ETV Bharat / state

ಎಸ್​ ಎಂ ಕೃಷ್ಣ, ನಾರಾಯಣಮೂರ್ತಿ, ಪಡುಕೋಣೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ: ಸಚಿವ ಅಶ್ವತ್ಥ ನಾರಾಯಣ್ - BBMP Ward division done scientifically

ಬಿಬಿಎಂಪಿ ವಾರ್ಡ್ ವಿಂಗಡಣೆ ವೈಜ್ಞಾನಿಕವಾಗಿ ನಡೆದಿದ್ದು, ಈ ಬಗ್ಗೆ ಯಾರೂ ಕೋರ್ಟ್​ ಮೊರೆ ಹೋಗುವ ಅಗತ್ಯ ಇಲ್ಲ. ಏನೇ ಇದ್ದರೂ ಕಾನೂನಾತ್ಮಕವಾಗಿ ಇಲ್ಲಿಯೇ ಸರಿಪಡಿಸೋಣ ಎಂದು ಸಚಿವ ಅಶ್ವತ್ಥ ನಾರಾಯಣ್ ಹೇಳಿದ್ದಾರೆ.

bbmp-ward-division-done-scientifically-says-minister-ashwattha-narayan
ವಾರ್ಡ್ ವಿಂಗಡನೆ ವೈಜ್ಞಾನಿಕವಾಗಿ ಆಗಿದೆ, ಕೋರ್ಟ್ ಮೊರೆ ಹೋಗುವುದು ಬೇಡ: ಸಚಿವ ಅಶ್ವತ್ಥ ನಾರಾಯಣ್
author img

By

Published : Jun 25, 2022, 4:10 PM IST

Updated : Jun 25, 2022, 4:56 PM IST

ಬೆಂಗಳೂರು: ಬಿಬಿಎಂಪಿ ವಾರ್ಡ್ ವಿಂಗಡಣೆ ವೈಜ್ಞಾನಿಕವಾಗಿ ನಡೆದಿದೆ. ಈ ಬಗ್ಗೆ ಕೋರ್ಟ್ ಮೋರೆ ಹೋಗುವ ಅಗತ್ಯ ಇಲ್ಲ ಎಂದು ಸಚಿವ ಅಶ್ವತ್ಥ ನಾರಾಯಣ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಇರುವ ಕಡೆ ವಾರ್ಡ್ ಕಡಿಮೆ ಮಾಡಲಾಗಿದೆ, ಬಿಜೆಪಿ ಇರುವ ಕಡೆ ವಾರ್ಡ್ ಹೆಚ್ಚು ಮಾಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಆಕ್ಷೇಪಣೆ ಇದ್ದಲ್ಲಿ, ಆಕ್ಷೇಪಣೆ ಸಲ್ಲಿಸಬಹುದು. 15 ದಿನದಲ್ಲಿ ಆಕ್ಷೇಪಣೆ ಕೊಡಬಹುದು. ಕಾನೂನು ಹೋರಾಟ ಮಾಡುವ ಅವಶ್ಯಕತೆ ಇಲ್ಲ. ಏನೇ ಇದ್ದರೂ ಕಾನೂನಾತ್ಮಕವಾಗಿ ಇಲ್ಲಿಯೇ ಸರಿಪಡಿಸೋಣ ಎಂದು ಹೇಳಿದ್ದಾರೆ.

