ETV Bharat / state

ಬೆಂಗಳೂರಿನ ಪ್ರತಿ ವಾರ್ಡ್​ಗೂ ಬೈಕ್ ಆಂಬುಲೆನ್ಸ್ ಅಂದರು ಅಂದು; ಮಾತು ತಪ್ಪಿದರು ಇಂದು! - Bike ambulance project

2015 ರಲ್ಲಿ ಕಾಂಗ್ರೆಸ್ ಸರ್ಕಾರ ಬೈಕ್ ಆಂಬುಲೆನ್ಸ್ ಸೇವೆ ಶುರು ಮಾಡಿತು. ಈ ಸೇವೆಯಿಂದ ಸಾರ್ವಜನಿಕರಿಗೆ ಅನುಕೂಲವಾದ ನಿಟ್ಟಿನಲ್ಲಿ, ಕಳೆದ 2019-20 ರ ಬಜೆಟ್​ನಲ್ಲಿ ಪ್ರತಿ ವಾರ್ಡ್​ಗೂ ಒಂದು ಬೈಕ್ ಆಂಬುಲೆನ್ಸ್ ಸೇವೆ ನೀಡುವುದಾಗಿ ಘೋಷಣೆ ಮಾಡಿದರು. ಇದಕ್ಕಾಗಿ ₹ 2 ಕೋಟಿ ಮೀಸಲಿಟ್ಟರೂ ಬಳಕೆಯಾಗದಿರುವುದು ವಿಪರ್ಯಾಸ.

ಮೇಯರ್ ಗಂಗಾಂಬಿಕೆ
author img

By

Published : Sep 15, 2019, 4:41 PM IST

ಬೆಂಗಳೂರು: ವಾಹನ ದಟ್ಟಣೆಯ ಪರಿಣಾಮ ಶೀಘ್ರವಾಗಿ ಆಸ್ಪತ್ರೆ ತಲುಪಿ ಅಪಘಾತಕ್ಕೀಡಾದವರ ಪ್ರಾಣ ಉಳಿಸಲೆಂದೇ ಏಪ್ರಿಲ್ 2015 ರಲ್ಲಿ ಆಗಿನ ಕಾಂಗ್ರೆಸ್ ಸರ್ಕಾರ ಬೈಕ್ ಆಂಬುಲೆನ್ಸ್ ಸೇವೆ ಆರಂಭಿಸಿತ್ತು. ಈ ಸೇವೆಯಿಂದ ಸಾರ್ವಜನಿಕರಿಗೆ ಅನುಕೂಲವಾದ ನಿಟ್ಟಿನಲ್ಲಿ, ಕಳೆದ 2019-20 ರ ಬಿಬಿಎಂಪಿ ಬಜೆಟ್​ನಲ್ಲಿ ಪ್ರತಿ ವಾರ್ಡ್​ಗೂ ಒಂದು ಬೈಕ್ ಆಂಬುಲೆನ್ಸ್ ಸೇವೆ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಇದಕ್ಕಾಗಿ ₹ 2 ಕೋಟಿ ತೆಗೆದಿರಿಸಲಾಗಿದೆ. ಆದರೆ ಈಗ ಇಂಥದ್ದೊಂದು ಯೋಜನೆ ಇದೆ ಅನ್ನೋದನ್ನು ಪಾಲಿಕೆ ಮತ್ತು ಪಾಲಿಕೆಯ ಆರೋಗ್ಯ ಇಲಾಖೆ ಮರೆತೇ ಬಿಟ್ಟಿದೆ!

ಬೆಂಗಳೂರಿನ ಪ್ರತಿ ವಾರ್ಡ್​ಗೂ ಬೈಕ್ ಆಂಬುಲೆನ್ಸ್ ಅಂದರು ಅಂದು; ಮಾತು ತಪ್ಪಿದರು ಇಂದು!!

