ETV Bharat / state

ಬಿಜೆಪಿ ರಥಯಾತ್ರೆ, ಚುನಾವಣಾ ಸಮಾವೇಶಗಳ ಸಿದ್ಧತೆಗಷ್ಟೇ ಸೀಮಿತವಾಯ್ತೇ ಬಿಜೆಪಿ ಶಾಸಕಾಂಗ ಸಭೆ? - ಪ್ರಧಾನ ಕಾರ್ಯದರ್ಶಿ ಬಿ‌ ಎಲ್ ಸಂತೋಷ್

ಬಿಜೆಪಿ ಶಾಸಕಾಂಗ ಪಕ್ಷದ ಸಭೆ - ಮಾರ್ಚ್ 1 ರಿಂದ ಬಿಜೆಪಿ ರಥಯಾತ್ರೆ ಆರಂಭ-ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾರಿಂದ ರಥಯಾತ್ರೆಗೆ ಚಾಲನೆ.

BJP Legislative Assembly
ಬಿಜೆಪಿ ಶಾಸಕಾಂಗ ಸಭೆ
author img

By

Published : Feb 16, 2023, 7:07 AM IST

ಬೆಂಗಳೂರು: ರಾಜ್ಯ ಬಜೆಟ್​ಗೂ ಎರಡು ದಿನ ಮೊದಲು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಸಂಪೂರ್ಣವಾಗಿ ಬಿಜೆಪಿ ರಥಯಾತ್ರೆ, ಚುನಾವಣಾ ಸಮಾವೇಶಗಳ ಸಿದ್ಧತೆಗಳಿಗಷ್ಟೇ ಸೀಮಿತವಾಗಿ ನಡೆಯಿತು. ಪ್ರಚಾರ ಕಾರ್ಯದ ಸಿದ್ಧತೆಗಳ ಅವಲೋಕನ, ಹೈಕಮಾಂಡ್ ನಿಂದ ಬಂದ ಸಂದೇಶಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.

ಮೋದಿ ಬಂದ ಬಳಿಕ ಪರವಾದ ಅಲೆ : ರಾಜಭವನ ರಸ್ತೆಯಲ್ಲಿರುವ ಕ್ಯಾಪಿಟಲ್ ಹೋಟೆಲ್ ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಜರುಗಿತು. ಸಭೆಯ ಆರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಹಿಂದೆ ಆಡಳಿತ ವಿರೋಧಿ ಅಲೆಗಳು ಇರುತ್ತಿದ್ದವು, ಈಗ ಮೋದಿ ಬಂದ ಬಳಿಕ ಪರವಾದ ಅಲೆ ಇದೆ, ಯಾರೂ ಧೃತಿಗೆಡಬೇಕಾದ ಅವಶ್ಯಕತೆ ಇಲ್ಲ, ನಾವು ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಕಾಂಗ್ರೆಸ್ ನವರ ಈಗಿನ ಅಬ್ಬರ ಚುನಾವಣೆ ವೇಳೆಗೆ ಇರುವುದಿಲ್ಲ ಎಂದರು.

BJP Legislative Assembly
ಬಿಜೆಪಿ ಶಾಸಕಾಂಗ ಸಭೆ

ಸಾಂಸ್ಕೃತಿಕ, ಕ್ರೀಡಾ ವಲಯ ಸೇರಿ ವಿವಿಧ ವಲಯಗಳ ಸಾಧಕರ ಭೇಟಿಗೆ ಸೂಚನೆ.. ನಂತರ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ‌.ಎಲ್ ಸಂತೋಷ್ ಅವರು, ರಥಯಾತ್ರೆ, ಫಲಾನುಭವಿಗಳ ಸಮಾವೇಶ, ಮೋರ್ಚಾಗಳ ಸಮಾವೇಶಗಳಲ್ಲಿ ಶಾಸಕರ ಸಕ್ರಿಯ ಪಾಲ್ಗೊಳ್ಳುವಿಕೆಗೆ ಸೂಚನೆ ನೀಡಿದರು. ಅಲ್ಲದೆ, ರಥಯಾತ್ರೆ ಸಮಯದಲ್ಲಿ ಆಯಾ ಪ್ರದೇಶಗಳಲ್ಲಿನ ಸಾಂಸ್ಕೃತಿಕ, ಕ್ರೀಡಾ ವಲಯ ಸೇರಿದಂತೆ ವಿವಿಧ ವಲಯಗಳ ಸಾಧಕರ ಮತ್ತು ಗಣ್ಯರ ಭೇಟಿಗೆ ಕೂಡ ಸೂಚಿಸಿದರು.

ಪ್ರಧಾನಮಂತ್ರಿ ನಮ್ಮ ಭಾಗಕ್ಕೂ ಬಂದರೆ ಉತ್ತಮ: ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ಶಾಸಕರಿಗೆ ರಥಯಾತ್ರೆ ಮತ್ತು ಸಮಾವೇಶಗಳ ರೂಟ್ ಮ್ಯಾಪ್ ವಿವರಿಸಿದ ಬಿ.ಎಲ್. ಸಂತೋಷ್, ನಿಮ್ಮ ಸಲಹೆಗಳು ಇದ್ದರೆ ಕೊಡಿ ಎಂದು ಶಾಸಕರಿಗೆ ಹೇಳಿದರು. ಇದಕ್ಕೆ ಪ್ರಧಾನಮಂತ್ರಿ ನಮ್ಮ ಭಾಗಕ್ಕೂ ಬಂದರೆ ಉತ್ತಮ ಎಂದು ಕೆಲವು ಶಾಸಕರು ಹೇಳಿದರೆ, ಇನ್ನೂ ಕೆಲವರು ಬಿಸಿಲಿನಲ್ಲಿ ಸಮಾವೇಶ ಆಯೋಜನೆ ಬೇಡ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿ ಎಲ್​ ಸಂತೋಷ್ ಅವರು, ಎಲ್ಲವನ್ನೂ ನೋಡಿಕೊಂಡೇ ಕಾರ್ಯಕ್ರಮ ರೂಪಿಸೋಣ ಎಂದು ತಿಳಿಸಿದರು.

ಬಿಜೆಪಿ ರಥಯಾತ್ರೆಗೆ ಕ್ಷಣಗಣನೆ: ಮಾರ್ಚ್ 1 ರಿಂದ ಬಿಜೆಪಿ ರಥಯಾತ್ರೆ ಆರಂಭಗೊಳ್ಳಲಿದೆ, ಮಾರ್ಚ್ 1, 2 ಮತ್ತು 3 ರಂದು ರಥಯಾತ್ರೆ ಉದ್ಘಾಟನೆ ನಡೆಯಲಿದೆ. ಮಾರ್ಚ್ 1 ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಚಾಲನೆ ನೀಡಿದರೆ, ಮಾರ್ಚ್ 2 ರಂದು ಬೆಳಗಾವಿ ಜಿಲ್ಲೆಯ ನಂದಗಢದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಲಿದ್ದಾರೆ. ಮಾರ್ಚ್ 3 ರಂದು ಬೆಂಗಳೂರು ಮತ್ತು ಬಸವ ಕಲ್ಯಾಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಯುವಜನತೆ ಮದ್ಯಪಾನದ ಚಟಕ್ಕೆ ಬಲಿಯಾಗದಂತೆ ಜಾಗೃತಿ ಮೂಡಿಸಬೇಕು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.