ಎಸ್.ಎಂ.ಕೃಷ್ಣ ಭೇಟಿ: ಸಚಿವ ಅಶ್ವತ್ಥ್ ನಾರಾಯಣ್ ಸದಾಶಿವನಗರದಲ್ಲಿರುವ ಎಸ್.ಎಂ.ಕೃಷ್ಣ ಅವರ ಮನೆಗೆ ಭೇಟಿ ನೀಡಿ, ಕೆಂಪೇಗೌಡರ ಹೆಸರಲ್ಲಿ ಪ್ರಶಸ್ತಿ ನೀಡುವ ಬಗ್ಗೆ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಅವರು, ಜೂನ್ 27ರಂದು ನಾಡಪ್ರಭು ಕೆಂಪೇಗೌಡರ ಜನ್ಮದಿನವಾಗಿದೆ. ಇವರ ಜನ್ಮದಿನಾಚರಣೆ ಪ್ರಯುಕ್ತ ಕರ್ನಾಟಕ ಸರ್ಕಾರ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಲು ನಿರ್ಧರಿಸಿದೆ. ಇದಕ್ಕಾಗಿ ಮೋಹನ್ ದಾಸ್ ಪೈ, ಬಾಲಸುಬ್ರಹ್ಮಣ್ಯಂ, ಶಂಕರಲಿಂಗೇಗೌಡರನ್ನು ಒಳಗೊಂಡ ಸದಸ್ಯರ ಸಮಿತಿ ರಚಿಸಲಾಗಿತ್ತು. ಈ ಬಾರಿ ಮೂರು ಜನರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಲು ನಿರ್ಧರಿಸಲಾಗಿದೆ. ಮಾಜಿ ಸಿಎಂ ಎಸ್.ಎಂ.ಕೃಷ್ಣ, ಇನ್ಫೋಸಿಸ್ ನಾರಾಯಣ ಮೂರ್ತಿ ಹಾಗೂ ಕ್ರೀಡಾಪಟು ಪ್ರಕಾಶ್ ಪಡುಕೋಣೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ವಾರ್ಡ್ ವಿಂಗಡನೆ ವೈಜ್ಞಾನಿಕವಾಗಿ ಆಗಿದೆ, ಕೋರ್ಟ್ ಮೊರೆ ಹೋಗುವುದು ಬೇಡ: ಸಚಿವ ಅಶ್ವತ್ಥ ನಾರಾಯಣ್

ಕೆಂಪೇಗೌಡ ಪ್ರತಿಮೆ ಅನಾವರಣ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡ ಪ್ರತಿಮೆ ಉದ್ಘಾಟನೆ ವಿಚಾರವಾಗಿ ಮಾತನಾಡಿದ ಅವರು, ಪ್ರತಿಮೆ ಕಾಮಗಾರಿ ಬಹುತೇಕ ಮುಗಿದಿದೆ. ಲ್ಯಾಂಡ್ ಸ್ಕೇಪಿಂಗ್ ಆಗಬೇಕಿದೆ, ಅದೂ ಕೂಡ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಉದ್ಘಾಟನೆ ಆಗಲಿದೆ ಎಂದು ತಿಳಿಸಿದರು.

ಕೆಂಪೇಗೌಡ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದಿಂದ ಎಲ್ಲ ರೀತಿಯ ವ್ಯವಸ್ಥೆ ಮಾಡಲಾತ್ತಿದೆ. ಮಾಜಿ ಪ್ರಧಾ‌ನಿ ಹೆಚ್.ಡಿ. ದೇವೇಗೌಡ, ಪ್ರತಿಪಕ್ಷ ನಾಯಕರು, ಡಿ.ಕೆ. ಶಿವಕುಮಾರ್, ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಎಲ್ಲ ನಾಯಕರ ಸಹಕಾರದಿಂದ ಕೆಂಪೇಗೌಡ ಪ್ರತಿಮೆ ಅನಾವರಣ ಮಾಡುತ್ತೇವೆ ಎಂದು ಹೇಳಿದರು. ಕೆಂಪೇಗೌಡರು ಹುಟ್ಟಿದ ಕೆಂಪಾಪುರವನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಮಾಗಡಿ ಕೋಟೆಯನ್ನೂ ಅಭಿವೃದ್ಧಿ ಮಾಡಲಾಗುತ್ತಿದೆ. ನಮ್ಮ ನಾಡಿನ ಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳ ಸಹಕಾರವನ್ನು ಪಡೆದಿದ್ದೇವೆ. ಶೀಘ್ರವೇ ಕೆಂಪೇಗೌಡರಿಗೆ ಸಂಬಂಧಿಸಿದ ಎಲ್ಲಾ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸಲಿದ್ದೇವೆ‌ ಎಂದು ಹೇಳಿದರು.

ಓದಿ : ಚಿಕ್ಕಮಗಳೂರಲ್ಲಿ ಪ್ರಕೃತಿ ವಿಸ್ಮಯ.. ಈಚಲು ಮರದಲ್ಲಿ ಗಣಪ ಪ್ರತ್ಯಕ್ಷ!

Last Updated : Jun 25, 2022, 4:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.