ಈ ಕುರಿತು ಮೇಯರ್ ಗಂಗಾಂಬಿಕೆ ಅವರನ್ನು ಪ್ರಶ್ನಿಸಿದರೆ, 2019-20ರ ಬಜೆಟ್​ನಲ್ಲಿ ₹ 2 ಕೋಟಿ ಮೀಸಲಿಡಲಾಗಿದೆ. ಫೆಬ್ರವರಿಯಲ್ಲಿ ಬಜೆಟ್ ಮಂಡನೆ ನಂತರ ಅನುಮೋದನೆಗೆ ಮುಂದಾದಾಗ ಲೋಕಸಭೆ ಎಲೆಕ್ಷನ್‌ನಿಂದಾಗಿ ಜೂನ್​ನಲ್ಲಿ ನಮಗೆ ಅನುಮೋದನೆ ಸಿಕ್ಕಿತ್ತು. ಆದರೆ ಇದರ ನಡುವೆ ಹಳೆ ಸರ್ಕಾರ ಹೋಗಿ ಹೊಸ ಸರ್ಕಾರ ರಚನೆಯಾಯಿತು. ಹೊಸ ಸರ್ಕಾರ ಬಂದ್ಮೇಲೆ ಕ್ಯಾಬಿನೆಟ್​ನಲ್ಲಿ ಅನುಮೋದನೆ ಮಾಡಿಲ್ಲ ಅನ್ನೋ ಕಾರಣ ತಡೆಹಿಡಿಯಲಾಯಿತು. ಈಗ ಬೈಕ್ ಆಂಬುಲೆನ್ಸ್​ಗೆ ಹಣ ಬಿಡುಗಡೆ ಮಾಡಲಾಗಿದ್ದು, ಆದಷ್ಟು ಬೇಗ ಆಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಇತ್ತ ಪಾಲಿಕೆಯೇ ಹೆಚ್ಚುವರಿ ಬೈಕ್ ಆಂಬುಲೆನ್ಸ್ ಸೇವೆ ನೀಡೋದಾಗಿ ಹೇಳಿದ್ದರಿಂದ, ಇತ್ತ ಜಿವಿಕೆ ಕಂಪನಿ ರೂಪುರೇಷೆ ಸಿದ್ದ ಪಡಿಸಿಕೊಟ್ಟಿತ್ತು. ಈಗಾಗಲೇ ನಗರದಲ್ಲಿ 19 ಬೈಕ್ ಆಂಬುಲೆನ್ಸ್ ಇದ್ದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ಈಗ ಪ್ರತಿ ವಾರ್ಡ್​ಗೂ ಬೈಕ್ ಆಂಬುಲೆನ್ಸ್ ಸೇವೆ ಆರಂಭವಾದರೆ ರಸ್ತೆ ಅಪಘಾತದಿಂದ ಅಥವಾ ಯಾವುದೇ ಇತರೆ ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪುದನ್ನು ತಪ್ಪಿಸಬಹುದಾಗಿದೆ.

ಯಾವ ಯೋಜನೆ ಕಾಮಗಾರಿ ಬಗ್ಗೆ ಕೇಳಿದರೂ ಹಣವಿಲ್ಲ ಅಂತ ಸಬೂಬು ಕೊಡುತ್ತಿದ್ದ ಬಿಬಿಎಂಪಿ, ಈಗ ಬೈಕ್ ಆಂಬುಲೆನ್ಸ್​ಗೆ ಹಣವಿದ್ದರೂ ಯೋಜನೆಯನ್ನು ಮಾತ್ರ ಕಾರ್ಯರೂಪಕ್ಕೆ ತರದೇ ಮೀನಾಮೇಷ ಎಣಿಸುತ್ತಿದೆ.‌ ಬೆಂಗಳೂರಿನ 198 ವಾರ್ಡ್ ಗಳಿಗೆ ಅದ್ಯಾವಾಗ ಬೈಕ್ ಆಂಬುಲೆನ್ಸ್ ಸಿಗಲಿದ್ಯೋ ಕಾದು ನೋಡಬೇಕು.

Intro:ಬೆಂಗಳೂರಿನ ಪ್ರತಿ ವಾರ್ಡ್ ಗೂ ಬೈಕ್ ಆಂಬುಲೇನ್ಸ್ ಅಂದರು ಅಂದು; ಮಾತು ತಪ್ಪಿದರು ಇಂದು!!

ಬೆಂಗಳೂರು: ಕಿರಿದಾದ ರಸ್ತೆಗಳು ಸಿಕ್ಕ ಸಿಕ್ಕ ರಸ್ತೆಯಲ್ಲೂ ವಾಹನ ದಟ್ಟಣೆಯಿಂದಾಗಿಯೇ ಶೀಘ್ರವಾಗಿ ತಲುಪಿ ಅಪಘಾತಕ್ಕೀಡಾದವರ ಪ್ರಾಣ ಉಳಿಸಲೆಂದೇ ಏಪ್ರಿಲ್ 2015 ರಲ್ಲಿ ಆಗೀನ ಕಾಂಗ್ರೆಸ್ ಸರ್ಕಾರ ಬೈಕ್ ಆಂಬುಲೇನ್ಸ್ ಸೇವೆ ಶುರು ಮಾಡಿತು.. ಈ ಸೇವೆಯಿಂದ ಸಾರ್ವಜನಿಕರಿಗೆ ಅನುಕೂಲವಾದ ನಿಟ್ಟಿನಲ್ಲಿ, ಕಳೆದ 2019-20 ರ ಬಜೆಟ್ ನಲ್ಲಿ ಪ್ರತಿ ವಾರ್ಡ್ ಗೂ ಒಂದು ಬೈಕ್ ಆಂಬುಲೇನ್ಸ್ ಸೇವೆ ನೀಡುವುದಾಗಿ ಘೋಷಣೆ ಮಾಡಿದರು..‌ ಇದಕ್ಕಾಗಿ ಆರಂಭಿಕವಾಗಿ 2 ಕೋಟಿ ರೂಪಾಯಿಯನ್ನ‌ ತೆಗೆದಿರಲಿಸಲಾಗಿದೆ.. ಆದರೆ ಇಂತಹದೊಂದು ಪ್ರಾಜೆಕ್ಟ್ ಇದೆ ಅನ್ನೋದನ್ನ ಪಾಲಿಕೆ ಮತ್ತು ಪಾಲಿಕೆಯ ಆರೋಗ್ಯ ಇಲಾಖೆಯವರು ಮರೆತೇ ಬಿಟ್ಟಿದ್ದಾರೆ..

