ಬೆಂಗಳೂರು: ಅತೃಪ್ತ 14 ಶಾಸಕರ ಅನರ್ಹ ವಿಚಾರದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಸಂವಿಧಾನದ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ನಿವಾಸದಲ್ಲಿ ಹೇಳಿದ್ದಾರೆ.
ಮೈತ್ರಿ ನಾಯಕರ ಓಲೈಕೆಗೆ ಸ್ಪೀಕರ್ ಈ ರೀತಿ ನಡೆದುಕೊಂಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ, ಇದನ್ನು ನಾವು ಖಂಡಿಸುತ್ತೇವೆ ಎಂದಿದ್ದಾರೆ.
ಬಿಜೆಪಿ ಶಾಸಕ ಮಾಧುಸ್ವಾಮಿ:
ಈ ಕುರಿತು ಮಾತನಾಡಿದ ಬಿಜೆಪಿ ಶಾಸಕ ಮಾಧುಸ್ವಾಮಿ, ನಾಳೆಯ ಬಹುಮತ ಸಾಬೀತಿನ ಮೇಲೆ ಸ್ಪೀಕರ್ ತೀರ್ಮಾನ ಯಾವುದೇ ಪರಿಣಾಮ ಬೀರುವುದಿಲ್ಲ. ಅವ್ರು ಇದ್ದಿದ್ರೂ ಇಲ್ಲಿಗೆ ಬರ್ತಿರಲಿಲ್ಲ. ಸ್ಪೀಕರ್ ಅವರಿಗೆ ನಿನ್ನೆಯವರೆಗೆ ಅವಕಾಶ ಇತ್ತೇನೋ. ಅವರು ಬರ್ಲಿಲ್ಲ ಅಂತಾ ಅನರ್ಹ ಮಾಡಿರಬಹುದು.
ಸ್ಪೀಕರ್ ಸ್ವಲ್ಪ ಎಡವಿದ್ದಾರೆ ಅನ್ನಿಸುತ್ತೆ. ಅವ್ರು ಸುಪ್ರೀಂನ ಆದೇಶವನ್ನು ಪರಿಗಣಿಸಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಅವ್ರೇ ಹೇಳ್ಬೇಕಿದೆ ಎಂದು ಬಿಎಸ್‌ವೈ ನಿವಾಸದ ಬಳಿ ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ.
ಶಾಸಕ ಬಸವರಾಜ್ ಬೊಮ್ಮಾಯಿ:
ವಿಪ್ ಕೊಡಬೇಕು ಬಿಡಬೇಕು ಅನ್ನೋದು ಪಕ್ಷಕ್ಕೆ ಬಿಟ್ಟದ್ದು. ವಿಧಾನ ಮಂಡಲದ ದುರುಪಯೋಗ ಸರಿಯಲ್ಲ. ಸ್ಪೀಕರ್ ತೀರ್ಪು ಸರಿಯಿಲ್ಲ. ಇದರಿಂದ ಬಿಜೆಪಿಗೆ ಯಾವುದೇ ನಷ್ಟ ಇಲ್ಲ. ಸುಪ್ರೀಂಕೋರ್ಟ್ನಲ್ಲಿ ಇದು ಹೊಸ ವ್ಯಾಖ್ಯಾನ ಪಡೆಯುತ್ತೆ. ಶಾಸಕರು ರಾಜೀನಾಮೆ ನೀಡಲು ಸರ್ವ ಸ್ವತಂತ್ರರು ಇದ್ದಾರೆ. ನಾಳೆ ಬಿಜೆಪಿ ಬಹುಮತ ಪಡೆಯುತ್ತದೆ ಎಂದು ಶಾಸಕ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್:
