ETV Bharat / state

ರಾಜ್ಯಕ್ಕೆ ಬಾರದ ಹೈಕಮಾಂಡ್ ವೀಕ್ಷಕರು: ಬಿಜೆಪಿ ಶಾಸಕಾಂಗ ಸಭೆ ನಾಳೆಗೆ ಮುಂದೂಡಿಕೆ - ಕಾಂಗ್ರೆಸ್ ಗ್ಯಾರಂಟಿ

ಹೈಕಮಾಂಡ್ ನಿಂದ ಇಬ್ಬರು ವೀಕ್ಷಕರು ಆಗಮಿಸಲಿದ್ದು, ಇವತ್ತು ಎಲ್ಲ ಶಾಸಕರ ಜೊತೆ ಚರ್ಚೆ ಮಾಡಿ ನೂತನ ರಾಜ್ಯಾಧ್ಯಕ್ಷರು ಹಾಗೂ ಪ್ರತಿಪಕ್ಷ ನಾಯಕರ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

bjp-legislative-meeting-postponed-to-tomorrow
ರಾಜ್ಯಕ್ಕೆ ಬಾರದ ಹೈಕಮಾಂಡ್ ವೀಕ್ಷಕರು: ಬಿಜೆಪಿ ಶಾಸಕಾಂಗ ಸಭೆ ನಾಳೆಗೆ ಮುಂದೂಡಿಕೆ
author img

By

Published : Jul 3, 2023, 8:20 PM IST

ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಾಳೆಗೆ ಮುಂದೂಡಿಕೆಯಾಗಿದೆ. ಹೈಕಮಾಂಡ್ ವೀಕ್ಷಕರು ಇನ್ನು ಆಗಮಿಸದೇ ಇರುವ ಕಾರಣದಿಂದಾಗಿ ನಾಳೆಗೆ ಶಾಸಕಾಂಗ ಸಭೆ ಮುಂದೂಡಿಕೆಯಾಗಿದ್ದು, ನಾಳೆಯ ಕಲಾಪ ಅಧಿಕೃತ ಪ್ರತಿಪಕ್ಷದ ನಾಯಕನಿಲ್ಲದೇ ನಡೆಯಲಿದೆ. ಆದರೆ ಗ್ಯಾರಂಟಿ ವಿಚಾರದಲ್ಲಿನ ಬಿಜೆಪಿ ಹೋರಾಟ ಮಾತ್ರ ಮುಂದುವರೆಯಲಿದೆ. ಉಭಯ ಸದನದಲ್ಲಿ ಬಿಜೆಪಿ ಸದಸ್ಯರು ಹೋರಾಟ ನಡೆಸಿದರೆ ಫ್ರೀಡಂ ಪಾರ್ಕ್ ನಲ್ಲಿ ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.

ಇಂದು ಸಂಜೆ 6 ಗಂಟೆಗೆ ನಡೆಯಬೇಕಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಮುಂದೂಡಿಕೆಯಾಗಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಹಾಗೂ ವಿನೋದ್ ತಾವ್ಡೆ ಹೈಕಮಾಂಡ್ ಪ್ರತಿನಿಧಿಗಳಾಗಿ ಶಾಸಕಾಂಗ ಸಭೆಗೆ ವೀಕ್ಷಕರಾಗಿ ಭಾಗವಹಿಸಬೇಕಿದ್ದು, ಅವರಿಬ್ಬರು ಇನ್ನು ಆಗಮಿಸದೇ ಇರುವ ಕಾರಣದಿಂದಾಗಿ ಶಾಸಕಾಂಗ ಪಕ್ಷದ ಸಭೆಯನ್ನು ನಾಳೆಗೆ ಮುಂದೂಡಿಕೆ ಮಾಡಲಾಗಿದೆ. ನಾಳೆ ಬೆಳಗ್ಗೆ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ನಾಳೆ ಸಂಜೆ ಶಾಸಕಾಂಗ ಪಕ್ಷದ ಸಭೆ ನಡೆಸಿ ಪ್ರತಿಪಕ್ಷ ನಾಯಕನ ಆಯ್ಕೆ ಮಾಡಲಾಗುತ್ತದೆ.

ಪ್ರತಿಪಕ್ಷ ನಾಯಕನ ಆಯ್ಕೆ ಕುರಿತು ದೆಹಲಿಯಿಂದ ವಾಪಸಾದ ಬಳಿಕ ಮಾತನಾಡಿದ ಪಕ್ಷದ ಹಿರಿಯ ನಾಯಕ ಹಾಗೂ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ, ಹೈಕಮಾಂಡ್ ನಿಂದ ಇಬ್ಬರು ವೀಕ್ಷಕರು ಆಗಮಿಸಲಿದ್ದು, ಇವತ್ತು ಎಲ್ಲ ಶಾಸಕರ ಜೊತೆ ಚರ್ಚೆ ಮಾಡಿ ನೂತನ ರಾಜ್ಯಾಧ್ಯಕ್ಷರು ಹಾಗೂ ಪ್ರತಿಪಕ್ಷ ನಾಯಕರ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಅಂತಿಮವಾಗಿ ಇವತ್ತು ತಡ ರಾತ್ರಿ ಅಥವಾ ನಾಳೆ ಪ್ರತಿಪಕ್ಷ ನಾಯಕನ ಆಯ್ಕೆ ಕುರಿತು ತೀರ್ಮಾನ ಮಾಡುತ್ತಾರೆ ಎಂದರು.

