ETV Bharat / state

ಗೆಲ್ಲಲೇಬೇಕು ಎಂಬ ತವಕದಲ್ಲಿ ಬಿಜೆಪಿ, ಹ್ಯಾಟ್ರಿಕ್ ಗೆಲುವಿನ ಹುಮ್ಮಸ್ಸಿನಲ್ಲಿ ಕಾಂಗ್ರೆಸ್: ಯಾರಿಗೆ ಸಿಗಲಿದೆ ಬ್ಯಾಟರಾಯನಪುರ ಕ್ಷೇತ್ರದ ಚುಕ್ಕಾಣಿ..?

ಪುನರ್ ವಿಂಗಡಣೆಯಾದ ನಂತರ ನಾಲ್ಕನೇ ಬಾರಿ ಚುನಾವಣೆ ನಡೆಯುತ್ತಿರುವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ನಗರದ ಜೊತೆಗೆ ಗ್ರಾಮೀಣ ಪ್ರದೇಶವನ್ನು ಒಳಗೊಂಡಿದೆ. ಈ ಕ್ಷೇತ್ರದಲ್ಲಿ ಗೆಲ್ಲಲೇಬೇಕು ಎಂಬ ತವಕದಲ್ಲಿ ಬಿಜೆಪಿಯಿದೆ. ಆದರೆ, ಕಾಂಗ್ರೆಸ್ ಹ್ಯಾಟ್ರಿಕ್ ಗೆಲುವಿನ ಹುಮ್ಮಸ್ಸಿನಲ್ಲಿದೆ. ಯಾರಿಗೆ ಸಿಗಲಿದೆ ಬ್ಯಾಟರಾಯನಪುರ ಕ್ಷೇತ್ರದ ಚುಕ್ಕಾಣಿ ಎಂಬ ಪ್ರಶ್ನೆ ಕಾಡುತ್ತಿದೆ.

author img

By

Published : Mar 8, 2023, 11:07 PM IST

Updated : Mar 15, 2023, 6:55 PM IST

karnataka assembly election 2023
karnataka assembly election 2023

ಬೆಂಗಳೂರು: ಪುನರ್ ವಿಂಗಡಣೆಯಾದ ನಂತರ ನಾಲ್ಕನೇ ಬಾರಿ ಚುನಾವಣೆ ನಡೆಯುತ್ತಿರುವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ನಗರದ ಜೊತೆಗೆ ಗ್ರಾಮೀಣ ಪ್ರದೇಶ ಸಹ ಒಳಗೊಂಡಿದೆ. ಕಾಂಗ್ರೆಸ್ ಪಕ್ಷದಲ್ಲಿ ಮುಂಚೂಣಿ ನಾಯಕನಾಗಿ ಹೊರ ಹೊಮ್ಮುತ್ತಿರುವ ಯುವ ನಾಯಕ, ಹಾಲಿ ಶಾಸಕ ಕೃಷ್ಣಬೈರೇಗೌಡ ಅವರು ಈ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು.

ಈ ಬಾರಿಯೂ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿರುವ ಅವರು, ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನೇ ನೆಚ್ಚಿಕೊಂಡು ಚುನಾವಣೆಗೆ ಹೋಗುತ್ತಿದ್ದಾರೆ. ಇನ್ನು ತನ್ನ ವಶಕ್ಕೆ ಪಡೆಯಲು ಬಿಜೆಪಿಯೂ ಸತತ ಪ್ರಯತ್ನ ನಡೆಸುತ್ತಲೇ ಇದೆ. ಇದೀಗ ಕಾಂಗ್ರೆಸ್​ನ ವೇಗಕ್ಕೆ ಕಡಿವಾಣ ಹಾಕಲು ಬಿಜೆಪಿ ಸಹ ಸಜ್ಜುಗೊಂಡಿದೆ. ಕಂದಾಯ ಸಚಿವ ಆರ್. ಅಶೋಕ್ ಅವರ ಸೋದರ ಸಂಬಂಧಿಯೂ ಆಗಿರುವ ಎ.ರವಿ ಅವರು, ಸತತ ಮೂರು ಬಾರಿ ಸೋಲು ಕಂಡಿದ್ದಾರೆ. ಈ ಬಾರಿಯೂ ಅವರೇ ಚುನಾವಣಾ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