ಈ ಕುರಿತು ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸ್ಪೀಕರ್ ನಿರ್ಧಾರ ಅನುಮಾನಸ್ಪದವಾಗಿದೆ. ಉಮೇಶ್ ಜಾಧವ್ ವಿಚಾರದಲ್ಲಿ, ಈಗ ಈ ಶಾಸಕರ ವಿಚಾರದಲ್ಲಿ ವ್ಯತಿರಿಕ್ತ ನಡವಳಿಕೆ ತೋರಿದ್ದಾರೆ. ರಾಜೀನಾಮೆ ಅರ್ಜಿಗಳು ಮೊದಲು ಸಲ್ಲಿಕೆ ಆಗಿದ್ವು. ಬಳಿಕ ಅನರ್ಹತೆ ಅರ್ಜಿ ಸಲ್ಲಿಕೆ ಆಗಿದೆ. ಆದರೆ ಸ್ಪೀಕರ್ ರಾಜೀನಾಮೆ ಇತ್ಯರ್ಥ ಬದಲು ಅನರ್ಹ ಮಾಡಿದ್ದಾರೆ. ಇದು ದುರುದ್ದೇಶಪೂರಿತ ತೀರ್ಪು. ಕಾನೂನು ಬಾಹಿರ ತೀರ್ಪು ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಸ್ಪೀಕರ್ ನಿರ್ಧಾರ ಖಂಡಿಸಿದ ಬಿಜೆಪಿ ನಾಯಕರು ಸಂಸದ ರಾಜೀವ್ ಚಂದ್ರಶೇಖರ್:
ಸುಪ್ರೀಂಕೋರ್ಟ್ನಲ್ಲಿ ಸ್ಪೀಕರ್ ತೀರ್ಪು ಕೆಲವೇ ಗಂಟೆಗಳಲ್ಲಿ ಬಿದ್ದು ಹೋಗುತ್ತದೆ. ಸ್ಪೀಕರ್ ತೀರ್ಪು ಯಾರಿಗೂ ಸಮಾಧಾನ ತಂದಿಲ್ಲ. ಮುಂದೆ ಕಾನೂನು ಹೋರಾಟ ನಡೆಯುತ್ತದೆ. ಸ್ಪೀಕರ್ ತಮ್ಮ ವ್ಯಕ್ತಿತ್ವಕ್ಕೂ, ಸದನಕ್ಕೂ ಕಪ್ಪು ಚುಕ್ಕೆ ತಂದಿದ್ದಾರೆ. ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಆಗಿಲ್ಲ. ಅವಿಶ್ವಾಸ ನಿರ್ಣಯ ಬಗ್ಗೆ ಈಗ ಚರ್ಚೆ ಅಪ್ರಸ್ತುತ. ಸ್ಪೀಕರ್ ಆದೇಶ ಕಾನೂನು ಬಾಹಿರ, ದುರುದ್ದೇಶಪೂರಿತವಾಗಿದೆ ಎಂದು ಸಂಸದ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಸ್ಪೀಕರ್ ಅವರ ಆದೇಶ ಭ್ರಷ್ಟ ಸರ್ಕಾರದ ವಿರುದ್ಧ ಬಂಡಾಯ ಎದ್ದ ಶಾಸಕರ ವಿರುದ್ಧ ಹಾಗೂ ತಮ್ಮ ನಾಯಕ ಸಿದ್ದರಾಮಯ್ಯನವರ ಪರವಾಗಿ ರಮೇಶ್ ಕುಮಾರ್ ತೆಗೆದುಕೊಂಡ ಕೀಳು ಪ್ರತೀಕಾರದ ಕ್ರಮವಾಗಿದೆ ಎನ್ನದೇ ಬೇರೆ ವಿಧಿಯಿಲ್ಲ ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Intro:Body:
ಯಡಿಯೂರಪ್ಪ ಬೊಮ್ಮಾಯಿ, ಮಾಧುಸ್ವಾಮಿ, ಶೆಟ್ಟರ್ ಸ್ಟೇಟ್ಮೆಂಟ್ ಇಲ್ಲಿದೆ ವಿಸುವಲ್ ವಾಟ್ಸಾಪ್ ಬೆಂಗಳೂರು ಗ್ರೂಪ್ನಲ್ಲಿ ಭವ್ಯ ಕಳಿಸಿದ್ದಾರೆ. ಪಾಯಿಂಟ್ಸ್ ಇದೆ ಸ್ಟ್ರಿಫ್ಟ್ ಮಾಡಿ
[7/28, 1:46 PM] bhavya banglore: ಅತೃಪ್ತ 14 ಶಾಸಕರ ಅನರ್ಹ ವಿಚಾರ.
ಸ್ಪೀಕರ್ ರಮೇಶ್ ಕುಮಾರ್ ಸಂವಿಧಾನ ವಿರುದ್ಧವಾಗಿ ನಡೆದುಕೊಂಡಿದ್ದಾರೆ.
ಮೈತ್ರಿ ನಾಯಕರ ಓಲೈಕೆಗೆ ಸ್ಪೀಕರ್ ಈ ರೀತಿ ನಡೆದುಕೊಂಡಿದ್ದಾರೆ.
ಪ್ರಜಾಪ್ರಭುತ್ವ ವಿರುದ್ದವಾಗಿ ಸ್ಪೀಕರ್ ನಡೆದುಕೊಂಡಿದ್ದಾರೆ
ಇದನ್ನ ನಾವು ಖಂಡಿಸುತ್ತೇವೆ.