ಇತಿಹಾಸದಲ್ಲೇ ಮೊದಲ ಬಾರಿಗೆ ಅಧಿಕೃತ ಪ್ರತಿಪಕ್ಷದ ನಾಯಕನ ಆಯ್ಕೆಯಾಗದೇ ಅಧಿವೇಶನ ನಡೀತ್ತಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾಳೆ ದಿನ ಎಲ್ಲವೂ ಸರಿಹೋಗುತ್ತದೆ ಆ ರೀತಿಯ ಯಾವುದೇ ಗೊಂದಲಗಳು ಇಲ್ಲ ಎಂದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಾತನಾಡಿ, ನಮ್ಮಲ್ಲಿ ಗೊಂದಲವಿಲ್ಲ ಸ್ವಲ್ಪ ತಡವಾಗಿದೆ ಅಷ್ಟೆ. ಪ್ರತಿಪಕ್ಷ ನಾಯಕ ಆಯ್ಕೆ ಮಾಡುತ್ತೇವೆ ನಮ್ಮನ್ನು ಟೀಕಿಸುವ ಕಾಂಗ್ರೆಸ್​ಗೆ ಅಧ್ಯಕ್ಷರೇ ಇಲ್ಲದೇ ಕಾಲಕಳೆದಿದ್ದಾರೆ. ಲೋಕಸಭೆಯಲ್ಲಿ ವಿಪಕ್ಷ ನಾಯಕರೇ ಇಲ್ಲ. ಕಾಂಗ್ರೆಸ್​ಗೆ ಎಷ್ಟೊ ರಾಜ್ಯಗಳಲ್ಲಿ ವಿಪಕ್ಷ ನಾಯಕನೇ ಇಲ್ಲ ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಅದನ್ನು ಅವರು ಮೊದಲು ನೋಡಿಕೊಳ್ಳಲಿ ಎಂದು ಟೀಕಿಸಿದರು.

ಫ್ರೀಡಂ ಪಾರ್ಕ್ ನಲ್ಲಿ ಧರಣಿ: ಪ್ರತಿಪಕ್ಷ ನಾಯಕನ ಆಯ್ಕೆ ಇಲ್ಲದೆ ಇದ್ದರೂ ನಾಳೆ ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿ ಮುಂದಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ನಾಳೆ ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಯಲಿದ್ದು, ಸದನದ ಒಳಗೂ ಕಾಂಗ್ರೆಸ್ ಗ್ಯಾರಂಟಿಗಳ ಷರತ್ತು ವಿರೋಧಿಸಿ ಹೋರಾಟ ನಡೆಸಲಿದೆ. ಈ ಕುರಿತು ಮಾಹಿತಿ ನೀಡಿರುವ ರವಿಕುಮಾರ್, ನಾಳೆ ಫ್ರೀಡಂ ಪಾರ್ಕ್​​​​​ ನಲ್ಲಿ ನಮ್ಮ ಹೋರಾಟ ನಡೆಯಲಿದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಹೋರಾಟ ನಡೆಯಲಿದೆ ಎಂದರು.

ನಾಳಿನ ಹೋರಾಟದಲ್ಲಿ ಮಾಜಿ ಸಿಎಂ, ಮಾಜಿ ಸಚಿವರು ಸೇರಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಎರಡು ಸದನಗಳಲ್ಲಿ ನಮ್ಮ ಸದಸ್ಯರು ಹೋರಾಟ ಮಾಡುತ್ತಾರೆ. ಗ್ಯಾರಂಟಿ ಯೋಜನೆಯಲ್ಲಿರುವ ನ್ಯೂನತೆ ವಿರೋಧಿಸಿ ಪ್ರತಿಭಟನೆ ನಡೆಯಲಿದೆ. ವಿಧಾನ ಸಭೆಯಲ್ಲಿ ಮಾಜಿ ಸಿಎಂ ಬೊಮ್ಮಯಿ ನೇತೃತ್ವದಲ್ಲಿ ಹೋರಾಟ ನಡೆಯಲಿದ್ದು, ವಿಧಾನ ಪರಿಷತ್​ನಲ್ಲಿ ಕೋಟಾ ಶ್ರೀನಿವಾಸ್ ಪೂಜಾರಿ ನೇತೃತ್ವದಲ್ಲಿ ಹೋರಾಟ ನಡೆಯಲಿದೆ ಎಂದು ತಿಳಿಸಿದರು.

ಇದನ್ನೂ ಓದಿ:Basavaraj Bommai: ಸಿಎಂ ಕಚೇರಿಯಲ್ಲಿ ಸಣ್ಣ ಹುದ್ದೆಗೆ ₹ 30 ಲಕ್ಷ, ದೊಡ್ಡ ಹುದ್ದೆಗೆ ಕೋಟಿ ಕೋಟಿ ಇದೆ: ಮಾಜಿ ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.