ETV Bharat / state

ಕೃಷಿ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಗೆ ಶೀಘ್ರದಲ್ಲೇ ಕ್ರಮ: ಸಚಿವ ಬಿ.ಸಿ ಪಾಟೀಲ್

ಕೃಷಿ ಇಲಾಖೆಯಲ್ಲಿ 8,141 ಹುದ್ದೆಗಳಿವೆ. ಈ ಪೈಕಿ 4,293 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ, 3,851 ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಭರವಸೆ ನೀಡಿದ್ದಾರೆ.

BC Patil promise to fill the vacancies in the Agriculture Departmen
ಕೃಷಿ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ
author img

By

Published : Mar 10, 2021, 6:18 PM IST

ಬೆಂಗಳೂರು: ಕೃಷಿ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಭರ್ತಿ ಮಾಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಪ್ರಶ್ನೋತ್ತರ ವೇಳೆ ಜೆಡಿಎಸ್‍ ಸದಸ್ಯ ಹೆಚ್.ಡಿ. ರೇವಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೃಷಿ ಇಲಾಖೆಯಲ್ಲಿ 8,141 ಹುದ್ದೆಗಳಿವೆ. ಈ ಪೈಕಿ 4,293 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ, 3,851 ಹುದ್ದೆಗಳು ಖಾಲಿ ಇವೆ. ಆಡಳಿತಕ್ಕೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಹೊರಗುತ್ತಿಗೆ ಆಧಾರದ ಮೇಲೆ 2,255 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಖಾಲಿ ಇರುವ ಹುದ್ದೆಗಳನ್ನು ಕೆಪಿಎಸ್‍ಸಿ ಮೂಲಕ ಭರ್ತಿ ಮಾಡಲು ತೀರ್ಮಾನಿಸಿದ್ದೇವೆ. ಈ ಸಂಬಂಧ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರ ನಡೆದಿದೆ. ಅನುಮತಿ ಸಿಕ್ಕಿದ ಕೂಡಲೇ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೆ ಆಕ್ಷೇಪಿಸಿದ ಹೆಚ್.ಡಿ.ರೇವಣ್ಣ, ಹುದ್ದೆಗಳು ಅರ್ಧಕ್ಕರ್ದ ಖಾಲಿ ಇದ್ದರೆ ಇಲಾಖೆಯಲ್ಲಿ ಹೇಗೆ ಕೆಲಸ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಮಾನದಂಡಗಳಿಗೆ ಅನುಸಾರವಾಗಿಯೇ ಸಾರಿಗೆ ಕಚೇರಿ ಆರಂಭ : ಯಾವುದೇ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಗಳನ್ನು ತೆರೆಯಲು ಮಾನದಂಡಗಳಿದ್ದು, ಆ ಮಾನದಂಡಗಳಿಗೆ ಅನುಸಾರವಾಗಿಯೇ ಸಾರಿಗೆ ಕಚೇರಿಗಳನ್ನು ಆರಂಭಿಸಲಾಗುತ್ತಿದೆ ಎಂದು ಸಾರಿಗೆ ಸಚಿವರೂ ಆದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ತಿಳಿಸಿದರು. ಕಾಂಗ್ರೆಸ್ ಸದಸ್ಯ ಶಿವಾನಂದ ಎಸ್. ಪಾಟೀಲ್ ಅವರ ಪ್ರಶ್ನೆಗೆ ಅವರು ಉತ್ತರಿಸಿದರು.

ಬಸವನ ಬಾಗೇವಾಡಿಯಲ್ಲಿ ನೂತನ ಪ್ರಾದೇಶಿಕ ಕಚೇರಿಯನ್ನು ಆರಂಭಿಸುವುದಕ್ಕೆ ನಿಯಮಗಳಲ್ಲಿ ಅವಕಾಶವಿಲ್ಲ. ಯಾವುದೇ ಒಂದು ಪ್ರಾದೇಶಿಕ ಕಚೇರಿಗೂ, ಇನ್ನೊಂದು ಕಚೇರಿಗೂ 50 ಕಿ.ಮೀ. ಅಂತರ ಇರಬೇಕು. ಬಸವನ ಬಾಗೇವಾಡಿ ವಿಜಯಪುರದಿಂದ 40 ಕಿ.ಮೀ. ದೂರವಿದೆ. ಹಾಗಾಗಿ ಮಾನದಂಡಗಳ ಪ್ರಕಾರ ಕಚೇರಿ ಆರಂಭ ಕಷ್ಟ. ಆದರೂ, ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ: ಸಿಎಂ ಆದವರು ಖಾತೆ ಇಲ್ಲದೆ ಅಭಿವೃದ್ಧಿಗೆ ಕೆಲಸ ಮಾಡಬೇಕು; ಯಡಿಯೂರಪ್ಪಗೆ ಹಳ್ಳಿ ಹಕ್ಕಿ ಟಾಂಗ್

ರಾಜ್ಯದಲ್ಲಿ ಸದ್ಯ 67 ಪ್ರಾದೇಶಿಕ ಸಾರಿಗೆ ಕಚೇರಿಗಳಿದ್ದು, ಹೊಸದಾಗಿ 5 ಸಾರಿಗೆ ಕಚೇರಿಗಳನ್ನು ಆರಂಭಿಸುವ ಪ್ರಸ್ತಾಪ ಇದೆ. ವಿಜಯಪುರ ಜಿಲ್ಲೆಯ ಇಂಡಿ, ಸಿಂದಗಿ ಅಥವಾ ಮುದ್ದೆಬಿಹಾಳ, ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಉಡುಪಿ ಜಿಲ್ಲೆಯ ಕುಂದಾಪುರ, ರಾಯಚೂರು ಜಿಲ್ಲೆಯ ಸಿಂಗನೂರು ಅಥವಾ ಲಿಂಗಸಗೂರಿನಲ್ಲಿ ನೂತನ ಪ್ರಾದೇಶಿಕ ಕಚೇರಿ ಆರಂಭಿಸುವ ಪ್ರಸ್ತಾಪ ಇದೆ ಎಂದು ಸಾರಿಗೆ ಸಚಿವ ಹೇಳಿದರು.

ಹೊಸದಾಗಿ ಸಾರಿಗೆ ಕಚೇರಿಗಳನ್ನು ಆರಂಭಿಸಲು ಪ್ರಸ್ತಾಪಿತ ತಾಲೂಕು ಕೇಂದ್ರಕ್ಕೆ ಒಳಪಡುವ ವ್ಯಾಪ್ತಿಯಲ್ಲಿ, ಈಗಾಗಲೇ ನೋಂದಣಿಯಾಗಿ ಉಪಯೋಗದಲ್ಲಿರುವ ಎಲ್ಲಾ ವರ್ಗಗಳ ವಾಹನಗಳಿಂದ ಕನಿಷ್ಠ 20 ಕೋಟಿ ರೂ. ರಾಜಸ್ವ ವಸೂಲಿಯಾಗಬೇಕು. ಕಚೇರಿ ವ್ಯಾಪ್ತಿಯಲ್ಲಿ 10 ಸಾವಿರ ಚಾಲನಾ ಪರವಾನಿಗೆಗಳು ನೀಡುವಂತಿರಬೇಕು. ಆ ಭಾಗದಲ್ಲಿ ವಾರ್ಷಿಕ ಸರಾಸರಿ 10 ಸಾವಿರ ವಾಹನಗಳು ನೋಂದಣಿಯಾಗಿರಬೇಕು ಎಂಬ ಮಾನದಂಡಗಳೂ ಇವೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.