ETV Bharat / state

ಕಾಂಗ್ರೆಸ್​​ನ ಪೇಸಿಎಂ ಅಭಿಯಾನಕ್ಕೆ ತಿರುಗೇಟು: ಕೈಪೇ ಕ್ಯೂಆರ್ ಕೋಡ್ ಬಿಡುಗಡೆ ಮಾಡಿದ ಬಿಜೆಪಿ - paycm poster campaign

ಕಾಂಗ್ರೆಸ್​​ನ ಪೇಸಿಎಂ ಪೋಸ್ಟರ್ ಅಭಿಯಾನ ಬೆನ್ನಲ್ಲೇ ಬಿಜೆಪಿ ಕೈಪೇ ಕ್ಯೂಆರ್ ಕೋಡ್ ಅಭಿಯಾನ ಆರಂಭಿಸಿದೆ.

ಕೈಪೇ ಕ್ಯೂಆರ್ ಕೋಡ್
ಕೈಪೇ ಕ್ಯೂಆರ್ ಕೋಡ್
author img

By

Published : Sep 23, 2022, 7:23 PM IST

ಬೆಂಗಳೂರು: ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ನಡುವೆ ಪೇಸಿಎಂ ಜಟಾಪಟಿ ಮುಂದುವರೆದಿದೆ. ಪೇಸಿಎಂ ಅಭಿಯಾನಕ್ಕೆ ಪೇಟಿಎಂ ಬಳಸಿದ್ದಕ್ಕೆ ಟಕ್ಕರ್ ಕೊಡಲು ಬಿಜೆಪಿ ಫೋನ್ ಪೇ ಮಾದರಿಯ ಕ್ಯೂಆರ್ ಕೋಡ್ ಬಳಸಿದೆ.

ಕಾಂಗ್ರೆಸ್​​ನ ಪೇಸಿಎಂ ಅಭಿಯಾನಕ್ಕೆ ತಿರುಗೇಟು: ಕಾಂಗ್ರೆಸ್​​ನ ಪೇಸಿಎಂಗೆ ಕೌಂಟರ್ ಕೊಡಲು ಕೈ ಪೇ ಕ್ಯೂಆರ್ ಕೋಡ್ ಅನ್ನು ಬಿಜೆಪಿ ಬಿಡುಗಡೆ ಮಾಡಿದೆ. ನಕಲಿ ಗಾಂಧಿ ಕುಟುಂಬಕ್ಕೆ ಗಾಂಧಿ ಹೆಸರು ಬಂದಿದ್ದು ಹೇಗೆ? ಅಸಲಿ ಸತ್ಯ ತಿಳಿಯಲು ಇಲ್ಲಿ ಸ್ಕ್ಯಾನ್ ಮಾಡಿ ಅಂತ ಸಂದೇಶವನ್ನು ಬಿಜೆಪಿ ಬಿತ್ತರಿಸಿದೆ.

(ಓದಿ: ಸಾಮಾಜಿಕ ಜಾಲತಾಣದಲ್ಲಿ ಮುಂದುವರಿದ ಕಾಂಗ್ರೆಸ್​​ನ 'ಪೇ ಸಿಎಂ' ಅಭಿಯಾನ)

ಪೇಸಿಎಂಗೆ ಕಾಂಗ್ರೆಸ್ ಪೇಟಿಎಂ ಬಳಸಿದ್ದು, ಅದಕ್ಕೆ ಟಾಂಗ್ ನೀಡಲು ಬಿಜೆಪಿ ಫೋನ್ ಪೇ ಬಳಸಿಕೊಂಡಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣ ಯೂಟ್ಯೂಬ್ ಪೇಜ್ ತೆರೆದುಕೊಳ್ಳಲಿದ್ದು, ಎರಡು ವರ್ಷಗಳ ಹಿಂದೆ ಪೋಸ್ಟ್ ಆಗಿರುವ ವಿಡಿಯೋ ಪ್ಲೇ ಆಗಲಿದೆ. ನೆಹರೂ ಕುಟುಂಬಕ್ಕೆ ಗಾಂಧಿ ಹೆಸರು ಬಂದಿದ್ದು ಹೇಗೆ ಎನ್ನುವ ಮಾಹಿತಿ ಉಳ್ಳು ಚಿತ್ರ ಪ್ರಸ್ತುತವಾಗುತ್ತದೆ.

ಕೈಪೇ ಕ್ಯೂಆರ್ ಕೋಡ್
ಕೈಪೇ ಕ್ಯೂಆರ್ ಕೋಡ್

ಪೇಸಿಎಂ ಪೋಸ್ಟರ್​​ಗಳನ್ನು ಬಹಿರಂಗವಾಗಿಯೇ ಅಂಟಿಸಲು ಮುಂದಾದ ನಾಯಕರನ್ನು ಪೊಲೀಸರು ಬೆಂಗಳೂರಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬೆನ್ನಲ್ಲೇ ಬಿಜೆಪಿ ಹೊಸ ಕ್ಯೂಆರ್ ಕೋಡ್ ರಿಲೀಸ್ ಮಾಡಿ ಕಾಂಗ್ರೆಸ್​​ಗೆ ತಿರುಗೇಟು ನೀಡಿದೆ. ಆದ್ರೆ ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಹೋಗಿ ಬಿಜೆಪಿಯ 40 ಪರ್ಸೆಂಟ್ ಸರ್ಕಾರದ ಬಗ್ಗೆ ಗ್ರಾಫಿಕ್ ವಿಡಿಯೋ ಬಿಡುಗಡೆ ಮಾಡಿದೆ.

(ಇದನ್ನೂ ಓದಿ: ಕಾಂಗ್ರೆಸ್​ನಿಂದ ಪೇಸಿಎಂ ಪೋಸ್ಟರ್ ಅಭಿಯಾನ: ಸಿಎಂ ನಿವಾಸಕ್ಕೆ ಹೆಚ್ಚಿದ ಪೊಲೀಸ್ ಭದ್ರತೆ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.