ಏನ್ ಮೇಡಂ, ಏನಾಯಿತು ಬೈಕ್ ಆಂಬುಲೇನ್ಸ್ ಪ್ರಾಜೆಕ್ಟ್ ಅಂದರೆ ಮೇಯರ್ ಗಂಗಾಂಭಿಕೆ ಹೇಳುವುದು ಹೀಗೆ... 2019-20ರ ಬಜೆಟ್ ನಲ್ಲಿ 2 ಕೋಟಿ ಮೀಸಲು ಇಡಲಾಗಿದೆ.. ಫೆಬ್ರವರಿಯಲ್ಲಿ ಬಜೆಟ್ ಮಂಡನೆ ನಂತರ ಅನುಮೋದನೆಗೆ ಮುಂದಾದಾಗ ಲೋಕಸಭಾ ಎಲೆಕ್ಷನ್ ನಿಂದಾಗಿ
ಜೂನ್ ನಲ್ಲಿ ನಮಗೆ ಅನುಮೋದನೆ ಸಿಕ್ಕಿತ್ತು.. ಆದರೆ ಇದರ ನಡುವೆ ಹಳೆ ಸರ್ಕಾರ ಹೋಗಿ ಹೊಸ ಸರ್ಕಾರ ರಚನೆ ಆಯಿತು.. ಹೊಸ ಸರ್ಕಾರ ಬಂದ್ಮೆಲೆ ಕ್ಯಾಬಿನೆಟ್ ನಲ್ಲಿ ಅನುಮೋದನೆ ಮಾಡಿಲ್ಲ ಅನ್ನೋ ಕಾರಣ ತಡೆಹಿಡಿಯಲಾಯಿತು ಅಂತಾರೆ.. ಈಗ ಬೈಕ್ ಆಂಬುಲೇನ್ಸ್ ಗೆ ಹಣವನ್ನ ರೀಲಿಸ್ ಮಾಡಲಾಗಿದ್ದು, ಅದಷ್ಟು ಬೇಗ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಅಂತ ಮೇಯರ್ ಗಂಗಾಂಭಿಕೆ ತಿಳಿಸಿದರು..

ಇತ್ತ ಪಾಲಿಕೆಯೇ ಹೆಚ್ಚುವರಿ ಬೈಕ್ ಆಂಬುಲೇನ್ಸ್ ಸೇವೆ ನೀಡೋದಾಗಿ ಹೇಳಿದ್ದರಿಂದ, ಇತ್ತ ಜಿವಿಕೆಯು ರೂಪು ರೇಷೆಯನ್ನು ಸಿದ್ದ ಪಡಿಸಿಕೊಟ್ಟಿತ್ತು.. ಈಗಾಗಲೇ ನಗರದಲ್ಲಿ 19 ಬೈಕ್ ಆಂಬುಲೇನ್ಸ್ ಇದ್ದು ಪರಿಣಾಮವಾಗಿ ಕೆಲಸ ಮಾಡುತ್ತಿದೆ.. ಈಗ ಪ್ರತಿ ವಾರ್ಡ್ ಗೂ ಬೈಕ್ ಆಂಬುಲೇನ್ಸ್ ಸೇವೆ ಆರಂಭವಾದರೆ ರಸ್ತೆ ಅಪಘಾತದಿಂದ ಅಥವಾ ಯಾವುದೇ ಇತರೆ ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪುದನ್ನ ತಪ್ಪಿಸಬಹುದಾಗಿದೆ..

ಒಟ್ಟಿನ್ನಲ್ಲಿ ಯಾವ ಯೋಜನೆ ಕಾಮಗಾರಿ ಬಗ್ಗೆ ಕೇಳಿದರು ಹಣವಿಲ್ಲ ಅಂತ ಸಾಬುಬು ಕೊಡುತ್ತಿದ್ದ ಬಿಬಿಎಂಪಿ, ಈಗ ಬೈಕ್ ಆಂಬುಲೇನ್ಸ್ ಗೆ ಹಣ ವಿದ್ದರೂ ಯೋಜನೆಯನ್ನ ಮಾತ್ರ ಕಾರ್ಯರೂಪಕ್ಕೆ ತರದೇ ಮೀನಾ ಮೇಷ ಎಣಿಸುತ್ತಿದೆ..‌ ಬೆಂಗಳೂರಿನ 198 ವಾರ್ಡ್ ಗಳಿಗೆ ಅದ್ಯಾವಾಗ ಬೈಕ್ ಆಂಬುಲೇನ್ಸ್ ಸಿಗಲಿದ್ಯೋ ಕಾದು ನೋಡಬೇಕು.

KN_BNG_01_BIKE_AMBULANCE_MAYORE_SCRIPT_7201801
Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.