ETV Bharat / state

ಒಂದೇ ದಿನದಲ್ಲಿ 3 ಕೋಟಿ ಸಂಪಾದಿಸಿದ ಬೆಂಗಳೂರು ಚಿತ್ರಸಂತೆ - Bengaluru chitrasanthe

ಸಿಲಿಕಾನ್ ಸಿಟಿಯಲ್ಲಿ ಇಂದು ನಡೆದ 17ನೇ ಚಿತ್ರಸಂತೆಗೆ ಆಗಮಿಸಿದ್ದ ಸುಮಾರು 3 ಲಕ್ಷ ಕಲಾಭಿಮಾನಿಗಳು ಕಲೆಗೆ ಮನಸೋತು ಬಹುಪರಾಕ್ ಎಂದಿದ್ದಾರೆ.

Bengaluru chithrasanthe that earned 3 crores per day
ಒಂದೇ ದಿನದಲ್ಲಿ 3 ಕೋಟಿ ಸಂಪಾದಿಸಿದ ಬೆಂಗಳೂರು ಚಿತ್ರಸಂತೆ
author img

By

Published : Jan 6, 2020, 7:27 AM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ನಡೆದ 17ನೇ ಚಿತ್ರಸಂತೆಗೆ ಆಗಮಿಸಿದ್ದ ಸುಮಾರು 3 ಲಕ್ಷ ಕಲಾಭಿಮಾನಿಗಳು ಕಲೆಗೆ ಮನಸೋತು ಬಹುಪರಾಕ್ ಎಂದಿದ್ದಾರೆ.

ಒಂದೇ ದಿನದಲ್ಲಿ 3 ಕೋಟಿ ಸಂಪಾದಿಸಿದ ಬೆಂಗಳೂರು ಚಿತ್ರಸಂತೆ

ವರ್ಷಕ್ಕೊಮ್ಮೆ ನಡೆಯುವ ಚಿತ್ರಸಂತೆಯಲ್ಲಿ‌ ಆಂಧ್ರಪ್ರದೇಶ, ತಮಿಳುನಾಡು, ಕೇರಳ‌ ಸೇರಿದಂತೆ ಹಲವು ರಾಜ್ಯಗಳಿಂದ 1500ಕ್ಕಿಂತ ಹೆಚ್ಚು ಕಲಾಭಿಮಾನಿಗಳು ಆಗಮಿಸಿ ತಾವು ರಚಿಸಿದ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ವಿವಿಧ ಮಾದರಿಯ ಕಲಾಕೃತಿಗಳನ್ನು ಪ್ರದರ್ಶಿಸುವ ಮೂಲಕ ಕಲಾಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿ ಮಾಡಿದರು ಎಂದರೆ ಅತಿಶಯೋಕ್ತಿಯಾಗದು.

ಕುಮಾರಕೃಪ ರಸ್ತೆಯ ಇಕ್ಕೆಲ್ಲಗಳಲ್ಲಿ ಇರಿಸಿದ್ದ ಕಲಾಕೃತಿಗಳ ನೋಡಲು ನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕಲಾಭಿಮಾನಿಗಳು ಆಗಮಿಸಿದ್ದರು. ಅಲ್ಲಿ ಸಾವಿರ ರೂಪಾಯಿಯಿಂದ 12 ಲಕ್ಷ ರೂಪಾಯಿ ಬೆಲೆಬಾಳುವ ಕಲಾಕೃತಿಗಳೂ ಇದ್ದವು. ಕಲಾಭಿಮಾನಿಗಳು ತಮಗಿಷ್ಟವಾದ ಚಿತ್ರಕಲೆ, ಕಲಾಕೃತಿಗಳನ್ನ ಕೊಂಡುಕೊಳ್ಳುವುದು ಸಾಮಾನ್ಯವಾಗಿತ್ತು. ಇನ್ನು ಒಂದೇ ದಿನದಲ್ಲಿ 3 ಕೋಟಿ ರೂಪಾಯಿ ವಹಿವಾಟು ನಡೆದಿದೆ ಎಂದು ರಾಜ್ಯ ಚಿತ್ರಕಲಾ ಪರಿಷತ್ ಅಧ್ಯಕ್ಷ ವಿ.ಶಂಕರ್ ತಿಳಿಸಿದ್ದಾರೆ.

ಚಿತ್ರಸಂತೆಗೆ ಮಕ್ಕಳು, ಹಿರಿಕರು, ವೃದ್ಧರೂ ಸೇರಿದಂತೆ ಎಲ್ಲ ವಯೋಮಾನದವರು ಆಗಮಿಸಿ ಪ್ರದರ್ಶನವನ್ನು ಯಶಸ್ವಿಯನ್ನಾಗಿಸಿದರು.