karnataka assembly election 2023
ಬ್ಯಾಟರಾಯನಪುರ ಕ್ಷೇತ್ರದ ಮಾಹಿತಿ

ಅನುಕಂಪದ ಅಲೆ ಗಿಟ್ಟಿಸಿಕೊಳ್ಳಲು ಬಿಜೆಪಿ ತಂತ್ರ: ಕಳೆದ ಬಾರಿ ಕೇವಲ 5,671 ಮತಗಳ ಅಂತರದಿಂದ ಸೋಲು ಕಂಡಿದ್ದ ರವಿ ಅವರು, ಸೋಲಿನ ಅನುಕಂಪದ ಅಲೆಯನ್ನು ಗಿಟ್ಟಿಸಿಕೊಳ್ಳಲು ಬಿಜೆಪಿ ತಂತ್ರ ರೂಪಿಸಿದೆ. ಈಗಾಗಲೇ ಆಕಾಂಕ್ಷಿಗಳು ಹಾಗೂ ನಾಯಕರು ಕ್ಷೇತ್ರದಲ್ಲಿ ಸುತ್ತಿ ಮತದಾರರ ವಿಶ್ವಾಸ ಗಳಿಸಲು ಯತ್ನಿಸುತ್ತಿದ್ದಾರೆ. ಇನ್ನು ಕೆ.ಎ. ಮುನೀಂದ್ರಕುಮಾರ್, ತಿಮ್ಮೇಶ್ ಗೌಡ, ಎನ್.ಚಕ್ರಪಾಣಿ ಕೂಡ ಈ ಬಾರಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಅವರೂ ಸಹ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.

ಕಾಂಗ್ರೆಸ್ ಮತ್ತು ಬಿಜೆಪಿ ಪೈಪೋಟಿ: ಇನ್ನು ಜೆಡಿಎಸ್ ಈಗಾಗಲೇ ವೇಣುಗೋಪಾಲ್ ಅವರಿಗೆ ಟಿಕೆಟ್ ಘೋಷಿಸಿದೆ. ಕಳೆದ ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಟಿ.ಜಿ. ಚಂದ್ರಣ್ಣ, ಕೇವಲ 22,490 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ ಪೈಪೋಟಿ ನಡುವೆ ಜೆಡಿಎಸ್ ಬಲ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ಕ್ಷೇತ್ರದಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಸ್ಲಿಂ ಹಾಗೂ ಪರಿಶಿಷ್ಟ ಸಮುದಾಯದವರೇ ನಿರ್ಣಾಯಕರು. ತೆಲುಗು, ತಮಿಳು, ಹಿಂದೆ ಸೇರಿದಂತೆ ವಿವಿಧ ಭಾಷೆಗಳ ಜನರು ಸಹ ಈ ಕ್ಷೇತ್ರದಲ್ಲಿ ನೆಲೆಸಿದ್ದಾರೆ. ಅಪಾರ್ಟ್​ಮೆಂಟ್​​ಗಳು, ಗಾರ್ಮೆಂಟ್ಸ್ ಈ ಕ್ಷೇತ್ರದಲ್ಲಿ ಹೆಚ್ಚು ಇದೆ. ಇದರ ಜೊತೆಗೆ ಮಧ್ಯಮವರ್ಗದ ಮತದಾರರೇ ಹೆಚ್ಚು.

ಹಲವು ಕಾಮಗಾರಿಗಳು ನನೆಗುದಿಗೆ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗೆ ಹೊಂದಿಕೊಂಡಿರುವ ಬ್ಯಾಟರಾಯನಪುರ ಕ್ಷೇತ್ರ ವಾಣಿಜ್ಯ ವಹಿವಾಟಿನಲ್ಲೂ ಮುಂದೆ ಇದೆ. ಆದರೆ, ಮೂಲ ಸೌಕರ್ಯಗಳ ಸಮಸ್ಯೆಯಿಂದ ಈ ಕ್ಷೇತ್ರವೂ ಹೊರತಾಗಿಲ್ಲ. ಜಕ್ಕೂರು ಮತ್ತು ಯಲಹಂಕ ಸಂಪರ್ಕಿಸುವ ರೈಲ್ವೆ ಫ್ಲೈಓವರ್ ಕಾಮಗಾರಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಸಾತನೂರು, ಶ್ರೀನಿವಾಸಪುರ, ಕಟ್ಟಿಗೇನಹಳ್ಳಿ, ಥಳಿಸಂದ್ರ, ಬ್ಯಾಟರಾಯನಪುರ, ಜಕ್ಕೂರು, ಅಮೃತಹಳ್ಳಿ, ಅಮೃತನಗರ, ಹೆಗಡೆ ನಗರ ಸೇರಿದಂತೆ ಹಲವು ಬಡಾವಣೆಗಳು ಒಳಗೊಂಡಿದ್ದು, ಕೆಲ ಬಡಾವಣೆಗಳು ಮೂಲ ಸೌಕರ್ಯಗಳಿಲ್ಲದೇ ಸಮಸ್ಯೆ ಅನುಭವಿಸುತ್ತಿದೆ.

