ETV Bharat / state

ಕೋವಿಡ್​ ಪತ್ತೆ ಹಚ್ಚಲು ಸ್ಮೆಲ್ ಕಾರ್ಡ್ ಬಳಕೆಗೆ ಮುಂದಾದ ಬಿಬಿಎಂಪಿ ​

ಮಳೆಗಾಲದಲ್ಲಿ ಜ್ವರ, ಶೀತ ಸಾಮಾನ್ಯ, ಕೊರೊನಾ ತಗುಲಿದವರು ವಾಸನೆ-ರುಚಿ ಕಳೆದುಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಸೋಂಕು ತಗುಲಿರುವುದನ್ನು ಪತ್ತೆಹಚ್ಚಲು ಸ್ಮೆಲ್ ಕಾರ್ಡ್ಸ್ ಬಳಕೆ ಮಾಡಿದರೆ ಉತ್ತಮ ಎಂದು ಬಿಬಿಎಂಪಿ ಮೇಯರ್​ ಅಭಿಪ್ರಾಯಪಟ್ಟಿದ್ದಾರೆ.

BBMP mayor contemplates use of smell card for covid detection
ಬಿಬಿಎಂಪಿ ಮೇಯರ್ ಗೌತಮ್ ಕುಮಾರ್​​
author img

By

Published : Jul 28, 2020, 12:16 PM IST

ಬೆಂಗಳೂರು: ಕೊರೊನಾ ಪತ್ತೆ ಹಚ್ಚಲು ಹೊಸ ಪ್ರಯೋಗಕ್ಕೆ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್​​ ಯೋಚಿಸಿದ್ದಾರೆ. ಅಲ್ಲದೆ, ಸಿಎಂ ಗಮನಕ್ಕೆ ತಂದು ಸ್ಮೆಲ್ ಕಾರ್ಡ್​ ಬಳಕೆಗೆ ಮುಂದಾಗಿದ್ದಾರೆ.

ಲೆಮನ್ , ಆರೆಂಜ್, ರೋಸ್ ಹೀಗೆ ವಿವಿಧ ಫ್ಲೇವರ್​ಗಳ ಸ್ಮೆಲ್ ಕಾರ್ಡ್ಸ್ ಬಳಕೆ ಮಾಡಿ, ಜನರು ಸ್ಮೆಲ್ ಪತ್ತೆ ಹಚ್ಚಿದರೆ ಮಾತ್ರ ಕಟ್ಟಡದ ಒಳಗೆ ಬಿಡಲಾಗುತ್ತದೆ. ಹೋಟೆಲ್, ಮಾಲ್, ಥಿಯೇಟರ್, ಸರ್ಕಾರಿ ಕಚೇರಿ ಪ್ರವೇಶಕ್ಕೂ ಮುನ್ನ ಈ ಪರೀಕ್ಷೆ ಮಾಡಲಾಗುತ್ತದೆ. ದೇಹದ ತಾಪಮಾನ ಪರೀಕ್ಷಿಸಿದ ಬಳಿಕ ಸ್ಮೆಲ್ ಪರೀಕ್ಷೆ ಮಾಡಿ ವಾಸನೆ ಪತ್ತೆ ಹಚ್ಚಲು ಸಾಧ್ಯವಾದರೆ ಮಾತ್ರ ಒಳಗೆ ಬಿಡಲಾಗುತ್ತದೆ.

ಸ್ಮೆಲ್​ ಕಾರ್ಡ್​ ಬಳಕೆಗೆ ಮುಂದಾದ ಬಿಬಿಎಂಪಿ ​​

ದೆಹಲಿಯ ಸಾರ್ವಜನಿಕ ಸ್ಥಳಗಳಲ್ಲಿ ಈಗಾಗಲೇ ಈ ಪ್ರಕ್ರಿಯೆ ಬಳಕೆಯಲ್ಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲೂ ಬಳಸಲು ಪ್ರಸ್ತಾವನೆ ಇಡುತ್ತೇವೆ ಎಂದು ಮೇಯರ್​ ಗೌತಮ್​ ಕುಮಾರ್​ ತಿಳಿಸಿದ್ದಾರೆ. ಮಳೆಗಾಲದಲ್ಲಿ ಜ್ವರ, ಶೀತ ಸಾಮಾನ್ಯ, ಕೊರೊನಾ ತಗುಲಿದವರು ವಾಸನೆ-ರುಚಿ ಕಳೆದುಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಸೋಂಕು ತಗುಲಿರುವುದನ್ನು ಪತ್ತೆಹಚ್ಚಲು ಸ್ಮೆಲ್ ಕಾರ್ಡ್ಸ್ ಬಳಕೆ ಮಾಡಿದರೆ ಉತ್ತಮ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಸಿಎಂ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.