ETV Bharat / state

ಪಠ್ಯಪುಸ್ತಕ ಪರಿಷ್ಕರಣೆ ವಿವಾದ: ಶೀಘ್ರವೇ ಶಿಕ್ಷಣಾಸಕ್ತರ ಸಭೆ ನಡೆಸಲು ಬಿಜೆಪಿ ನಿರ್ಧಾರ - ಪಠ್ಯ ಪುಸ್ತಕ ಪರಿಷ್ಕರಣೆ

ಕಾಂಗ್ರೆಸ್ ಸರ್ಕಾರವು ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾಗಿರುವುದರ ಕ್ರಮವನ್ನು ಪ್ರಶ್ನಿಸಿ ಶಿಕ್ಷಣ ಕ್ಷೇತ್ರದ ವಿಧಾನಪರಿಷತ್ ಸದಸ್ಯರು ಮತ್ತು ಶಿಕ್ಷಣ ರಂಗದಲ್ಲಿ ಆಸಕ್ತಿ ಹೊಂದಿದ ಎಂಎಲ್‍ಎಗಳು, ಎಂಎಲ್‍ಸಿಗಳ ಸಭೆ ಕರೆದು ಚರ್ಚಿಸಲು ಬಿಜೆಪಿ ನಿರ್ಧರಿಸಿದೆ.

textbook revision controversy
ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾಗಿರುವ ಸರ್ಕಾರದ ಕ್ರಮ ಕುರಿತು ಚರ್ಚಿಸಿದ ಬಿಜೆಪಿ ನಾಯಕರು
author img

By

Published : Jun 14, 2023, 2:28 PM IST

ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾಗಿರುವ ಸರ್ಕಾರದ ಕ್ರಮ ಕುರಿತು ಚರ್ಚಿಸಿದ ಬಿಜೆಪಿ ನಾಯಕರು

ಬೆಂಗಳೂರು : ಶಾಲೆಗಳು ಆರಂಭವಾದ ನಂತರವೂ ಪಠ್ಯ ಪುಸ್ತಕ ಪರಿಷ್ಕರಣೆಗೆ ರಾಜ್ಯ ಸರ್ಕಾರ ಮುಂದಾಗುತ್ತಿರುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಈ ಹಿನ್ನೆಲೆ ಶಿಕ್ಷಣ ಕ್ಷೇತ್ರದ ವಿಧಾನಪರಿಷತ್ ಸದಸ್ಯರು ಮತ್ತು ಶಿಕ್ಷಣ ರಂಗದಲ್ಲಿ ಆಸಕ್ತಿ ಹೊಂದಿದ ಎಂಎಲ್‍ಎಗಳು, ಎಂಎಲ್‍ಸಿಗಳ ಸಭೆ ಕರೆದು ಚರ್ಚಿಸಲು ನಿರ್ಧರಿಸಿದೆ.

ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರವು ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾಗಿರುವುದರ ಬಗ್ಗೆ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಚರ್ಚಿಸಲಾಯಿತು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಬಿ.ಸಿ.ನಾಗೇಶ್, ಸುರೇಶ್‍ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಎ.ದೇವೇಗೌಡ ಸಭೆಯಲ್ಲಿ ಭಾಗವಹಿಸಿದ್ದರು. ಜುಲೈನಲ್ಲಿ ಅಧಿವೇಶನ ನಡೆಯಲಿದೆ ಅದಕ್ಕೂ ಮೊದಲೇ ಶಿಕ್ಷಣ ಕ್ಷೇತ್ರದ ವಿಧಾನಪರಿಷತ್ ಸದಸ್ಯರು ಮತ್ತು ಶಿಕ್ಷಣ ರಂಗದಲ್ಲಿ ಆಸಕ್ತಿ ಹೊಂದಿದ ಎಂಎಲ್‍ಎಗಳು, ಎಂಎಲ್‍ಸಿಗಳ ಸಭೆ ಕರೆದು ಪಠ್ಯಪುಸ್ತಕ ಪರಿಷ್ಕರಣೆಗೆ ನೂತನ ಸರ್ಕಾರ ಮುಂದಾಗಿರುವ ಕುರಿತು ಚರ್ಚಿಸಲು ತೀರ್ಮಾನಿಸಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲಾಯಿತು.

ಸಭೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, "ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ ಮಾಜಿ ಸಚಿವರು ಹಾಗೂ ಎಂಎಲ್‌ಸಿಗಳು ಒಟ್ಟಿಗೆ ಸೇರಿ ಸಭೆ ಮಾಡಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಶಿಕ್ಷಣ ವಿಚಾರದಲ್ಲಿ ಸಾಧಕ - ಬಾಧಕ ಚರ್ಚೆ ಮಾಡದೇ ಪೂರ್ವಾಗ್ರಹ ಪೀಡಿತರಾಗಿ, ಅಸಹಿಷ್ಣುತೆಯಿಂದ ಪಠ್ಯ ತೆಗೆಯಬೇಕೆಂಬ ವಿಚಾರವನ್ನು ನಾವು ಸಹಿಸಲ್ಲ. ಸರ್ಕಾರಕ್ಕೆ ಸಲಹೆ ಕೊಡುತ್ತೇವೆ. ವ್ಯಕ್ತಿಗಳು ಬದಲಾಗಬಹುದು ಆದರೆ ಸರ್ಕಾರವಲ್ಲ. ಮಕ್ಕಳಿಗೆ ಯಾವುದು ಹಿತ ಮತ್ತು ಉತ್ತಮ ನಾಗರಿಕನಾಗಬಹುದು ಎನ್ನೋದು ಶಿಕ್ಷಣದಿಂದ ಸಾಧ್ಯ. ಪೂರ್ವಗ್ರಹ ಪೀಡಿತದಿಂದ ಶಿಕ್ಷಣ ವ್ಯವಸ್ಥೆ ಬದಲಿಸಲು ಸಾಧ್ಯವಿಲ್ಲ. ಇಂದು ಏನು ಮಾಡಬೇಕು ಎಂದು ಪ್ರಾಥಮಿಕ ಹಂತದಲ್ಲಿ ಚರ್ಚೆ ನಡೆದಿದೆ. ನಂತರ ಶಿಕ್ಷಣ ಕ್ಷೇತ್ರದಲ್ಲಿ ಇರುವವರ ಜೊತೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು" ಎಂದರು.

ಇದನ್ನೂ ಓದಿ : ಮಕ್ಕಳಿಗೆ ಮೊದಲು ಪುಸ್ತಕ, ಸಮವಸ್ತ್ರ ನಂತರ ಪಠ್ಯಪುಸ್ತಕ ಪರಿಷ್ಕರಣೆ: ಮಧು ಬಂಗಾರಪ್ಪ

ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾತನಾಡಿ, "ಬದಲಾದ ಸರ್ಕಾರ ಏಕಾಏಕಿ ಪಠ್ಯ ಪರಿಷ್ಕರಣೆ ಮಾಡಲು ಹೊರಟಿದೆ. ಯಾವುದೇ ವಿಚಾರವನ್ನ ಕೆಳಕ್ಕಿಳಿದು, ಆಳವಾಗಿ ಅಧ್ಯಯನ ಮಾಡಬೇಕು, ಪಠ್ಯ ಪುಸ್ತಕ ಕೊಠಾರಿ ಕಮಿಷನ್, ಮಕ್ಕಳಿಗೆ ಪಾಠ ಮಾಡೋದು ಕರಿಕುಲಂನಲ್ಲಿ ಇರಬೇಕು ಅಂತಾ ಹೇಳಿದೆ. 2005ರ ವರೆಗೂ ನ್ಯಾಷನಲ್ ಕರಿಕುಲಂ ಇರಲಿಲ್ಲ. 2005ರಲ್ಲಿ ಒಂದು ಫ್ರೇಮ್ ಆಗಬೇಕು ಅಂತ ಸಲಹೆ ಬಂತು. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಒಂದು ಕಮಿಟಿ ಮಾಡಲಾಗಿತ್ತು. ನೂರಕ್ಕೂ ಹೆಚ್ಚು ಶಿಕ್ಷಣ ತಜ್ಞರು ಚರ್ಚೆ ಮಾಡಿದ ಬಳಿಕ 2013ರಲ್ಲಿ ಹೊಸ ಪಠ್ಯ ಬಂತು. ಮಕ್ಕಳ ಪಾಠ ಹೇಗಿರಬೇಕು ಅಂತ ಪಠ್ಯ ಬೋಧನೆ ಮಾಡಿದ ಶಿಕ್ಷಕರ ಸಲಹೆ ಪಡೆಯಲಾಗಿತ್ತು. ಬಳಿಕ, ಹಂತ ಹಂತವಾಗಿ ಪಠ್ಯ ಬಂತು" ಎಂದರು.