ಸಿಎಂ ಬಿಎಸ್ ಯಡಿಯೂರಪ್ಪ ನಿವಾಸದಲ್ಲಿ ಹೇಳಿಕೆ.
[7/28, 1:51 PM] bhavya banglore: ಅತೃಪ್ತ ಶಾಸಕರ ಅನರ್ಹತೆ ಬೆನ್ನಲ್ಲೇ ಬಿಎಸ್‌ವೈ ನಿವಾಸದಲ್ಲಿ ರಾಜಕೀಯ ಚರ್ಚೆ ಶುರುವಾಗಿದೆ.
ಮತ್ತೆ ಬಿಎಸ್‌ವೈ ನಿವಾಸಕ್ಕೆ ಶೋಭಾ ಕರಂದ್ಲಾಜೆ,ಶಾಸಕ ಸುಕುಮಾರ್ ಶೆಟ್ಟಿ, ಕೆ.ಜಿ.ಬೋಪಯ್ಯ
ಬಿಎಸ್‌ವೈ ನಿವಾಸಕ್ಕೆ ಮಾದುಸ್ವಾಮಿ, ಬಸವರಾಜು ,
ಸೇರಿದಂತೆ ಹಲವರು ಆಗಮನ
[7/28, 1:58 PM] bhavya banglore: ಅತೃಪ್ತ ಶಾಸಕರ ಅನರ್ಹ ವಿಚಾರ
ಬಿಎಸ್‌ವೈ ನಿವಾಸದ ಬಳಿ ಮಾದುಸ್ವಾಮಿ ಹೇಳಿಕೆ
ಸ್ಪೀಕರ್ ರವರ ಡಿಸಿಷನ್ ಬಿಜೆಪಿ ನಾಳೆ ಬಹುಮತ ಸಾಬೀತಿನ ಮೇಲೆ ಯಾವುದೇ ಪರಿಣಾಮ ಬೀರೋದಿಲ್ಲ
ಅವ್ರು ಇದ್ದಿದ್ರೂ ಇಲ್ಲಿಗೆ ಬರ್ತಿರ್ಲಿಲ್ಲ
ಸ್ಪೀಕರ್ ಅವ್ರಿಗೆ ನಿನ್ನೆವರೆಗೂ ಅವಕಾಶ ಇತ್ತೇನೊ
ಅವ್ರು ಬರ್ಲಿಲ್ಲ ಅಂತ ಅನರ್ಹ ಮಾಡಿರ್ಬೋದು
ಅವ್ರಿಗೇನು ಇಡಿ ಟರ್ಮ್ ಕಂಟೆಸ್ಟ್ ಮಾಡೋಕೆ ಆಗೋದಿಲ್ಲ ಅನ್ನೋದೇನು ಇಲ್ಲ
ಸಂವಿಧಾನ ಯಾವುದೇ ಹುದ್ದೆ ಅಲಂಕರಿಸಬಾರ್ದು ಅಂತ ಅಷ್ಟೇ ಹೇಳೋದು
ಸ್ಪೀಕರ್ ಸ್ವಲ್ಪ ಎಡವಿದ್ದಾರೆ ಅನ್ನಿಸುತ್ತೆ
ಜಿನೈನಿಟಿ ಆಫ್ ರೆಸಿಗ್ನೇಷನ್ ಅನ್ನೋದನ್ನು ಬಳಸುತ್ತೇನೆ
ಇದ್ರ ಪ್ರಕಾರ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ್ರೆ ಕರೆದು ಕೇಳುವ ಅವಕಾಶವಿದೆ
ಆರ್ಡರ್ ಪ್ರಕಾರ ಅವ್ರ ರಾಜೀನಾಮೆ ಸರಿಯಿದೆ
ಈ ಹಿನ್ನೆಲೆ ಯಾರೂ ಕೂಡಾ ಈ ಬಗ್ಗೆ ಕೇಳುವ ಹಾಗಿಲ್ಲ ಸ್ಪೀಕರ್ ಕೂಡಾ
ಒತ್ತಡಕ್ಕೆ ಮಣಿದಿದ್ದರೆ ಮಾತ್ರ ಸರ್ಚ್ ಮಾಡಬೇಕು
ಎಂಎಎಲ್ ಗಳು ಗವರ್ನಮೆಂಟ್ ಸರ್ವೆಂಟ್‌ಗಳಲ್ಲ
ರಮೇಶ್ ಕುಮಾರ್ ಹೊಸ ದಾರಿ ಹಿಡಿದಿದ್ದಾರೆ
ಇದು ಮುಂದೆ ಮಾರ್ಗದರ್ಶನವಾಗುತ್ತೆ
ಅವ್ರು ಸುಪ್ರೀಂನ ಆದೇಶವನ್ನು ಪರಿಗಣಿಸಿಲ್ಲ
ಮುಂದಿನ ದಿನಗಳಲ್ಲಿ ಈ ಬಗ್ಗೆ ಅವ್ರೇ ಹೇಳ್ಬೇಕಿದೆ
[7/28, 2:01 PM] bhavya banglore: ವಿಪ್ ಕೊಡಬೇಕು ಬಿಡಬೇಕು ಅನ್ನೋದು ಪಕ್ಷಕ್ಕೆ ಬಿಟ್ಟದ್ದು.
