ಬೆಂಗಳೂರು: ಕೋವಿಡ್-19 ಲಾಕ್ಡೌನ್ ಹಿನ್ನೆಲೆ ಬಿಬಿಎಂಪಿ ದಿನಗೂಲಿ ನೌಕರರಿಗೆ, ನಿರ್ಗತಿಕರಿಗೆ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸುತ್ತಿದೆ.
![banglore](https://etvbharatimages.akamaized.net/etvbharat/prod-images/6598812_gt.jpg)
ಪಶ್ಚಿಮ ವಿಭಾಗದಲ್ಲಿರುವ ಬಡ ಜನರು, ಹೊರ ರಾಜ್ಯದ ಕಾರ್ಮಿಕರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಕಾನಿಷ್ಕಾ ಹೋಟೆಲ್ ಪಕ್ಕದ ಬಿಬಿಎಂಪಿ ಪ್ರೌಢ ಶಾಲೆಯನ್ನು ತಾತ್ಕಾಲಿಕವಾಗಿ ನಿರಾಶ್ರಿತರ ಕೇಂದ್ರವಾಗಿ ಪರಿವರ್ತಿಸಲಾಗಿದೆ. ಅಲ್ಲದೆ ವಸತಿ ಮತ್ತು ಆಹಾರದ ವ್ಯವಸ್ಥೆಯನ್ನೂ ಪಾಲಿಕೆ ಮಾಡಲಿದೆ.
![banglore](https://etvbharatimages.akamaized.net/etvbharat/prod-images/6598812_.jpg)
ಇನ್ನು ಬಿಬಿಎಂಪಿಯ 198 ಸದಸ್ಯರು ಹಾಗೂ 20 ನಾಮನಿರ್ದೇಶಿತ ಸದಸ್ಯರ ಮೂರು ತಿಂಗಳ ಗೌರವಧನ 60 ಲಕ್ಷ ರೂಪಾಯಿಗಳನ್ನು ಕೋವಿಡ್-19 ತಡೆಗಾಗಿ ಸಿಎಂ ಪರಿಹಾರ ನಿಧಿಗೆ ನೀಡಲು ನಿರ್ಧರಿಸಲಾಗಿದೆ.