ETV Bharat / state

ಕಾಂಗ್ರೆಸ್ ಆಫೀಸ್​​​ನಲ್ಲಿ ಇಂದಿರಾ ಕ್ಯಾಂಟೀನ್, ನೆಹರು ಹುಕ್ಕಾ ಬಾರ್ ಮಾಡಲಿ: ಸಿಟಿ ರವಿ - ಕಾಂಗ್ರೆಸ್​ ವಿರುದ್ಧ ಸಿಟಿ ರವಿ ಆಕ್ರೋಶ

ಕಳೆದ ಕೆಲ ದಿನಗಳಿಂದ ಇಂದಿರಾ ಕ್ಯಾಂಟೀನ್​ ಹೆಸರನ್ನು ಬದಲಾಯಿಸಿ ಅನ್ನಪೂರ್ಣೇಶ್ವರಿ ಎಂದು ನಾಮಕರಣ ಮಾಡಬೇಕೆಂದು ಬಿಜೆಪಿ ನಾಯಕರು ಒತ್ತಾಯಿಸುತ್ತಿದ್ದಾರೆ. ಆದರೆ, ಇಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಕಾಂಗ್ರೆಸ್​ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ಸಿಟಿ ರವಿ
CT Ravi
author img

By

Published : Aug 12, 2021, 4:04 PM IST

ಬೆಂಗಳೂರು: ಕಾಂಗ್ರೆಸ್ ಕಚೇರಿಯಲ್ಲಿ ಬೇಕಾದರೆ ಇಂದಿರಾ ಕ್ಯಾಂಟೀನ್ ತೆರೆಯಲಿ, ನೆಹರು ಹುಕ್ಕಾ ಬಾರ್ ತೆರೆಯಲಿ, ಆದರೆ ಕ್ಯಾಂಟೀನ್ ಹೆಸರನ್ನು ಅನ್ನಪೂರ್ಣೇಶ್ವರಿ ಎಂದು ಬದಲಾಯಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೆಹರು, ಇಂದಿರಾ ಗಾಂಧಿ ಅವರ ಒಳ್ಳೆಯ ಕೊಡುಗೆಗಳನ್ನು ನೆನೆಯುತ್ತೇವೆ. ಆದರೆ, ಆರ್ಟಿಕಲ್‌ 370 ಯಂತಹ ಕೆಲವು ಎಡಬಿಡಂಗಿತನ ಮಾಡಿದ್ದಾರೆ. ಅವುಗಳನ್ನು ಸರಿಪಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಅವರ ಕೆಟ್ಟ ತೀರ್ಮಾನಗಳನ್ನು ನಾವು ಸರಿಪಡಿಸಲೇಬೇಕು. ದೇಶಕ್ಕೆ ನಾವು ಮೊದಲ ಆದ್ಯತೆ ನೀಡುತ್ತೇವೆ.

ಹಾಗಾಗಿಯೇ ದೇಶಕ್ಕೆ ಹಿತವಾದ ಎಲ್ಲ ತೀರ್ಮಾನಗಳನ್ನು ಮುಂದುವರಿಸುತ್ತೇವೆ. ನಮಗೆ ಯಾವುದೇ ಪೂರ್ವಗ್ರಹ ಇಲ್ಲ. ಹಾಗೆಯೇ ಅವರು ಮಾಡಿದ್ದೆಲ್ಲ ಸರಿ ಎನ್ನುವ ವ್ಯಾಮೋಹವೂ ಇಲ್ಲ ಎಂದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಗುಡುಗು

ಹಣ ಹೊಡೆಯಲು ಕ್ಯಾಂಟೀನ್​ ನಿರ್ಮಾಣ:

ಇಂದಿರಾ ಗಾಂಧಿ ಮೃತಪಟ್ಟಿದ್ದು 1984ರಲ್ಲಿ. 2017ರಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದೆ. ಬದ್ಧತೆಗಳ ರಾಜಕಾರಣಕ್ಕಾಗಿ ಇಂದಿರಾ ಕ್ಯಾಂಟೀನ್ ಮಾಡುವುದಾದರೆ, ಹಿಂದಿನ ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ಮಾಡಬಹುದಾಗಿತ್ತು. ಆದರೆ, ರಾಜಕೀಯ ಕಾರಣ ಹಾಗೂ ಹಣ ಹೊಡೆಯಲು ಈಗ ಇದನ್ನು ಮಾಡಿದ್ದಾರೆ. ಪ್ರತಿದಿನ ಒಂದು ಸಂಖ್ಯೆಯೂ ಹೆಚ್ಚು ಕಮ್ಮಿ ಇಲ್ಲದಂತೆ ಕ್ಯಾಂಟೀನ್ ಬಿಲ್ ಮಾಡಿದ್ದಾರೆ.