Intro:Body:ಕಲಾವಿದರ ಕೈ ಚಳಕಕ್ಕೆ ಮನಸೋತ ಕಲಾಭಿಮಾನಿಗಳು
ಚಿತ್ರಸಂತೆಗೆ ಮೂರು ಲಕ್ಷ ಜನರ ಭೇಟಿ: ಮೂರು ಕೋಟಿ ವಹಿವಾಟು

ಬೆಂಗಳೂರು:
ಸಿಲಿಕಾನ್ ಸಿಟಿಯಲ್ಲಿ ಇಂದು ನಡೆದ 17ನೇ ಚಿತ್ರಸಂತೆಗೆ ಕಲಾಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಬೆಳಗ್ಗೆಯಿಂದ ರಾತ್ರಿ ಏಳು ಗಂಟೆವರೆಗೆ ಸಂತೆ ಸುಮಾರು 3 ಲಕ್ಷ ಜನರು ಆಗಮಿಸಿ ಬಹುಪರಾಕ್ ಅಂದಿದ್ದಾರೆ..
ವರ್ಷಕ್ಕೊಮ್ಮೆ ನಡೆಯುವ ನಡೆಯುವ ಚಿತ್ರಸಂತೆಯಲ್ಲಿ‌ ಆಂಧ್ರ ಪ್ರದೇಶ, ತಮಿಳುನಾಡು, ಕೇರಳ‌ ಸೇರಿದಂತೆ ಹಲವು ರಾಜ್ಯಗಳಿಂದ 1500ಕ್ಕಿಂತ ಹೆಚ್ಚು ಕಲಾಭಿಮಾನಿಗಳು ಆಗಮಿಸಿ ತಾವು ರಚಿಸಿದ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಟ್ಟರು..ವಿವಿಧ ಮಾದರಿಯ ಕಲಾಕೃತಿಗಳನ್ನು ಅರಳಿಸುವ ಮೂಲಕ ಕಲಾಭಿಮಾನಿಗಳಲ್ಲಿ ಒಂದು ಕ್ಷಣ ಮಂತ್ರಮುಗ್ಧರನ್ನಾಗಿ ಮಾಡಿಸಿದರು..
ಸಣ್ಣಮಕ್ಕಳು, ದೊಡ್ಡವರು ಸೇರಿದಂತೆ ಎಲ್ಲಾ ವಯೋಮಾನದವರು ಆಗಮಿಸಿ ಚಿತ್ರಸಂತೆಯನ್ನು ಸವಿದರು.. ಬಹುತೇಕರ ವಿಶಿಷ್ಠ ಶೈಲಿಯ ಚಿತ್ರಗಳನ್ನು ಬೆರಗಣ್ಣಿನಿಂದ ನೋಡುವುದಲ್ಲದೆ ಅದ್ಭುತವೆನಿಸುವ ಚಿತ್ರಗಳನ್ನು ಮೊಬೈಲ್ ಮೂಲಕ ಸೆರೆಹಿಡಿದರು..
ಕುಮಾರಕೃಪ ರಸ್ತೆಯ ಇಕ್ಕೆಲ್ಲಗಳಲ್ಲಿ ವಾಹ್ ಎನಿಸುವ ಕಲಾಕೃತಿಗಳ ನೋಡಲು ನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದು ತಮ್ಮಗೆ ಇಷ್ಟವಾದ ಚಿತ್ರಪಟ ಖರೀದಿಸಿದ ದೃಶ್ಯ ಸಾಮಾನ್ಯವಾಗಿತ್ತು.. ಚಿತ್ರಸಂತೆಯಲ್ಲೇ ಸುಮಾರು 1 ಸಾವಿರ ರೂ.ಹಿಡಿದು 12 ಲಕ್ಷ ಬೆಲೆವರೆಗೂ ಕಲಾಕೃತಿಗಳ ಮಾರಾಟ ಬೆಲೆ ಇದ್ದದ್ದು ಕಂಡು..‌ ಚಿತ್ರಸಂತೆಯಲ್ಲಿ ಒಂದು ದಿನದ ಸುಮಾರು 3 ಕೋಟಿ ರೂ.ವಹಿವಾಟು ನಡೆದಿದ್ದು 3 ಲಕ್ಷ ರೂ.ಜನರು ಬಂದಿರುವುದಾಗಿ ರಾಜ್ಯ ಚಿತ್ರಕಲಾ ಪರಿಷತ್ ಅಧ್ಯಕ್ಷ ವಿ.ಶಂಕರ್ ತಿಳಿಸಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.