ETV Bharat / state

ಟ್ರಾಫಿಕ್ ಪೊಲೀಸ್ ಬಳಿ ಬೈಕ್ ಸವಾರನ ಕಿರಿಕ್​: ಒಡೆದ ಮೊಬೈಲ್​ ಸರಿಮಾಡಿ ಕೊಡಿ ಎಂದು ಪಟ್ಟು - Myco Layout Traffic Police Station

ವಾಹನ ತಪಾಸಣೆಗಾಗಿ ಸವಾರನನ್ನು ನಿಲ್ಲಿಸಿದ್ದ ವೇಳೆ ಕೈಲಿದ್ದ ಮೊಬೈಲ್ ಕೆಳಗೆ ಬಿದ್ದು ಒಡೆದಿದ್ದು, ಈ ಸಂಬಂಧ ಪೊಲೀಸರೊಂದಿಗೆ ಸವಾರ ವಾಗ್ವಾದ ನಡೆಸಿದ್ದಾನೆ. ಈ ಕುರಿತು ತನಿಖೆ ನಡೆಸಿವುದಾಗಿ ಹಿರಿಯ ಪೊಲೀಸರು ಮಾಹಿತಿ ಪಡೆದಿದ್ದಾರೆ.

biker-uproar-with-traffic-police-for-fix-mobile-phone-of-him
ಟ್ರಾಫಿಕ್ ಪೊಲೀಸ್ ಬಳಿ ಬೈಕ್ ಸವಾರನ ಕಿರಿಕ್
author img

By

Published : Oct 15, 2020, 2:11 PM IST

ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ಮಾಡುತ್ತಿದ್ದವರ ತಪಾಸಣೆ ನಡೆಸುತ್ತಿದ್ದ ಟ್ರಾಫಿಕ್ ಪೊಲೀಸ್ ಮೇಲೆ‌ ಹಲ್ಲೆಗೆ ಯತ್ನಿಸಿರುವ ಘಟನೆ ಮೈಕೋ ಲೇಔಟ್​​​ನ ಸೇಂಟ್ ಜಾನ್ಸ್ ಆಸ್ಪತ್ರೆ ಬಳಿ ನಡೆದಿದೆ.

ಟ್ರಾಫಿಕ್ ಪೊಲೀಸ್ ಜತೆ ಜಗಳಕ್ಕಿಳಿದಿರುವ ಬೈಕ್ ಸವಾರ

ವಾಹನ ಸವಾರನೋರ್ವ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಕಾರಣ ಮೈಕೋ ಲೇಔಟ್ ಠಾಣಾ ವ್ಯಾಪ್ತಿಯ ಸಬ್ ಇನ್ಸ್​ಪೆಕ್ಟರ್ ತಪಾಸಣೆ ನಡೆಸುವಾಗ ವ್ಯಕ್ತಿಯನ್ನು ನಿಲ್ಲಿಸಿದ್ದಾರೆ. ತದ‌ನಂತರ ವಾಹನದ ದಾಖಲೆ ಕೇಳಿದ್ದಾರೆ. ಈ ವೇಳೆ‌ ವಾಹನ ಸವಾರನ ಕೈತಪ್ಪಿ ಮೊಬೈಲ್ ಕೆಳಗೆ ಬಿದ್ದಿದೆ. ಪೊಲೀಸ್​​ ಮೊಬೈಲ್ ಒಡೆದಿದ್ದಾರೆಂದು ಆರೋಪ ಮಾಡಿ ಡ್ಯೂಟಿ ಡ್ರೆಸ್ ಬಿಚ್ಚಿ ಬಂದು ಮೊಬೈಲ್ ಸರಿ‌ಮಾಡಿ ಕೊಡಿ ಎಂದು ಗಲಾಟೆ ಮಾಡಿದ್ಧಾನೆ.

ಬೈಕ್ ಸವಾರನ ಗಲಾಟೆಗೆ ಸ್ಥಳೀಯರು ಪೊಲೀಸ‌ರ‌‌ ಮೇಲೆ ಈ ರೀತಿಯಾದ ವರ್ತನೆ‌ ಮಾಡುವುದು ಸರಿಯಲ್ಲವೆಂದು ಸವಾರನಿಗೆ ತಿಳಿ ಹೇಳಿದ್ದಾರೆ. ಇದಕ್ಕೂ ಕ್ಯಾರೆ ಅನ್ನದ ಬೈಕ್ ಸವಾರ ಕರ್ತವ್ಯದ ಮೇಲಿದ್ದ ಪೊಲೀಸ್ ಬಳಿ‌ಹೋಗಿ ಮತ್ತೆ ಗಲಾಟೆ ಮಾಡಿದ್ದಾನೆ. ಸದ್ಯ ಈ ಎಲ್ಲಾ ದೃಶ್ಯ ಮೊಬೈಲ್​ನಲ್ಲಿ ಸೆರೆಹಿಡಿದಿದ್ದು, ಪೊಲೀಸರು ತನಿಖೆ ‌ಚುರುಕುಗೊಳಿಸಿ ಇಬ್ಬರ ಬಳಿಯಿಂದ ಮಾಹಿತಿ ಕಲೆಹಾಕ್ತಿದ್ದಾರೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.