಕಿದೆ.
ಇನ್ನು ಮತ್ತೊಂದೆಡೆ ಕೆಎಸ್ಆರ್ಟಿಸಿ ಸಂಚಾರಕ್ಕೂ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಕೆಎಸ್‌ಆರ್‌ಟಿಸಿಯಿಂದ ಮಾರ್ಗಸೂಚಿ ಬಿಡುಗಡೆಯಾಗಿದೆ. ಮೈಸೂರು ಜಿಲ್ಲೆ ಹೊರತುಪಡಿಸಿ ಎಲ್ಲ ಜಿಲ್ಲೆಗಳಿಗೆ ಬಸ್ ಸಂಚಾರ ಆರಂಭವಾಗಲಿದೆ. ಮೊದಲ ಹಂತದಲ್ಲಿ ಮೂರು ಸಾವಿರ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ. ಸದ್ಯ ನಾಳೆಯಿಂದ ಅಂತಾರಾಜ್ಯ ಸಂಚಾರವಿಲ್ಲ. ಮುಂದಿನ ದಿನಗಳಲ್ಲಿ ಆಯಾ ರಾಜ್ಯಗಳ ಮಾರ್ಗಸೂಚಿಗಳ ಅನ್ವಯ ಈ ಬಗ್ಗೆ ನಿರ್ಧರಿಸಲಾಗುತ್ತದೆ. ಪ್ರಯಾಣಿಕರು ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಓದಿ:ಬಿಜೆಪಿ ಮುಖ್ಯಮಂತ್ರಿಗಳ ಜೊತೆ ಜೆಪಿ ನಡ್ಡಾ ವಿಡಿಯೋ ಸಂವಾದ: ಬಿಎಸ್ವೈ ಭಾಗಿ