ಬೆಂಗಳೂರು: ಒಂದೆಡೆ ಅಧಿಕಾರಿಗಳು ಕೋವಿಡ್-19 ತಡೆಗಟ್ಟಲು ಹಗಲು-ರಾತ್ರಿ ಶ್ರಮಪಡುತ್ತಿದ್ರೆ, ಇತ್ತ ಇದರ ಪರಿವೇ ಇಲ್ಲದ ಕೆಲವರು ಪಾಲಿಕೆ ಆವರಣದಲ್ಲಿ ಅತ್ಯಾಧುನಿಕ ಜಿಮ್ ಹಾಗೂ ರೆಸ್ಟೋರೆಂಟ್ ನಿರ್ಮಾಣ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ.

ಈ ಬಗ್ಗೆ ಪಾಲಿಕೆ ಅಧಿಕಾರಿ-ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಮೃತ್ ರಾಜ್, ಮೇಯರ್ ಗೌತಮ್ ಕುಮಾರ್ಗೆ ಪತ್ರ ಬರೆದಿದ್ದಾರೆ. ಈ ಕುರಿತು ಮೇಯರ್ ಯೋಜನಾ ವಿಭಾಗದ ಅಧಿಕಾರಿಗೆ ಪತ್ರ ಬರೆದು, ಹೈ-ಟೆಕ್ ಜಿಮ್ನ ಮರ ಹಾಗೂ ಗಾಜಿನ ಮೂಲಕ 30x60 ಚದರ ಅಡಿ ನಿರ್ಮಾಣಕ್ಕೆ ಅಗತ್ಯ ಸಾಮಾಗ್ರಿ ಒದಗಿಸಲು ಕೂಡಲೇ ಕ್ರಮಕೈಗೊಳ್ಳುವಂತೆ ತಿಳಿಸಿದ್ದಾರೆ.
ಹೋಟೇಲ್ ಕಟ್ಟಡ ನಿರ್ಮಾಣಕ್ಕೆ ಇಟ್ಟಿರುವ 2 ಕೋಟಿ ರೂ. ಅನುದಾನ ಬಳಸಿ ಕೂಡಲೇ ರೆಸ್ಟೋರೆಂಟ್ ನಿರ್ಮಾಣ ಮಾಡಲು ಸೂಚಿಸಿ ಪತ್ರ ಬರೆದಿದ್ದಾರೆ.