ETV Bharat / state

ಇಂದು ಮಧ್ಯರಾತ್ರಿಯಿಂದಲೇ ಕೆ.ಆರ್. ಮಾರುಕಟ್ಟೆ ಸೀಲ್​ ಡೌನ್ ತೆರವು: ಬಿಬಿಎಂಪಿ ಆಯುಕ್ತರಿಂದ ಪರಿಶೀಲನೆ - ಕೆ.ಆರ್. ಮಾರುಕಟ್ಟೆಗೆ ಮಂಜುನಾಥ್ ಪ್ರಸಾದ್ ಭೇಟಿ

ಕೆ.ಆರ್. ಮಾರುಕಟ್ಟೆ ಸೀಲ್ ​ಡೌನ್ ತೆರವು ಮಾಡುವ ಹಿನ್ನೆಲೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಜಂಟಿ ಆಯುಕ್ತ ಸರ್ಫರಾಜ್ ಖಾನ್ ಹಾಗೂ ವಿಶೇಷ ಆಯುಕ್ತ ರವೀಂದ್ರ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

BBMP commissioner visit Kr market
ಇಂದು ಮಧ್ಯರಾತ್ರಿಯಿಂದಲೇ ಕೆ.ಆರ್. ಮಾರುಕಟ್ಟೆ ಸೀಲ್​ಡೌನ್ ತೆರವು
author img

By

Published : Aug 31, 2020, 3:12 PM IST

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಕಳೆದ ಐದು ತಿಂಗಳಿನಿಂದ ಬಂದ್ ಮಾಡಲಾಗಿದ್ದ ಕೆ.ಆರ್. ಮಾರುಕಟ್ಟೆ ಹಾಗೂ ಕಲಾಸಿಪಾಳ್ಯವನ್ನು ಇಂದು ಮಧ್ಯರಾತ್ರಿಯಿಂದಲೇ ತೆರೆಯಲು ಬಿಬಿಎಂಪಿ ಅನುಮತಿ ನೀಡಿದ್ದು, ಇಂದೇ ವ್ಯಾಪಾರಸ್ಥರು ಅಂಗಡಿ-ಮಳಿಗೆಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ.

ಬಿಬಿಎಂಪಿ ವತಿಯಿಂದ ಮಾರುಕಟ್ಟೆ ಆವರಣದಲ್ಲಿ ಸ್ಯಾನಿಟೈಸೇಷನ್ ನಡೆಯುತ್ತಿದೆ. ಮಾರುಕಟ್ಟೆ ಸೀಲ್​ ಡೌನ್ ತೆರೆಯುವ ಹಿನ್ನೆಲೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಜಂಟಿ ಆಯುಕ್ತ ಸರ್ಫರಾಜ್ ಖಾನ್ ಹಾಗೂ ವಿಶೇಷ ಆಯುಕ್ತ ರವೀಂದ್ರ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.‌

ಇಂದು ಮಧ್ಯರಾತ್ರಿಯಿಂದಲೇ ಕೆ.ಆರ್. ಮಾರುಕಟ್ಟೆ ಸೀಲ್​ ಡೌನ್ ತೆರವು

ಪರಿಶೀಲನೆ ಬಳಿಕ ಮಾತನಾಡಿದ ಆಯುಕ್ತ ಮಂಜುನಾಥ್ ಪ್ರಸಾದ್, ಲಾಕ್​ಡೌನ್ ಸೇರಿದಂತೆ ತಿಂಗಳಾನುಗಟ್ಟಲೆ ಮಾರುಕಟ್ಟೆ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ನಾಳೆಯಿಂದ ಮಾರುಕಟ್ಟೆ ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಇಂದು ಸ್ವಚ್ಚತೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ವ್ಯಾಪಾರ ಮಾಡುವಾಗ ಸಾಮಾಜಿಕ ಅಂತರ ಕಾಪಾಡಬೇಕು. ಹೀಗಾಗಿ ಮಳಿಗೆಗಳಲ್ಲಿ ಮಾರ್ಕಿಂಗ್ ಮಾಡಲಾಗಿದೆ ಹಾಗೂ ಪ್ರತೀ ಅಂಗಡಿಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಮೂರು ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಮಾರುಕಟ್ಟೆಯ ನವೀಕರಣ ನಡೆಯುತ್ತಿದ್ದು, ಅಗ್ನಿ ಅವಘಡ ತಡೆಯಲು ಫೈರ್ ಸೇಫ್ಟಿ ಸರ್ವಿಸ್ ವ್ಯವಸ್ಥೆ ಮಾಡಲಾಗುತ್ತಿದೆ. ಇಷ್ಟು ದಿನ ಅಂಗಡಿ ಮುಚ್ಚಲಾಗಿತ್ತು. ಆದ್ರೆ ಬಾಡಿಗೆ ತೆಗೆದುಕೊಳ್ಳಬೇಕೋ ಬೇಡವೋ ಅನ್ನುವ ಬಗ್ಗೆ ಚರ್ಚೆ ಮಾಡುತ್ತೇವೆ. ಎಲ್ಲೆಂದರಲ್ಲಿ ವ್ಯಾಪಾರ ಮಾಡದಂತೆ ಸೂಚಿಸಲಾಗಿದ್ದು, ವ್ಯಾಪಾರಸ್ಥರೂ ಒಪ್ಪಿದ್ದಾರೆ ಎಂದರು.

ಮಾರುಕಟ್ಟೆಯಲ್ಲಿ ನಿಯಮ ಪಾಲನೆಗೆ 15 ಮಂದಿ ಮಾರ್ಷಲ್​ಗಳನ್ನು ನೇಮಕ ಮಾಡಲಾಗಿದೆ. ರೈತ ಸಂಘದವರು ಮಾರ್ಕೆಟ್ ತೆರೆಯಲು ಮನವಿ ಮಾಡಿದ್ದರು. ಬೆಳೆದ ಬೆಳೆಯನ್ನು ಮಾರಲು ಅವಕಾಶ ಕೊಡಿ ಎಂದಿದ್ದರು. ಹೀಗಾಗಿ ಮಾರುಕಟ್ಟೆ ತೆರೆಯಲು ಅವಕಾಶ ನೀಡಲಾಗಿದೆ. ಕಡ್ಡಾಯವಾಗಿ ಮಾರಾಟಗಾರರು, ಗ್ರಾಹಕರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಬಿಬಿಎಂಪಿ ಜೊತೆ ಮಾರುಕಟ್ಟೆ ಸಮಿತಿ, ರೈತ ಸಂಘ ಕೈ ಜೋಡಿಸಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.