ವಿಧಾನ ಮಂಡಲ ದುರುಪಯೋಗ ಸರಿಯಲ್ಲ.
ಸ್ಪೀಕರ್ ತೀರ್ಪು ಸರಿಯಲ್ಲ.
ಇದರಿಂದ ಬಿಜೆಪಿಗೆ ಯಾವುದೇ ನಷ್ಟ ಇಲ್ಲ.
ಸುಪ್ತೀಂ ಕೋರ್ಟ್ ನಲ್ಲಿ ಇದು ಹೊಸ ವ್ಯಾಖ್ಯಾನ ಪಡೆಯುತ್ತೆ.
ಶಾಸಕರು ರಾಜೀನಾಮೆ ನೀಡಲು ಸರ್ವ ಸ್ವತಂತ್ರರು ಇದ್ದಾರೆ.
ನಾಳೆ ಬಿಜೆಪಿ ಬಹುಮತ ಪಡೆಯುತ್ತದೆ.
ಶಾಸಕ ಬಸವರಾಜ್ ಬೊಮ್ಮಾಯಿ ಹೇಳಿಕೆ
[7/28, 2:30 PM] bhavya banglore: ಬಿಎಸ್ವೈ ನಿವಾಸ...
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ
ಸ್ಪೀಕರ್ ನಿರ್ಧಾರ ಅನುಮಾನಾಸ್ಪದ
ಸ್ಪೀಕರ್ ನಡವಳಿಕೆಗಳು ವ್ಯತಿರಿಕ್ತವಾಗಿವೆ
ಉಮೇಶ್ ಜಾಧವ್ ವಿಚಾರದಲ್ಲಿ, ಈಗ ಈ ಶಾಸಕರ ವಿಚಾರದಲ್ಲಿ ವ್ಯತಿರಿಕ್ತ ನಡವಳಿಕೆ ತೋರಿದ್ದಾರೆ
ರಾಜೀನಾಮೆ ಅರ್ಜಿಗಳು ಮೊದಲು ಸಲ್ಲಿಕೆ ಆಗಿದ್ವು
ಬಳಿಕ ಅನರ್ಹತೆ ಅರ್ಜಿ ಸಲ್ಲಿಕೆ ಆದವು
ಆದರೆ ಸ್ಪೀಕರ್ ರಾಜೀನಾಮೆ ಇತ್ಯರ್ಥ ಬದಲು ಅನರ್ಹ ಮಾಡಿದ್ದಾರೆ
ಇದು ದುರುದ್ದೇಶಪೂರಿತ ತೀರ್ಪು, ಕಾನೂನು ಬಾಹಿರ ತೀರ್ಪು
ಸುಪ್ರೀಂಕೋರ್ಟ್ ನಲ್ಲಿ ಸ್ಪೀಕರ್ ತೀರ್ಪು ಕೆಲವೇ ಗಂಟೆಗಳಲ್ಲಿ ಬಿದ್ದು ಹೋಗುತ್ತದೆ
ಸ್ಪೀಕರ್ ತೀರ್ಪು ಯಾರಿಗೂ ಸಮಾಧಾನ ತಂದಿಲ್ಲ
ಮುಂದೆ ಕಾನೂನು ಹೋರಾಟ ನಡೆದೇನಡೆಯುತ್ತದೆ
ಸ್ಪೀಕರ್ ತಮ್ಮ ವ್ಯಕ್ತಿತ್ವಕ್ಕೂ ಸದನಕ್ಕೂ ಕಪ್ಪುಚುಕ್ಕೆ ತಂದಿದ್ದಾರೆ
ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಆಗಿಲ್ಲ
ಅವಿಶ್ವಾಸ ನಿರ್ಣಯ ಬಗ್ಗೆ ಈಗ ಚರ್ಚೆ ಅಪ್ರಸ್ತುತ
ಸ್ಪೀಕರ್ ಆದೇಶ ಕಾನೂನುಬಾಹಿರ, ದುರುದ್ದೇಶಪೂರಿತ - ಸಂಸದ ರಾಜೀವ ಚಂದ್ರಶೇಖರ್
ಬೆಂಗಳೂರು
ಕಾಂಗ್ರೆಸ್ ಮತ್ತು ಜೆಡಿಎಸ್ ಬಂಡಾಯ ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್
ರಮೇಶ್ ಕುಮಾರ್ ಅವರ ಆದೇಶ ಕಾನೂನುಬಾಹಿರವಷ್ಟೇ ಅಲ್ಲದೇ ಅವರ ಅಧಿಕಾರವನ್ನು ಮೀರಿದ್ದಾಗಿದೆ ಎಂದು ಬಿಜೆಪಿ ರಾಜ್ಯಸಭೆ ಸದಸ್ಯ ರಾಜೀವ ಚಂದ್ರ್ರಶೇಖರ್ ತಿಳಿಸಿದ್ದಾರೆ.
