ದೇವನಹಳ್ಳಿ (ಬೆಂಗಳೂರು): ತಿರುಪತಿ ಪ್ರಸಾದ ಲಡ್ಡು ಕೊಡುವ ನೆಪದಲ್ಲಿ ಬಂದ ಸ್ನೇಹಿತ ತನ್ನ ಸ್ನೇಹಿತನ ಬೈಕ್ ಮತ್ತು ಎರಡು ಮೊಬೈಲ್ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ. ದೇವನಹಳ್ಳಿ ಪಟ್ಟಣದ ಸರೋವರ ಸ್ಟ್ರೀಟ್ ಏರಿಯಾದ ನಿವಾಸಿ ಧನುಷ್ ಮತ್ತು ಹುಸ್ಸೇನ್ ಹಾಸ್ಟೆಲ್ ಸ್ನೇಹಿತರಾಗಿದ್ದವರು. ನವೆಂಬರ್ 27 ರ ಬೆಳಗ್ಗೆ ಫೋನ್ ಮಾಡಿದ ಹುಸ್ಸೇನ್ ತಿರುಪತಿಗೆ ಹೋಗಿದ್ದೆ ಪ್ರಸಾದ ಕೊಡಬೇಕೆಂದು ಹೇಳಿದ್ದಾನೆ.
ಮನೆಗೆ ಬರುವಂತೆ ಧನುಷ್ ಹೇಳಿದ್ದು, ಹುಸ್ಸೇನ್ ಜೊತೆಗೆ ಆತನ ಸ್ನೇಹಿತ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕ ಸಹ ಬಂದಿದ್ದ. ಈತ ಹುಸ್ಸೇನ್ ಗೆ ರೈಲಿನಲ್ಲಿ ಪರಿಚಯವಾಗಿದ್ದನಂತೆ.
ಮನೆಗೆ ಬಂದಿದ್ದ ಇಬ್ಬರೂ ಸ್ನೇಹಿತರಿಗೆ ಟೀ ಮಾಡಲು ಧನುಷ್ ಆಡುಗೆ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಕಾನೂನು ಸಂಘಷಕ್ಕೆ ಒಳಪಟ್ಟ ಬಾಲಕ ಒಂದು ಬೈಕ್ ಮತ್ತು ಎರಡು ಮೊಬೈಲ್ ಕದ್ದು ಪರಾರಿಯಾಗಿದ್ದಾನೆ. ಕಳ್ಳತನ ಕೃತ್ಯಕ್ಕೆ ಸಂಬಂಧಿಸಿದಂತೆ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಸಿಬ್ಬಂದಿ ವೇಷದಲ್ಲಿ ಕೊಡಗು ಜಿಲ್ಲಾಸ್ಪತ್ರೆಗೆ ನುಗ್ಗಿದ ಖದೀಮ.. ಬ್ಯಾಗ್, ಬೈಕ್ ಎಗರಿಸಿ ಪರಾರಿ