ಬೆಂಗಳೂರು : ರಾಜಧಾನಿಯಲ್ಲಿ ಕೊರೊನಾ ಸೋಂಕು ಹತೋಟಿಯಲ್ಲಿರುವ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಸೇರಿದಂತೆ ಈಗಿರುವ ಎಲ್ಲ ನಿರ್ಬಂಧಗಳನ್ನು ಈ ವಾರಕ್ಕೆ ಸೀಮಿತಗೊಳಿಸಿದರೆ ಸಾಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸದ್ಯ ಚಾಲ್ತಿಯಲ್ಲಿರುವ ನೈಟ್ ಕರ್ಫ್ಯೂ ನಿಯಮ ಒಂದು ವಾರ ಪಾಲಿಸಬೇಕು. ಆನಂತರ ಇದನ್ನು ಮುಂದುವರೆಸದಿದ್ದರೂ ಸಮಸ್ಯೆ ಇಲ್ಲ ಎಂದರು.
ಸದ್ಯ ದಿನಕ್ಕೆ ನಗರದಲ್ಲಿ 23 ಸಾವಿರ ಕೋವಿಡ್ ಪ್ರಕರಣ ವರದಿಯಾಗುತ್ತಿವೆ. ಈಗ ನಿತ್ಯ ಸೋಂಕು ಹೆಚ್ಚಾಗುತ್ತಿದೆ. 2ನೇ ಅಲೆಗಿಂತ ಸೋಂಕು ಹರಡುವುದು ತೀವ್ರವಾಗಿದೆ. ಆದರೆ, ಈಗಿನ ಕೋವಿಡ್ ರೋಗದಲ್ಲಿ ಆತಂಕ ಪಡುವಂತಹ ಯಾವುದೇ ಲಕ್ಷಣಗಳಿಲ್ಲ ಎಂದು ತಿಳಿಸಿದರು.
ಕಂಟ್ರೋಲ್ ರೂಂನಿಂದ ಎಲ್ಲ ಮಾನಿಟರ್ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲೂ ದಾಖಲಾಗಿರುವ ಸೋಂಕಿತರಿಗೆ ಯಾವುದೇ ಸಮಸ್ಯೆ ಇಲ್ಲ. ಸೋಂಕಿನ ಸಂಖ್ಯೆ ಹೆಚ್ಚಿದ್ದರೂ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಕೋವಿಡ್ ಸೋಂಕಿನಿಂದ ಸರ್ಕಾರದ ಕಡೆಯಿಂದ 600 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ಸಾವಿರ ಜನ ಸ್ವಂತ ಖರ್ಚಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ, ಮಾಸ್ಕ್ ಹಾಕಲೇಬೇಕು ಎಂದಿದ್ದಾರೆ.
ಓದಿ: 1 ಲೀಟರ್ ಹಾಲಿನ ದರ 3 ರೂ.ಏರಿಸಲು KMF ಚಿಂತನೆ.. ನಿಮ್ ಬಾಯಿ ಸುಡಲಿದೆ ಮಿಲ್ಕ್..