karnataka assembly election 2023
ಚುನಾವಣೆಗಳಲ್ಲಿ ಗೆದ್ದ ಅಭ್ಯರ್ಥಿಗಳು ಮತ್ತು ಎರಡನೇ ಸ್ಥಾನ ಪಡೆದ ಅಭ್ಯರ್ಥಿಗಳ ಹಾಗೂ ಅವರು ಪಡೆದ ಮತಗಳ ಮಾಹಿತಿ ಇಲ್ಲಿದೆ.

ಕೆಲವು ಬಡಾವಣೆಗಳಲ್ಲಿ ಕುಡಿಯುವ ನೀರು, ರಸ್ತೆ, ಒಳಚರಂಡಿ ಸಮಸ್ಯೆಗಳು ನಿರಂತರವಾಗಿ ಕಾಡುತ್ತಿವೆ. ಕಾವೇರಿ ಪೈಪ್ ಲೈನ್ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಹಲವು ಸಮಸ್ಯೆಗಳ ನಡುವೆಯೂ ಕೆರೆಗಳು ಮತ್ತು ಮುಖ್ಯ ರಸ್ತೆಗಳಿಗೆ ಕಾಯಕಲ್ಪ ನೀಡಿರುವುದು ಸೇರಿದಂತೆ ಕೆಲವು ಅಭಿವೃದ್ಧಿ ಕೆಲಸಗಳು ನಡೆದಿವೆ.

ಮತದಾರರ ವಿವರ : ಬ್ಯಾಟರಾಯನಪುರ ಕ್ಷೇತ್ರದಲ್ಲಿ ಒಟ್ಟು ಮತದಾರರು 4,69,806 ಇದ್ದು, ಇದರಲ್ಲಿ ಪುರುಷರು 2,43,755, ಮಹಿಳೆಯರು 2,25,938, ತೃತೀಯ ಲಿಂಗಿಗಳು 113 ಇದ್ದಾರೆ.

ಯಾವ ಪಕ್ಷಕ್ಕೆ ಎಷ್ಟು ಮತ ಬಂದಿದೆ: 2018 ರಲ್ಲಿ ಕಾಂಗ್ರೆಸ್ 1,14,964, ಬಿಜೆಪಿ 1,09,293, ಜೆಡಿಎಸ್ 22,490 ಪಡೆದಿದ್ದು, ಅದೇ ರೀತಿ 2013 ರಲ್ಲಿ ಕಾಂಗ್ರೆಸ್ 96,125, ಬಿಜೆಪಿ 63,627, ಜೆಡಿಎಸ್ 41,287 ಪಡೆದಿತ್ತು. ಇನ್ನು 2008 ರಲ್ಲಿ ಕಾಂಗ್ರೆಸ್ ಪಡೆದ ಮತ 60,979, ಬಿಜೆಪಿ 51,627 ಹಾಗೂ ಜೆಡಿಎಸ್ 21,598 ಪಡೆದಿತ್ತು.

ಬ್ಯಾಟರಾಯನಪುರ ಕ್ಷೇತ್ರದಲ್ಲಿ ಮೂರು ಪಕ್ಷಗಳಿಗೂ ಸುಲಭವಾಗಿಲ್ಲ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ತಮ್ಮ ತಮ್ಮ ಲೆಕ್ಕಾಚಾರದಲ್ಲಿ ಚುನಾವಣಾ ತಂತ್ರ ಹೆಣೆಯುತ್ತಿವೆ. ಇನ್ನೊಂದೆಡೆ ಮತದಾರರ ನಡೆಯ ಮೇಲೆ ಅಭ್ಯರ್ಥಿಗಳ ಭವಿಷ್ಯ ತೀರ್ಮಾನವಾಗಲಿದೆ.

ಇದನ್ನೂ ಓದಿ: ಸಿದ್ದರಾಮಯ್ಯ 8 ಸಾವಿರ ಕೋಟಿ ರೂ. ಭ್ರಷ್ಟಾಚಾರ ಮಾಡಿರುವ ಬಗ್ಗೆ ವರದಿ ಇದೆ: ಕೆ ಎಸ್ ಈಶ್ವರಪ್ಪ

Last Updated : Mar 15, 2023, 6:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.