ಕೋಟಿ ಕೋಟಿ ಹಣ ಖರ್ಚು ಮಾಡಿ ಕ್ಯಾಂಟೀನ್ ಕಟ್ಟಿದ್ದಾರೆ. ಅದೇನು ಫೈವ್ ಸ್ಟಾರ್ ಹೋಟೆಲ್ ಅಂದುಕೊಂಡಿದ್ದಾರಾ? ಅವರ ಎಟಿಎಂ ತುಂಬಿಸಿಕೊಳ್ಳಲು ತಂದಿರುವ ಯೋಜನೆಯನ್ನು ನಾವು ಹೇಗೆ ಒಪ್ಪಿಕೊಳ್ಳಲು ಸಾಧ್ಯ? ಈ ಕಾರಣಕ್ಕೆ ಇಂದಿರಾ ಕ್ಯಾಂಟೀನ್​ಗೆ ನಮ್ಮ ವಿರೋಧವಿದೆ. ರಾಜಕೀಯ ಕಾರಣಕ್ಕೆ ಇಂದಿರಾ ಹೆಸರನ್ನು ನಾಮಕರಣ ಮಾಡಿರುವುದಕ್ಕೆ ನಾವು ವಿರೋಧ ಮಾಡುತ್ತಿದ್ದೇವೆ ಎಂದರು.

ರಾಜಕೀಯ ಉದ್ದೇಶವಿಲ್ಲ:

ಅನ್ನಪೂರ್ಣೇಶ್ವರಿ ರಾಜಕೀಯ ವ್ಯಕ್ತಿಯಲ್ಲ. ಅನ್ನದ ದೇವತೆ. ನಮ್ಮ ಸಂಸ್ಕೃತಿಯ ಒಂದು ಭಾಗ. ಅದಕ್ಕಾಗಿ ಅನ್ನಪೂರ್ಣೇಶ್ವರಿಯ ಹೆಸರನ್ನು ಇಡುವಂತೆ ಹೇಳಿದೆ. ಬೇರೆ ರಾಜಕಾರಣಿಗಳ ಹೆಸರು ಇಡುವಂತೆ ಹೇಳಿದರೆ ಅದು ರಾಜಕಾರಣವಾಗುತ್ತಿತ್ತು. ಅವರ ಉದ್ದೇಶ ನಿಜವಾಗಿಯೂ ಬಡವರಿಗೆ ಅನ್ನ ಕೊಡುವುದೇ ಆಗಿದ್ದರೆ ಅನ್ನಪೂರ್ಣೇಶ್ವರಿ ಯಾದರೇನು, ಇಂದಿರಾ ಎಂದಾದರೇನು.

ಅವರೇನು ಕಾಂಗ್ರೆಸ್ ದುಡ್ಡಲ್ಲಿ ಕೊಡುತ್ತಿದ್ದಾರಾ? ಹಾಗೆ ಅವರ ದುಡ್ಡಲ್ಲಿ ಕೊಡುವುದಾದರೆ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಿ, ನೆಹರು ಹುಕ್ಕಾಬಾರ್ ತೆರೆಯಲಿ ಯಾರು ಬೇಡ ಎನ್ನುತ್ತಾರೆ ಎಂದರು.

'ಕೈ' ಗೆ ಉರಿ ಹತ್ತಿಕೊಂಡಿದೆ:

ಗೋ ಹತ್ಯೆ ನಿಷೇಧ ಬಿಲ್ ನಮ್ಮಂತವರ ಆಗ್ರಹದ ಕಾರಣದಿಂದಾಗಿ ಆಗಿದೆ. ನಾವು ಪ್ರಶ್ನೆಯನ್ನೇ ಎತ್ತದಿದ್ದರೆ, ಚರ್ಚೆಯನ್ನು ಹುಟ್ಟು ಹಾಕದಿದ್ದರೆ ಕಾಯ್ದೆಗಳು ಬರುತ್ತಲೇ ಇರಲಿಲ್ಲ. ಎಲ್ಲದಕ್ಕೂ ಸಮಯ ಬರಲಿದೆ. ಚರ್ಚೆ ಅಭಿಪ್ರಾಯವಾಗಿ, ಅಭಿಪ್ರಾಯ ತೀರ್ಮಾನವಾಗಿ ಹೊರಬರಲು ಸಮಯ ತೆಗೆದುಕೊಳ್ಳುತ್ತದೆ. ನಮಗೆ ಯಾವುದು ಸರಿ ಎಂದೆಸಿನುತ್ತದೆಯೋ ಅದನ್ನು ಜನರ ಜೊತೆ ಹಂಚಿಕೊಂಡಿದ್ದೇವೆ. ಅವರ ಅಭಿಪ್ರಾಯ ಮುಖ್ಯ. ಹಾಗಾಗಿ ಇಂದಿರಾ ಕ್ಯಾಂಟೀನ್ ವಿಷಯವನ್ನು ಚರ್ಚೆಗೆ ಬಿಟ್ಟಿದ್ದೇವೆ. ಈಗ ಅವರಿಗೆ ಉರಿ ಹತ್ತಿಕೊಂಡಿದೆ ಎಂದು ವ್ಯಂಗ್ಯವಾಡಿದರು.

