ಬೆಂಗಳೂರು: ನಗರದ ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ಹಾಡಹಗಲೇ ಮಾರಕಾಸ್ತ್ರಗಳಿಂದ ರೌಡಿಶೀಟರ್ ಬಬ್ಲಿಯ ಬರ್ಬರ ಹತ್ಯೆಯಾಗಿದೆ. ಇಂದು ಮಧ್ಯಾಹ್ನ 1:30ರ ಸುಮಾರಿಗೆ ತನ್ನ ಹೆಂಡತಿಯೊಂದಿಗೆ ಬ್ಯಾಂಕ್ಗೆ ಬಂದಿದ್ದ ರೌಡಿಶೀಟರ್ ಬಬ್ಲಿಯನ್ನು, ಬ್ಯಾಂಕ್ ಒಳಗೆ ಹೋದ ಕೂಡಲೇ ಐದಾರು ಮಂದಿ ದುಷ್ಕರ್ಮಿಗಳು ಹಿಂದಿನಿಂದ ಬಂದು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಅಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಜೋಶಿ ಹಾಗೂ ಮಡಿವಾಳ ಉಪ ವಿಭಾಗ ಎಸಿಪಿ ಸುಧೀರ್ ಹೆಗಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೂರ್ವ ವಲಯ ಹೆಚ್ಚುವರಿ ಆಯುಕ್ತ ಎಸ್.ಮುರುಗನ್ ಸಹ ಭೇಟಿ ನೀಡಿ ಘಟನೆ ನಡೆದ ಸ್ಥಳದಲ್ಲಿ ಪರಿಶೀಲಿಸಿದ್ದಾರೆ.
ಬಳಿಕ ಮಾತನಾಡಿದ ಎಸ್.ಮುರುಗನ್, ಬಬ್ಲಿಯು ಪತ್ನಿ, ಮಗಳ ಜೊತೆ ಬೈಕ್ನಲ್ಲಿ ಬ್ಯಾಂಕ್ಗೆ ಬಂದಿದ್ದ ವೇಳೆ ಆತನ ಹತ್ಯೆ ನಡೆದಿದೆ. ಕೂಡಲೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದಿದ್ದಾರೆ. ಬಾಬುಲಿ ಅಲಿಯಾಸ್ ಬಬ್ಲಿ ಕಾಂಟ್ರಾಕ್ಟ್ ಕೆಲಸ ಮಾಡುತ್ತಿದ್ದ. 2011ರ ಬಳಿಕ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರಲಿಲ್ಲ. 2011ರ ಆಚೆಗೆ ಕೆಲ ಕೇಸ್ಗಳು ದಾಖಲಾಗಿದ್ದವು ಎಂದು ತಿಳಿಸಿದ್ರು.
ಇನ್ನೊಂದೆಡೆ ಮತಾಂತರ ಮಾಡೋದನ್ನೇ ಬಬ್ಲಿ ದಂಧೆ ಮಾಡಿಕೊಂಡಿದ್ದ ಎನ್ನಲಾಗ್ತಿದೆ. ಒಂದು ಮತಾಂತರಕ್ಕೆ 3 ಲಕ್ಷ ಹಣ ಪಡೆಯುತ್ತಿದ್ದು, ರಾಜೇಂದ್ರ ಸ್ಲಂನಲ್ಲಿ ಮತಾಂತರಕ್ಕೆಂದೇ ಬಬ್ಲಿ ಆಫೀಸ್ ಮಾಡಿಕೊಂಡಿದ್ದ ಎಂದು ಹೇಳಲಾಗ್ತಿದೆ. ಈತ ಸಹ ಮತಾಂತರಗೊಂಡಿದ್ದ. ಬಬ್ಲಿ ಹತ್ಯೆ ಹಿನ್ನೆಲೆ ಇಡೀ ರಾಜೇಂದ್ರ ಸ್ಲಂ ಅನ್ನೇ ಬಬ್ಲಿ ಹುಡುಗರು ಮುಚ್ಚಿಸಿದ್ದಾರೆ ಎಂದು ತಿಳಿದುಬಂದಿದೆ.