ಸ್ಪೀಕರ್ ಅವರ ಆದೇಶ ಭ್ರಷ್ಟ ಸರ್ಕಾರದ ವಿರುದ್ಧ ಬಂಡಾಯ ಎದ್ದ ಶಾಸಕರ ವಿರುದ್ಧ ಹಾಗು
ತಮ್ಮ ನಾಯಕ ಸಿದ್ದರಾಮಯ್ಯನವರ ಪರವಾಗಿ, ರಮೇಶ್ ಕುಮಾರ್ ತೆಗೆದುಕೊಂಡ ಕೀಳು ಪ್ರತೀಕಾರದ ಕ್ರಮವಾಗಿದೆ ಎನ್ನದೇ ವಿಧಿಯಿಲ್ಲ ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ
ಅಧಿಕಾರದ ದುರ್ಬಳಕೆ ಮತ್ತು ಸರ್ವಾಧಿಕಾರಿತನದ ತೀರ್ಪನ್ನು ಪ್ರಶ್ನಿಸದೇ ಇರಲು ಸಾಧ್ಯವಿಲ್ಲ, ಕುದುರೆ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟದ್ದಲ್ಲದೆ, ಸಂವಿಧಾನ ಮತ್ತು ಸರ್ವೋಚ್ಛ ನ್ಯಾಯಾಲಯಕ್ಕೆ ಅಗೌರವ ತೋರಿ, ದುರುದ್ದೇಶದಿಂದ ಬಂಡಾಯ ಶಾಸಕರ ವಿರುದ್ಧ ಕಾನೂನು ಬಾಹಿರವಾಗಿ ತೆಗೆದುಕೊಂಡ ಕ್ರಮಗಳಿಗಾಗಿ ರಮೇಶ್ ಕುಮಾರ್ ಉತ್ತರದಾಯಿಗಳಾಗಲೇಬೇಕು ಎಂದು ಪ್ರತಿಕ್ರಯಿಸಿದ್ದಾರೆ.Body:ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರು ಅತ್ಯಂತ ಜವಾಬ್ದಾರಿಯಿಂದ ತಮ್ಮ ಅಧಿಕಾರವನ್ನು ಬಳಸಬೇಕು ಎನ್ನುವುದು ಸಂವಿಧಾನದ ಆಶಯವಾಗಿದೆ. ಆದರೆ ಸ್ವಾರ್ಥ ರಾಜಕೀಯ ಮೇಲಾಟಕ್ಕಾಗಿ, ಸಂವಿಧಾನ ಮತ್ತು ನಿಯಮಗಳನ್ನು ದುರ್ಬಳಕೆ ಮಾಡಿಕೊಳ್ಳುವ ಕಾಂಗ್ರೆಸ್ ಏಜೆಂಟರಂತೆ ವರ್ತಿಸುವವರು, ಸಾಂವಿಧಾನಾತ್ಮಕ ಹುದ್ದೆಗಳಲ್ಲಿದ್ದರೆ ಆಗುವ ಅಪಾಯವನ್ನು ರಮೇಶಕುಮಾರ್ ರಂತಹವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಸಂಸದ ರಾಜೀವ್ ಚಂದ್ರಶೇಖರ್ ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದಾರೆConclusion:
Conclusion: