ETV Bharat / state

ನಾಳೆ ಪರಿಷತ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆ : ಮಾಜಿ ಸಿಎಂ ಬಿಎಸ್​ವೈ

ವಿಧಾನ ಪರಿಷತ್ ಚುನಾವಣೆಗೆ ವಾತಾವರಣ ಬಿಜೆಪಿಗೆ ತುಂಬಾ ಅನುಕೂಲಕರವಾಗಿದೆ. ಒಂದೆರಡು ಸೀಟು ಸಮಸ್ಯೆಯಾಗಬಹುದು. ಉಳಿದೆಲ್ಲ ಕಡೆ ಒಳ್ಳೆಯ ವಾತಾವರಣವಿದೆ. ದೆಹಲಿಯಿಂದ ನಾಳೆ ಪಟ್ಟಿ ಬರಲಿದೆ. ಈಗಾಗಲೇ ಲಭ್ಯವಾಗಿರುವ ಮುನ್ಸೂಚನೆಯಂತೆ ಕೆಲಸ ಆರಂಭಿಸುವಂತೆ ಸೂಚಿಸಲಾಗಿದೆ ಎಂದರು..

BJP candidate list likely to be announce tommorrow says bsy
ಬಿಎಸ್​ವೈ ಪ್ರತಿಕ್ರಿಯೆ
author img

By

Published : Nov 17, 2021, 6:44 PM IST

ಬೆಂಗಳೂರು : ವಿಧಾನ ಪರಿಷತ್ ಚುನಾವಣೆಗೆ(Legislative council election) ನಾಳೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಬಿಜೆಪಿಗೆ ಪೂರಕ ವಾತಾವರಣವಿದೆ. ನಮಗೆ ಹೆಚ್ಚಿನ ಸ್ಥಾನ ಲಭಿಸಲಿವೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ(BS Yediyurappa)ಹೇಳಿದ್ದಾರೆ.

ಪರಿಷತ್‌ ಚುನಾವಣೆ ಕುರಿತಂತೆ ಮಾಜಿ ಸಿಎಂ ಬಿಎಸ್​ವೈ ಪ್ರತಿಕ್ರಿಯೆ ನೀಡಿರುವುದು..

'ಜನ ಸ್ವರಾಜ್'(jana swaraj)ಯಾತ್ರೆಗೆ ತೆರಳುವ ಮುನ್ನ ಕಾವೇರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ತಂಡಗಳಲ್ಲಿ ನಾಳೆಯಿಂದ ನಾಲ್ಕು ದಿನ ಪ್ರವಾಸ ಹೋಗುತ್ತಿದ್ದೇವೆ.

ಸ್ಥಳೀಯ ಜ್ವಲಂತ ಸಮಸ್ಯೆಗಳ ಬಗ್ಗೆ ಕಾರ್ಯಕರ್ತರ ಜೊತೆ ಚರ್ಚೆ ಮಾಡುತ್ತೇವೆ. ಬರುವ ವಿಧಾನಪರಿಷತ್ ಚುನಾವಣೆಗೆ ಸಿದ್ಧತೆ ನಡೆಸಲು ಸೂಚನೆ ಕೊಡಲಾಗುತ್ತದೆ. ಉಳಿದೆಲ್ಲ ಸಂಗತಿಗಳ ಜೊತೆ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಲಾಗುತ್ತದೆ ಎಂದರು.

ವಿಧಾನ ಪರಿಷತ್ ಚುನಾವಣೆಗೆ ವಾತಾವರಣ ಬಿಜೆಪಿಗೆ ತುಂಬಾ ಅನುಕೂಲಕರವಾಗಿದೆ. ಒಂದೆರಡು ಸೀಟು ಸಮಸ್ಯೆಯಾಗಬಹುದು. ಉಳಿದೆಲ್ಲ ಕಡೆ ಒಳ್ಳೆಯ ವಾತಾವರಣವಿದೆ. ದೆಹಲಿಯಿಂದ ನಾಳೆ ಪಟ್ಟಿ ಬರಲಿದೆ. ಈಗಾಗಲೇ ಲಭ್ಯವಾಗಿರುವ ಮುನ್ಸೂಚನೆಯಂತೆ ಕೆಲಸ ಆರಂಭಿಸುವಂತೆ ಸೂಚಿಸಲಾಗಿದೆ ಎಂದರು.

ಈಗ ಸದ್ಯ ನಾಲ್ಕು ತಂಡದಲ್ಲಿ ನಾವು ಪ್ರವಾಸ ಹೋಗುತ್ತಿದ್ದೇವೆ. ವಾಪಸ್ ಬಂದ ಬಳಿಕ ಪ್ರತಿ ಜಿಲ್ಲೆಗೆ ಹೋಗುತ್ತೇನೆ, ಕಾರ್ಯಕರ್ತರ ಜತೆ ಸಮಾಲೋಚನೆ ಮಾಡುತ್ತೇನೆ. ಪಕ್ಷದ ಬೆಳವಣಿಗೆಗೆ ಪೂರಕವಾಗಿ ಸಂಘಟನಾತ್ಮಕ ರೀತಿಯ ಕೆಲಸ ಮಾಡಲಿದ್ದೇನೆ ಎಂದರು.

ಬಿಟ್ ಕಾಯಿನ್ ಹಗರಣ(Bitcoin scam)ಆರೋಪ ಕುರಿತು ಪ್ರತಿ ದಿನ ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ಅವರ ಬಳಿ ಏನಾದರೂ ಮಾಹಿತಿ ಇದ್ದರೆ ಕೊಡಲಿ ತನಿಖೆ ನಡೆಸಲು ಸಿದ್ಧ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ಹೇಳಿದ್ದಾರೆ.

ಯಾರು ಭಾಗಿಯಾಗಿದ್ದರೂ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಹಿಂದೆಮುಂದೆ ನೋಡುವುದಿಲ್ಲ. ಅವರ ಬಳಿ ಮಾಹಿತಿ ಏನೇ ಇದ್ದರೂ ಮುಚ್ಚುಮರೆಯಿಲ್ಲದೆ ಕೊಟ್ಟರೆ, ರಾಜ್ಯದ ಹಿತದೃಷ್ಟಿಯಿಂದ ಬಹಳ ಒಳ್ಳೆಯದಾಗಲಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.