ಇದನ್ನೂ ಓದಿ : ಪಠ್ಯಪುಸ್ತಕ ಪರಿಷ್ಕರಣೆ ಖಂಡಿತ ಮಾಡುತ್ತೇವೆ.. ಕಾಂಗ್ರೆಸನ್ನು ಪ್ರಶ್ನಿಸುವ ಹಕ್ಕು ಬಿಜೆಪಿಯವರಿಗೆ ಇಲ್ಲ: ಮಧು ಬಂಗಾರಪ್ಪ

"ಸಿದ್ದರಾಮಯ್ಯ ಸಿಎಂ‌ ಆಗಿದ್ದಾಗ ಇದು ಜಾರಿಗೆ ಬಂತು. ಪಠ್ಯ ರಚನೆಯಾದ ಹತ್ತು ವರ್ಷಗಳ ಬಳಿಕ ಪರಿಷ್ಕರಣೆ ಆಗಬೇಕು ಅಂತಿತ್ತು. ಆದರೆ, ಬರಗೂರು ರಾಮಚಂದ್ರಪ್ಪ ಅವರು ಅನಾವಶ್ಯಕವಾಗಿ ತುರುಕಿದ್ದಾರೆ ಅಂತ ನಮಗೆ ವರದಿ ಬಂತು. ಪೋಷಕರು ಕೂಡ ವಿರೋಧ ಮಾಡಿದ್ದರು. ಬಳಿಕ, ರೋಹಿತ್ ಚಕ್ರತೀರ್ಥ ಅವರ ಸಮಿತಿ ರಚಿಸಲಾಯಿತು. ಆ ಸಮಿತಿ ಎರಡು ವಿಚಾರ ಮಾತ್ರ ಪರಿಷ್ಕರಣೆ ಮಾಡಿತು. ಯಾವುದೇ ರಾಜಕೀಯ ದೃಷ್ಟಿಯಿಂದ ಪರಿಷ್ಕರಣೆ ಮಾಡಲಿಲ್ಲ. ಎನ್ಇಪಿ ಬರ್ತಿರೋ‌ ದೃಷ್ಟಿಯಿಂದ ಪರಿಷ್ಕರಣೆ ಮಾಡಲಾಗಿತ್ತು.

ಪಠ್ಯ ಪರಿಷ್ಕರಣೆ ಬಗ್ಗೆ ಪಬ್ಲಿಕ್ ಡೊಮೈನ್​ನಲ್ಲಿ ಹಾಕಲಾಗಿತ್ತು. ಈಗ ಕಾಂಗ್ರೆಸ್ ಸರ್ಕಾರ ಏಕಾಏಕಿ ಬದಲಾವಣೆ ಮಾಡೋದು ಸರಿಯಲ್ಲ. ಒಂದು ವೇಳೆ ಬದಲಾವಣೆ ಮಾಡಲೇಬೇಕು ಅಂತಿದ್ದರೆ ಪಬ್ಲಿಕ್ ಡೊಮೈನ್​ನಲ್ಲಿ ಹಾಕಲಿ. ಪೋಷಕರು, ಶಿಕ್ಷಕರ ಅಭಿಪ್ರಾಯ ಪಡೆಯಲಿ. ಇಲ್ಲದಿದ್ದರೆ ಸಾರ್ವಜನಿಕರ ಬಳಿ ಹೋಗುತ್ತೇವೆ. ಅನೇಕ ಪಠ್ಯ ತೆಗೆದಿದ್ದು ಬರಗೂರು ರಾಮಚಂದ್ರಪ್ಪ ಹೊರತು ರೋಹಿತ್ ಚಕ್ರತೀರ್ಥ ಅಲ್ಲ. ತೆಗೆದಿದ್ದು ಅವರು, ಮೂತಿಗೆ ಒರೆಸಿದ್ದು ರೋಹಿತ್ ಚಕ್ರ ತೀರ್ಥಗೆ" ಎಂದು ಕಾಂಗ್ರೆಸ್ ವಿರುದ್ಧ ತಿರುಗೇಟು ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.