ETV Bharat / state

ವಿಧಾನ ಪರಿಷತ್​ನಲ್ಲಿ ಎನ್​ಆರ್​ಸಿ ಗದ್ದಲ: ರಾಜ್ಯಪಾಲರ ಭಾಷಣದ ಮೇಲೆಯೂ ಚರ್ಚೆ

author img

By

Published : Feb 20, 2020, 8:36 PM IST

ರಾಜ್ಯಪಾಲರ ಭಾಷಣದ ಚರ್ಚೆ ಬದಲು ಎನ್​ಆರ್​ಸಿ ವಿಚಾರವಾಗಿ ವಿಧಾನಪರಿಷತ್​​ನಲ್ಲಿ ಎನ್​ಆರ್​ಸಿ ವಿಚಾರವಾಗಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ವಾದ- ಪ್ರತಿವಾದ ನಡೆದು ವಾಗ್ವಾದಕ್ಕೂ ಕಾರಣವಾಯ್ತು.

Beginning of debate on Governor's speech
ವಿಧಾನ ಪರಿಷತ್​ನಲ್ಲಿ ರಾಜ್ಯಪಾಲರ ಭಾಷಣ ಮೇಲೆ ಚರ್ಚೆ ಆರಂಭ

ಬೆಂಗಳೂರು: ವಿಧಾನ ಪರಿಷತ್​ನಲ್ಲಿ ಗದ್ದಲ ಗೊಂದಲದ ಬಳಿಕ ಅಂತಿಮವಾಗಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯೂ ನಡೆಯಿತು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಕರೆದ ಹಿನ್ನೆಲೆ ಕಲಾಪಕ್ಕೆ ಮರಳಿದ ಪ್ರತಿಪಕ್ಷ ಸದಸ್ಯರು ಆರಂಭದಲ್ಲೇ ಎನ್ಆರ್​ಸಿ ವಿಚಾರವಾಗಿ ಗದ್ದಲ ಆರಂಭಿಸಿದ್ದರು. ಆಗ ಆಡಳಿತ ಪಕ್ಷದ ಸದಸ್ಯರು ಪ್ರತಿಪಕ್ಷಗಳ ನಿಲುವನ್ನು ವಿರೋಧಿಸಿದರು. ಈ ಹಿನ್ನೆಲೆಯಲ್ಲಿ ಸಾಕಷ್ಟು ವಾಗ್ವಾದ ಸದನದಲ್ಲಿ ಕಂಡು ಬಂತು.

ಸಿಎಎ ಎನ್ಆರ್​ಸಿ ವಿಷಯವನ್ನು ಆಡಳಿತ ಪಕ್ಷದ ರವಿ ಕುಮಾರ್ ಪ್ರಸ್ತಾಪಿಸಿದರು. ಆಗ ಇದಕ್ಕೆ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದರು. ಸದನದಲ್ಲಿ ರಾಜ್ಯಪಾಲರ ಭಾಷಣಕ್ಕೆ ಸೀಮಿತವಾಗಿ ಮಾತನಾಡುವುದು ಒಳಿತು ಎಂದು ಸಲಹೆ ನೀಡಿದರು. ಅದಕ್ಕೆ ಸಭಾಪತಿಗಳು ಕೂಡ ಅನುಮೋದನೆ ನೀಡಿದರು. ಮಾ.2 ರಿಂದ ಸಂವಿಧಾನದ ಮೇಲಿನ ಚರ್ಚೆ ಮೇಲೆಯೇ ಮಾತನಾಡಲು ಅವಕಾಶ ಇದೆ. ಆಗ ಅವಕಾಶ ಬಳಿಸಿಕೊಳ್ಳಿ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಸೀಮಿತ ಮಾಡುವುದು ಸರಿಯಲ್ಲ. ಕಾನೂನು ಸೂವ್ಯವಸ್ಥೆ ಚರ್ಚೆ ಬರುತ್ತದೆ ಎಂದು ಸಮಜಾಯಿಷಿ ನೀಡಿದರು. ರಾಜ್ಯಪಾಲರ ಭಾಷಣದ ಮೇಲೆಯೇ ಚರ್ಚೆ ಆಗಲಿ ಎಂದು ಪ್ರತಿಪಕ್ಷ ಹೇಳಿದರೆ, ಅವರ ಭಾಷಣದ ವಿಚಾರ ಸೀಮಿತವಾಗಿಸುವುದು ಸರಿಯಲ್ಲ ಎಂದು ಆಡಳಿತ ಪಕ್ಷ ಸದಸ್ಯರು ಹೇಳಿದರು.

ಗಲಾಟೆ ನುಡವೆಯೇ ಭಾಷಣ ಮುಂದುವರಿಸಿದ ರವಿಕುಮಾರ್, ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಗುಣಗಾನ ಮಾಡಿದರು. ಪ್ರವಾಹವನ್ನು ಸಮರ್ಥವಾಗಿ ನಿಭಾಯಿಸಿದರು. ಬಡವರ ಕಣ್ಣೀರು ಒರೆಸುವ ಮೊದಲ ಕಾರ್ಯವನ್ನು ಯಶಸ್ವಿಯಾಗಿ ಅವರು ಮಾಡಿದರು ಎಂದರು. ಸಂಪುಟ ರಚನೆ, ವಿಸ್ತರಣೆ ಆಗಲ್ಲ ಎಂದಿದ್ದರು. ಆದರೆ ಸಮಸ್ಯೆ ಇಲ್ಲದೇ ಮಾಡಿದರು. ರಾಜ್ಯದಲ್ಲಿ ಸುಭದ್ರ ಸರ್ಕಾರ ಇದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಿಸಲಾಗಿದೆ. ಕಾನೂನು ಸುವ್ಯವಸ್ಥೆ ಎಲ್ಲಾ ಕಡೆ ಸಮರ್ಥವಾಗಿ ಪಾಲನೆಯಾಗಿದೆ ಎಂದು ಸರ್ಕಾರವನ್ನ ಸಮರ್ಥನೆ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.