ಎಸ್ಐಟಿ ತನಿಖೆ ಆಗಬೇಕು:

ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ‌ ಹಾಕಲಾಗಿದೆ. ಯಾರು ಹೀನ ಕೃತ್ಯ ಮಾಡಿದ್ದಾರೆ ಎಂಬುದನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ವಿಶೇಷ ತನಿಖಾ ತಂಡದ ಮೂಲಕ ತನಿಖೆಯಾಗಬೇಕು. ಪ್ರಜಾಪ್ರಭುತ್ವದಲ್ಲಿ‌ ಹಿಂಸೆ, ಭಯಕ್ಕೆ ಜಾಗವಿಲ್ಲ. ಇಂತದಕ್ಕೆಲ್ಲ ನಾವು ಹೆದರುವವರಲ್ಲ ಎಂದು ಹೇಳಿದರು.

ಗೋಸುಂಬೆ ರಾಜಕಾರಣ:

ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ವಿರೋಧಿಯಾಗಿದೆ ಎಂದ ಸಿಟಿ ರವಿ, ದಲಿತ ಅಖಂಡ ಶ್ರೀನಿವಾಸ್ ಮೂರ್ತಿಗೆ ರಕ್ಷಣೆಯಿಲ್ಲ.‌ ಅವರ ಪರವಾಗಿ ಕಾಂಗ್ರೆಸ್‌ ನಾಯಕರು ಮಾತನಾಡಲಿಲ್ಲ. ನಮ್ಮ ಸರ್ಕಾರದಲ್ಲಿ 27 ಜ‌ನ ಒಬಿಸಿಯವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ, 12 ಜನ ದಲಿತರಿಗೆ ಕೇಂದ್ರದಲ್ಲಿ‌ ಅವಕಾಶ ಸಿಕ್ಕಿದೆ. 5 ಜನ ಪರಿಶಿಷ್ಟ ವರ್ಗದವರು ಸಚಿವರಾಗಿದ್ದಾರೆ.

ಆದರೆ, ಕಾಂಗ್ರೆಸ್ ಪಕ್ಷಕ್ಕೆ ಯಾವ ಬದ್ಧತೆಯಿದೆ. 300 ಕೋಟಿ ಖರ್ಚು ಮಾಡಿ ಜಾತಿ ಗಣತಿ ಮಾಡಿದ್ದೀರಿ. 2015 ರಲ್ಲೇ ಜಾತಿಗಣತಿ ಸಿದ್ದವಾಗಿದೆ. ಆದರೆ, ಅದರ ಸದಸ್ಯರೇ ವಿರೋಧ ವ್ಯಕ್ತಪಡಿಸಿದರು. ನಿಮ್ಮದು ಗೋಸುಂಬೆ ರಾಜಕಾರಣ. ನಮ್ಮದು ಐಡಿಯಾಲಜಿಕಲ್ ಬದ್ಧತೆ ಎಂದು ಕಾಂಗ್ರೆಸ್ ವಿರುದ್ಧ ಕ್ರೋಶ ವ್ಯಕ್ತಪಡಿಸಿದರು.

ಓದಿ; OBC ಬಿಲ್​ಗೆ ಸ್ವಾಗತ: 60 - 65 ವರ್ಷಗಳ ಅವಧಿಯಲ್ಲಿ ಈ ರೀತಿ ಸಂಸತ್ ಸದನ ನಡೆದಿದ್ದು ನೋಡಿಲ್ಲ - ಹೆಚ್​ಡಿಡಿ ಬೇಸರ

ಇಲ್ಲದ ಕುರ್ಚಿಗೆ ಪೈಪೋಟಿ :

ಸ್ವಾಭಾವಿಕವಾಗಿ ಕಾಂಗ್ರೆಸ್ ಎಲ್ಲ ಕಡೆ ಸೋಲುತ್ತಲೇ ಇದೆ. ಪಶ್ಚಿಮ ಬಂಗಾಳದಲ್ಲಿ ಶೂನ್ಯ ಸಂಪಾದನೆ ಮಾಡಿದೆ. ಕೇರಳದಲ್ಲಿ ಆಶಾವಾದವೆ ಇಲ್ಲದಂತಾಯ್ತು. ಆದರೂ ಕಾಂಗ್ರೆಸ್​​ನವರು ಹಗಲುಗನಸು ಕಾಣುತ್ತಿದ್ದಾರೆ. ಇಲ್ಲದ ಕುರ್ಚಿಗೆ ಪೈಪೋಟಿ ನಡೆದಿದೆ. ಹಗಲುಗನಸಿನಲ್ಲೇ ಕೆಲವರು ವಿಹರಿಸುತ್ತಿದ್ದಾರೆ ಎಂದು ಕೈ ನಾಯಕರ ವಿರುದ್ಧ ಲೇವಡಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.