ETV Bharat / state

ವಾಜಪೇಯಿ ಪುಣ್ಯತಿಥಿ: ರಾಜ್ಯ ಬಿಜೆಪಿ ನಾಯಕರಿಂದ ನಮನ - ಅಟಲ್ ಬಿಹಾರಿ ವಾಜಪೇಯಿ

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ'ದಲ್ಲಿ ಇಂದು ಅಟಲ್ ಬಿಹಾರಿ ವಾಜಪೇಯಿ ಪುಣ್ಯತಿಥಿ ಕಾರ್ಯಕ್ರಮ ನಡೆಯಿತು.

ವಾಜಪೇಯಿಗೆ ಶ್ರದ್ಧಾಪೂರ್ವಕ ನಮನ ಸಲ್ಲಿಸಿದ ಬಿಜೆಪಿ ನಾಯಕರು

author img

By

Published : Aug 16, 2023, 6:17 PM IST

ಬೆಂಗಳೂರು : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ರಾಜ್ಯ ಬಿಜೆಪಿ ನಾಯಕರು ನುಡಿ ನಮನ ಸಲ್ಲಿಸಿದರು. ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ. ಜಿ ಮಹೇಶ್ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಅವರು ಬಿಜೆಪಿಗೆ ಮುಕುಟಪ್ರಾಯರು. ಪಕ್ಷಕ್ಕೊಂದು ವರ್ಚಸ್ಸು ನೀಡಿದ ನಾಯಕ ಎಂದು ನೆನಪಿಸಿಕೊಂಡರು.

ಅಟಲ್‍ ಅವರು ಸೋತ ಸಂದರ್ಭದಲ್ಲಿ ಬೆಂಗಳೂರಿನಲ್ಲೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭದ್ರಾವತಿಯ ಕಾರ್ಯಕರ್ತರೊಬ್ಬರು ಆಗ ಆತ್ಮಹತ್ಯೆ ಮಾಡಿಕೊಂಡಿದ್ದರು. ನಾವು ಸೋತಿದ್ದೇವೆಂದು ಹಿಂಜರಿಕೆ ಬೇಡ ಎಂದು ಅಟಲ್‍ಜಿ ಹೇಳಿದ್ದರು. ಆ ಮಾತುಗಳು ಕರ್ನಾಟಕದ ರಾಜಕಾರಣಕ್ಕೆ ಇಂದಿಗೂ ಪ್ರಸ್ತುತ ಎಂದರು. ಅಟಲ್‍ಜಿ ಗುಣಗಳನ್ನು ನಾವು ಅಳವಡಿಸಿಕೊಳ್ಳೋಣ ಎಂದರು.

ರಾಜಕೀಯ ನಾಯಕರ ಟ್ವೀಟ್​: ವಿಶ್ವ ಕಂಡ ಮಹಾನ್ ನಾಯಕ, ಕವಿ ಹೃದಯದ ಮುತ್ಸದ್ಧಿ, ರಾಜನೀತಿಜ್ಞ, ಮಾಜಿ ಪ್ರಧಾನಮಂತ್ರಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯಂದು ಅವರಿಗೆ ಶ್ರದ್ಧಾಪೂರ್ವಕ ನಮನಗಳು. ಅವರ ನಡೆ, ನುಡಿ, ಬದುಕು, ಸಾಧನೆಗಳೆಲ್ಲವೂ ಆದರ್ಶಪ್ರಾಯ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಸಭೆ ಸದಸ್ಯ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

  • ವಿಶ್ವ ಕಂಡ ಮಹಾನ್ ನಾಯಕ, ಕವಿ ಹೃದಯದ ಮುತ್ಸದ್ಧಿ ರಾಜನೀತಿಜ್ಞ, ಮಾಜಿ ಪ್ರಧಾನಮಂತ್ರಿ ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯಂದು ಅವರಿಗೆ ಶ್ರದ್ಧಾಪೂರ್ವಕ ನಮನಗಳು. ಅವರ ನಡೆ, ನುಡಿ, ಬದುಕು, ಸಾಧನೆಗಳೆಲ್ಲವೂ ಆದರ್ಶಪ್ರಾಯ. #AtalBihariVajpayee #Sadaiva_Atal pic.twitter.com/7fxaf3N0K1

    — B.S.Yediyurappa (@BSYBJP) August 16, 2023 " class="align-text-top noRightClick twitterSection" data=" ">

ವಾಜಪೇಯಿ ಪುಣ್ಯತಿಥಿಯಂದು ಶತಶತ ನಮನಗಳು. ದೇಶದ ಅಖಂಡತೆಗೆ ಅಭಿವೃದ್ಧಿಯ ಅಡಿಪಾಯ ಹಾಕಿಕೊಟ್ಟ ಅಟಲ್ ಕನಸುಗಳು, ನವಭಾರತ ನಿರ್ಮಾಣದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಾಕಾರಗೊಳ್ಳುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.

  • ದೇಶಕಂಡ ಶ್ರೇಷ್ಠ ಆಡಳಿತಗಾರ, ರಾಜಕೀಯ ಮುತ್ಸದ್ಧಿ, ಮಾಜಿ ಪ್ರಧಾನಿ ದಿವಂಗತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯಂದು ಶತಶತ ನಮನಗಳು.

    ದೇಶದ ಅಖಂಡತೆಗೆ ಅಭಿವೃದ್ಧಿಯ ಅಡಿಪಾಯ ಹಾಕಿಕೊಟ್ಟ ಅಟಲ್ ಜೀ ಅವರ ಕನಸುಗಳು, ನವಭಾರತ ನಿರ್ಮಾಣದೊಂದಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಾಕಾರಗೊಳ್ಳುತ್ತಿದೆ. pic.twitter.com/5E78hS9dwb

    — Nalinkumar Kateel (@nalinkateel) August 16, 2023 " class="align-text-top noRightClick twitterSection" data=" ">

ವಾಜಪೇಯಿ ಪುಣ್ಯಸ್ಮರಣೆಯ ದಿನದಂದು ಭಕ್ತಿಪೂರ್ವಕ ನಮನಗಳು. ಅವರ ಸರಳ ವ್ಯಕ್ತಿತ್ವ, ನಾಯಕತ್ವ ಗುಣಗಳು ಎಲ್ಲರಿಗೂ ಸದಾ ಆದರ್ಶಪ್ರಾಯ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸ್ಮರಿಸಿದ್ದಾರೆ.

  • ಮಾಜಿ ಪ್ರಧಾನಿ, ಶ್ರೇಷ್ಠ ಸಂಸದೀಯ ಪಟು, ಕವಿ, ವಾಗ್ಮಿ, ಅಜಾತಶತ್ರು, ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯಸ್ಮರಣೆಯ ದಿನದಂದು ಭಕ್ತಿಪೂರ್ವಕ ನಮನಗಳು.

    ಅವರ ಸರಳ ವ್ಯಕ್ತಿತ್ವ, ನಾಯಕತ್ವ ಗುಣಗಳು ಎಲ್ಲರಿಗೂ ಸದಾ ಆದರ್ಶಪ್ರಾಯವಾಗಿವೆ.#AtalBihariVajpayee pic.twitter.com/frIbxbzj5p

    — Basavaraj S Bommai (@BSBommai) August 16, 2023 " class="align-text-top noRightClick twitterSection" data=" ">

ಇದನ್ನೂ ಓದಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪುಣ್ಯತಿಥಿ : ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ಪುಷ್ಪ ನಮನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.