ಬೆಂಗಳೂರು: ಮೀನು ತಿಂದು ದೇವಸ್ಥಾನಕ್ಕೆ ಪ್ರವೇಶ ಮಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ನೆಲದ ಸಂಸ್ಕೃತಿ, ಪಾವಿತ್ರ್ಯತೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಠ ಮಾಡುತ್ತಿರುವುದು ವಿಪರ್ಯಾಸ ಎಂದು ಬಿಜೆಪಿ ಟ್ವೀಟ್ ಮೂಲಕ ತಿರುಗೇಟು ನೀಡಿದೆ.
ತುಮಕೂರಿನ ಸಿದ್ದಗಂಗಾ ಮಠಕ್ಕೆ ಜಾತ್ಯತೀತ ಮತ್ತು ಪಕ್ಷಾತೀತವಾದ ಗೌರವದ ಸ್ಥಾನ ಇದೆ. ಈ ಕಾರಣಕ್ಕಾಗಿಯೇ ಅದು ಸರ್ವರೂ ಭಕ್ತಿಯಿಂದ ನಮಿಸುವ ಕ್ಷೇತ್ರ. ಇಂತಹ ಕ್ಷೇತ್ರದಲ್ಲಿ ಎಳೆಯ ಮಕ್ಕಳನ್ನು ಕೂರಿಸಿಕೊಂಡು ಕೊಳಕು ರಾಜಕೀಯದ ಭಾಷಣ ಮಾಡಿದ ನರೇಂದ್ರ ಮೋದಿ ಅವರೇ, ನಿಮ್ಮನ್ನು ಆ ಪವಿತ್ರ ನೆಲ ಕ್ಷಮಿಸದು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿರುವುದಕ್ಕೆ ಬಿಜೆಪಿ ಕಿಡಿಕಾರಿದೆ.
-
ಮೀನು ತಿಂದು ದೇವಸ್ಥಾನಕ್ಕೆ ಪ್ರವೇಶ ಮಾಡಿದ @siddaramaiah ಈ ನೆಲದ ಸಂಸ್ಕೃತಿ, ಪಾವಿತ್ರ್ಯತೆಯ ಬಗ್ಗೆ ಪ್ರಧಾನಿ @narendramodi ಅವರಿಗೆ ಪಾಠ ಮಾಡುತ್ತಿರುವುದು ವಿಪರ್ಯಾಸ.
— BJP Karnataka (@BJP4Karnataka) January 2, 2020 " class="align-text-top noRightClick twitterSection" data="
ಪವಿತ್ರವಾದ ಕುಂಕುಮ ಕಂಡರೆ ಭಯಪಡುವ ಹಾಗೂ ಮಕ್ಕಳ ನಡುವೆ ವಿಷ ಬೀಜ ಬಿತ್ತುವ ಸಿದ್ದರಾಮಯ್ಯನವರ ಮನಸ್ಸಿನ ಕೊಳೆಯನ್ನು ತಾಯಿ ಗಂಗೆಯಿಂದಲೂ ತೊಳೆಯಲು ಸಾಧ್ಯವಿಲ್ಲ. https://t.co/wkYgCzxdRJ
">ಮೀನು ತಿಂದು ದೇವಸ್ಥಾನಕ್ಕೆ ಪ್ರವೇಶ ಮಾಡಿದ @siddaramaiah ಈ ನೆಲದ ಸಂಸ್ಕೃತಿ, ಪಾವಿತ್ರ್ಯತೆಯ ಬಗ್ಗೆ ಪ್ರಧಾನಿ @narendramodi ಅವರಿಗೆ ಪಾಠ ಮಾಡುತ್ತಿರುವುದು ವಿಪರ್ಯಾಸ.
— BJP Karnataka (@BJP4Karnataka) January 2, 2020
ಪವಿತ್ರವಾದ ಕುಂಕುಮ ಕಂಡರೆ ಭಯಪಡುವ ಹಾಗೂ ಮಕ್ಕಳ ನಡುವೆ ವಿಷ ಬೀಜ ಬಿತ್ತುವ ಸಿದ್ದರಾಮಯ್ಯನವರ ಮನಸ್ಸಿನ ಕೊಳೆಯನ್ನು ತಾಯಿ ಗಂಗೆಯಿಂದಲೂ ತೊಳೆಯಲು ಸಾಧ್ಯವಿಲ್ಲ. https://t.co/wkYgCzxdRJಮೀನು ತಿಂದು ದೇವಸ್ಥಾನಕ್ಕೆ ಪ್ರವೇಶ ಮಾಡಿದ @siddaramaiah ಈ ನೆಲದ ಸಂಸ್ಕೃತಿ, ಪಾವಿತ್ರ್ಯತೆಯ ಬಗ್ಗೆ ಪ್ರಧಾನಿ @narendramodi ಅವರಿಗೆ ಪಾಠ ಮಾಡುತ್ತಿರುವುದು ವಿಪರ್ಯಾಸ.
— BJP Karnataka (@BJP4Karnataka) January 2, 2020
ಪವಿತ್ರವಾದ ಕುಂಕುಮ ಕಂಡರೆ ಭಯಪಡುವ ಹಾಗೂ ಮಕ್ಕಳ ನಡುವೆ ವಿಷ ಬೀಜ ಬಿತ್ತುವ ಸಿದ್ದರಾಮಯ್ಯನವರ ಮನಸ್ಸಿನ ಕೊಳೆಯನ್ನು ತಾಯಿ ಗಂಗೆಯಿಂದಲೂ ತೊಳೆಯಲು ಸಾಧ್ಯವಿಲ್ಲ. https://t.co/wkYgCzxdRJ
ಪವಿತ್ರವಾದ ಕುಂಕುಮ ಕಂಡರೆ ಭಯ ಪಡುವ ಹಾಗೂ ಮಕ್ಕಳ ನಡುವೆ ವಿಷ ಬೀಜ ಬಿತ್ತುವ ಸಿದ್ದರಾಮಯ್ಯನವರ ಮನಸ್ಸಿನ ಕೊಳೆಯನ್ನು ತಾಯಿ ಗಂಗೆಯಿಂದಲೂ ತೊಳೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿ ಸಿದ್ದರಾಮಯ್ಯಗೆ ಟಾಂಗ್ ನೀಡಿದೆ.
ಇನ್ನು ಸುರೇಶ್ ಕುಮಾರ್ ಕೂಡ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ. ಕೊಳಕು ರಾಜಕೀಯದಲ್ಲಿಯೇ ಸದಾ ಮುಳುಗಿರುವವರಿಗೆ ಶುದ್ಧ ಸರೋವರದಲ್ಲಿಯೂ ಕೊಳಕೇ ಕಾಣುವುದು ಅತ್ಯಂತ ಸಹಜ ಎಂದು ಸುರೇಶ್ ಕುಮಾರ್ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.