ಬೆಂಗಳೂರು: ನಗರದಲ್ಲಿ ಈಗಾಗಲೇ 97 ಮಂದಿ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಈ ಸಾವಿನ ಪ್ರಮಾಣ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ.
ಈಗಾಗಲೇ ನಗರದ ಒಳಭಾಗದಲ್ಲಿರುವ ಸ್ಮಶಾನಗಳಲ್ಲಿ ಜಾಗದ ಕೊರತೆ ಉಂಟಾಗಿದೆ. ಹೀಗಾಗಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮೃತಪಟ್ಟರೆ, ಅಂತ್ಯಕ್ರಿಯೆ ಮಾಡಲು ಸಾರ್ವಜನಿಕ ಸ್ಮಶಾನ ಸ್ಥಾಪಿಸಲು ಜಿಲ್ಲಾಡಳಿತ ಮುಂದಾಗಿದೆ. ಸರ್ಕಾರಿ ಜಮೀನುಗಳನ್ನು ಈಗಾಗಲೇ ಗುರುತಿಸಿ ತಹಶೀಲ್ದಾರರು ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಅವರಿಗೆ ವಿವರ ನೀಡಿದ್ದಾರೆ.
- ಬೆಂಗಳೂರು ಉತ್ತರ ತಾಲೂಕಿನ -ದಾಸನಪುರ, ಗಿಡ್ಡೇನಹಳ್ಳಿ ಗ್ರಾಮದ ಸರ್ವೇ ನಂ 80 ರಲ್ಲಿ 4 ಎಕರೆ.
ಬೆಂಗಳೂರು- ದಕ್ಷಿಣ:
- ಉತ್ತರಹಳ್ಳಿ - ಸೋಮನಹಳ್ಳಿ ಗ್ರಾಮದ 259 ಸರ್ವೇ ನಂ, 1 ಎಕರೆ 18 ಗುಂಟೆ
- ಉತ್ತರಹಳ್ಳಿ- ಗುಳಿಕಮಲೆ- 35 ಸರ್ವೇ ನಂ- 4 ಎಕರೆ
- ಉತ್ತರಹಳ್ಳಿ- ಗುಳಿಕಮಲೆ- 36 ಸರ್ವೇ ನಂ- 4 ಎಕರೆ
- ತಾವರೆಕೆರೆ- ತಿಪ್ಪಗೊಂಡನಹಳ್ಳಿ- 4-5 ಎಕರೆ
ಆನೇಕಲ್ ತಾಲೂಕು:
- ಜಿಗಣಿ - ಗಿಡ್ಡೇನಹಳ್ಳಿ- 23 ಸರ್ವೇ ನಂಬರ್- 3 ಎಕರೆ
ಯಲಹಂಕ ತಾಲೂಕು:
- ಜಾಲಾ- ಎಂ.ಹೊಸಹಳ್ಳಿ- 89 ಸರ್ವೇ- 2 ಎಕರೆ
- ಹೆಸರುಘಟ್ಟ- ಹುತ್ತನಹಳ್ಳಿ- 72 ಸರ್ವೇ ನಂ- 2 ಎಕರೆ
- ಜಾಲಾ- ಮಾರೇನಹಳ್ಳಿ- 182 ಸರ್ವೇ ನಂ- 5 ಎಕರೆ
- ಹೆಸರುಘಟ್ಟ-ಮಾವಳ್ಳಿಪುರ- 8 ಸರ್ವೇ ನಂ- 5 ಎಕರೆ
ಒಟ್ಟು 35 ಎಕರೆ 18 ಗುಂಟೆ ಜಮೀನನ್ನು ಸಾರ್ವಜನಿಕ ಸ್ಮಶಾನಕ್ಕಾಗಿ ಕಾಯ್ದಿರಿಸಲಾಗಿದೆ. ಬೇರೆ ಉದ್ದೇಶಕ್ಕೆ ಈ ಜಾಗವನ್ನು ಬಳಸುವಂತಿಲ್ಲ. ಜಮೀನನ್ನು ಗಡಿ ಗುರುತಿಸಿ ಸಂಬಂಧಿಸಿದವರಿಗೆ ಹಸ್ತಾಂತರ ಮಾಡಬೇಕು. ಜಮೀನು ಒತ್ತುವರಿಯಾಗದಂತೆ ತಂತಿ ಬೇಲಿ ಹಾಕಿ ಸಂರಕ್ಷಿಸಬೇಕು ಎಂದು ಜಿಲ್ಲಾಧಿಕಾರಿ ಶಿವಮೂರ್ತಿ ಆದೇಶಿಸಿದ್ದಾರೆ.