ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಒಂದು ವಾರ ಕಠಿಣ ಲಾಕ್ಡೌನ್ ಮಾಡುವುದಾಗಿ ಸರ್ಕಾರ ತಿಳಿಸಿತ್ತು. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಲಾಕ್ಡೌನ್ಅನ್ನ ಜನ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.
ಲಾಕ್ಡೌನ್ ಇದ್ದರೂ ನಗರದ ಪ್ರಮುಖ ಪ್ರದೇಶಗಳಾದ ಯಶವಂತಪುರ, ಮಲ್ಲೇಶ್ವರಂ, ಜೆ.ಪಿ.ನಗರ, ಜಯನಗರ ಸೇರಿದಂತೆ ಬಹುತೇಕ ಕಡೆಗಳಲ್ಲಿ ವಾಹನ ಸಂಚಾರ ಯಥಾಸ್ಥಿತಿಯಲ್ಲಿದೆ. ಮುಂಜಾನೆ ಪೊಲೀಸರು ಇರಲ್ಲ ಎಂಬ ಕಾರಣಕ್ಕೆ ನಿಯಮ ಲೆಕ್ಕಿಸದೆ ಜನ ರಸ್ತೆಗಳಲ್ಲಿ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ.
ಅಗತ್ಯ ಸೇವೆಗಳಿಗೆ ಸರ್ಕಾರ ಅನುಮತಿ ನೀಡಿದೆ. ಇದನ್ನೇ ನೆಪ ಮಾಡಿಕೊಂಡಿರುವ ಬಹುತೇಕ ಜನ ಎಂದಿನಂತೆ ರಸ್ತೆಗಿಳಿದಿದ್ದಾರೆ.