ETV Bharat / state

ಎರಡು‌ ಸಾವಿರ ಬಡ ಜನರಿಗೆ ದಿನಸಿ ಕಿಟ್​​​ ವಿತರಿಸಿ ನೆರವಾದ ಬಿಜೆಪಿ ಮುಖಂಡ

ಬಾಕ್ಸರ್ ನಾಗರಾಜ್ ಕಳೆದ ವಾರವಷ್ಟೇ ವಿಜಿನಾಪುರ ವಾರ್ಡ್​ನಲ್ಲಿ ಆರು ಸಾವಿರ ಜನಕ್ಕೆ ದಿನಸಿ ಕಿಟ್ ವಿತರಿಸಿದ್ದರು. ಇದೀಗ ಹೊರಮಾವು ವಾರ್ಡ್​ನ ಯರ್ರಯ್ಯನ ಪಾಳ್ಯದಲ್ಲಿ‌ ಸುಮಾರು ಎರಡು ಸಾವಿರ ಬಡ ಜನತೆಗೆ ಕಿಟ್ ವಿತರಿಸಿದ್ದಾರೆ.

BJP leader providing kit for poor people
ಲಾಕ್​ಡೌನ್ ಸಡಲಿಕೆಯಾದ್ರೂ ನಿಂತಿಲ್ಲ ಕಿಟ್​ ವಿತರಣೆ
author img

By

Published : May 20, 2020, 1:22 PM IST

ಬೆಂಗಳೂರು: ಸರ್ಕಾರ ಲಾಕ್​ಡೌನ್ ಸಡಲಿಕೆ ಮಾಡಿದೆ. ಆದರೂ ಕೂಡ ಸಾವಿರಾರು ಜನ ಕೆಲಸವಿಲ್ಲದೇ ಊಟಕ್ಕೆ ಪರದಾಡುತ್ತಿರುವುದನ್ನು ಗಮನಿಸಿ ಕೆ.ಆರ್.ಪುರ, ರಾಮಮೂರ್ತಿನಗರದ ಬಿಜೆಪಿ ಮುಖಂಡ ಬಾಕ್ಸರ್ ನಾಗರಾಜ್​ ಬಡವರಿಗೆ ದಿನಸಿ ಕಿಟ್ ವಿತರಿಸಿದ್ದಾರೆ.

ಕಿಟ್​ ವಿತರಣಾ ಕಾರ್ಯಕ್ಕೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್​ ಚಾಲನೆ ನೀಡಿದರು. ಬಾಕ್ಸರ್ ನಾಗರಾಜ್ ಕಳೆದ ವಾರವಷ್ಟೇ ವಿಜಿನಾಪುರ ವಾರ್ಡ್​ನಲ್ಲಿ ಆರು ಸಾವಿರ ಜನರಿಗೆ ದಿನಸಿ ಕಿಟ್ ವಿತರಿಸಿದ್ದರು. ಇದೀಗ ಹೊರಮಾವು ವಾರ್ಡ್​ನ ಯರ್ರಯ್ಯನ ಪಾಳ್ಯದಲ್ಲಿ‌ ಸುಮಾರು ಎರಡು ಸಾವಿರ ಬಡ ಜನತೆಗೆ ಕಿಟ್ ವಿತರಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಭೈರತಿ ಬಸವರಾಜ್​, ಬಾಕ್ಸರ್ ನಾಗರಾಜ್ ಕೇವಲ ಒಂದು ವಾರ್ಡ್ ಮುಖಂಡರಲ್ಲ. ಇಡೀ ಕ್ಷೇತ್ರಕ್ಕೆ ಬಿಜೆಪಿ ಮುಖಂಡರು. ಆದ್ದರಿಂದಲೇ ಪ್ರತಿಯೊಂದು ವಾರ್ಡ್ ಬಡವರಿಗೆ ದಿನಸಿ ಹಾಗೂ ತರಕಾರಿ ವಿತರಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ಯಾವೊಬ್ಬ ಬಡವ ಕೂಡಾ ಹಸಿವಿನಿಂದ ಬಳಲಬಾರದು ಎಂದು ನಮ್ಮ ಎಲ್ಲಾ ಮುಖಂಡರಿಗೆ ಸೂಚನೆ‌ ನೀಡಿ ಅವರಿಗೆ ಅಗತ್ಯ ದಿನಸಿ ಹಾಗೂ ತರಕಾರಿ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದರು.

ದಿನಸಿ ಕಿಟ್​ ವಿತರಣೆ

ರಂಜಾನ್ ಹಬ್ಬದ ಪ್ರಯುಕ್ತ ಕೆ.ಆರ್.ಪುರ ಕ್ಷೇತ್ರದ 10 ಸಾವಿರ ಮುಸಲ್ಮಾನ್ ಬಾಂಧವರಿಗೆ ಕಿಟ್​​ಗಳನ್ನು ನೀಡಿದ್ದೇವೆ. ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುವುದಕ್ಕೆ ಹೊರ ರಾಜ್ಯದಿಂದ ಬರುತ್ತಿರುವವರೇ ಕಾರಣ. ಇದಕ್ಕೆ ಸಂಬಂದಪಟ್ಟಂತೆ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡು ಕ್ವಾರಂಟೈನ್​​ನಲ್ಲಿ ಇಡಲಾಗುತ್ತಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.