ETV Bharat / state

ರಾಜ್ಯ ಸರ್ಕಾರದ ಅಧಿಸೂಚನೆಯಲ್ಲಿ ಬದಲಾದ ಪಾಲಿಕೆಯ 15 ವಾರ್ಡ್​ಗಳ ಹೆಸರು : ಶೀಘ್ರದಲ್ಲಿ ಮೀಸಲಾತಿ ಪ್ರಕಟವಾಗುವ ನಿರೀಕ್ಷೆ - ವಾರ್ಡ್‌ಗಳ ಮರುವಿಂಗಡಣೆ

ರಾಜ್ಯ ಸರ್ಕಾರವು ಬಿಬಿಎಂಪಿ ವಾರ್ಡ್​ವಾರು ಮರುವಿಂಗಡನೆ ಮಾಡಿ 225 ವಾರ್ಡ್​ಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ವಾರ್ಡ್​ಗಳ ಹೆಸರು
ವಾರ್ಡ್​ಗಳ ಹೆಸರು
author img

By ETV Bharat Karnataka Team

Published : Sep 27, 2023, 10:49 PM IST

ಬೆಂಗಳೂರು: ಬಿಬಿಎಂಪಿಯ ವಾರ್ಡ್‌ವಾರು ಮರುವಿಂಗಡಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಅಂತಿಮ ಅಧಿಸೂಚನೆ ಹೊರಡಿಸಿದ್ದು, ಇದರಿಂದ ಪಾಲಿಕೆಗೆ ಮೂರು ವರ್ಷಗಳ ಬಳಿಕ ಚುನಾವಣೆ ನಡೆಯುವ ನಿರೀಕ್ಷೆ ಗರಿಗೆದರಿದೆ. ಬಿಜೆಪಿ ನೇತೃತ್ವದ ಸರ್ಕಾರವು ಪಾಲಿಕೆಯ ಕೌನ್ಸಿಲರ್‌ಗಳ ಸಂಖ್ಯೆಯನ್ನು 198ರಿಂದ 243ಕ್ಕೆ ಹೆಚ್ಚಿಸಿ 2021ರ ಜನವರಿ 29ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಕಾಂಗ್ರೆಸ್‌ ಸರ್ಕಾರವು ಆಗಸ್ಟ್ 14ರಂದು ಹಿಂಪಡೆದಿತ್ತು. ನಂತರ ವಾರ್ಡ್‌ಗಳ ಸಂಖ್ಯೆಯನ್ನು 225ಕ್ಕೆ ನಿಗದಿಪಡಿಸಿತ್ತು. ಆನಂತರ 2011ರ ಜನಗಣತಿ ಆಧಾರದಲ್ಲಿ ಪಾಲಿಕೆಯ ವಾರ್ಡ್‌ಗಳ ಪುನರ್‌ವಿಂಗಡಣೆಯ ಕರಡು ಪಟ್ಟಿಯನ್ನು ಆಗಸ್ಟ್ 18ರಂದು ಪ್ರಕಟಿಸಿ, ಆಕ್ಷೇಪಣೆ ಮತ್ತು ಸಲಹೆ ನೀಡಲು 15 ದಿನಗಳ ಕಾಲಾವಕಾಶ ನೀಡಿತ್ತು.

ವಾರ್ಡ್‌ಗಳ ಮರುವಿಂಗಡಣೆಯ ಕರಡು ಪಟ್ಟಿಗೆ ಸಂಬಂಧಪಟ್ಟಂತೆ ಮೂರು ಸಾವಿರಕ್ಕೂ ಅಧಿಕ ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯ ಪರಿಶೀಲನಾ ಸಮಿತಿಯು ಸ್ವೀಕೃತವಾಗಿದ್ದ ಆಕ್ಷೇಪಣೆ, ಸಲಹೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ವಾರ್ಡ್‌ಗಳ ಪುನರ್‌ ವಿಂಗಡಣಾ ಕರಡು ಅಧಿಸೂಚನೆಗೆ ಕೆಲವೊಂದು ಬದಲಾವಣೆಗಳನ್ನು ಸೂಚಿಸಿ ಶಿಫಾರಸು ಮಾಡಿತ್ತು.

ಪರಿಶೀಲನಾ ಸಮಿತಿ ಮಾಡಿರುವ ಶಿಫಾರಸುಗಳನ್ನು ಸರ್ಕಾರ ಒಪ್ಪಿ, 2011ರ ಜನಗಣತಿ ಆಧಾರದ ಮೇರೆಗೆ ಪಾಲಿಕೆಗೆ ಸಂಬಂಧಿಸಿದಂತೆ ವಾರ್ಡ್‌ವಾರು ಕ್ಷೇತ್ರ ಪುನರ್‌ ವಿಂಗಡಣೆಯನ್ನು ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಿದೆ. ವಾರ್ಡ್‌ಗಳ ಹೆಸರು, ಸಂಖ್ಯೆ ಮತ್ತು ಗಡಿ ಪ್ರದೇಶಗಳಲ್ಲಿ ಕೊಂಚ ಬದಲಾವಣೆ ತಂದು 225 ವಾರ್ಡ್‌ಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. ಇದರಲ್ಲಿ ಸುಮಾರು 15 ವಾರ್ಡ್‌ಗಳ ಹೆಸರು, ಸಂಖ್ಯೆಯನ್ನು ಬದಲಾಯಿಸಲಾಗಿದೆ. ಇನ್ನು, ಹಲವು ವಾರ್ಡ್‌ಗಳಿಗೆ ಹೊಸ ಹೆಸರು ಇಡಲಾಗಿದೆ. ಶೀಘ್ರದಲ್ಲೇ ವಾರ್ಡ್‌ವಾರು ಮೀಸಲಾತಿ ಪಟ್ಟಿ ಕೂಡ ಪ್ರಕಟಿಸುವ ಸಾಧ್ಯತೆಗಳಿವೆ.

ಬದಲಾಯಿಸಲ್ಪಟ್ಟಿರುವ ವಾರ್ಡ್‌ಗಳ ಹೆಸರು :

ವಾರ್ಡ್‌ ಸಂಖ್ಯೆ ಬದಲಾದ ಹೆಸರು
27 ಲಿಂಗಧೀರನಹಳ್ಳಿ
46 ರಾಜೀವ್‌ನಗರ
47ಡಾ. ಪುನೀತ್‌ ರಾಜ್‌ಕುಮಾರ್‌
50 ನಾಲ್ವಡಿ ಕೃಷ್ಣರಾಜ ಒಡೆಯರ್‌
83 ಸುಬ್ಬಯ್ಯನಪಾಳ್ಯ
98 ಹೂಡಿ
99 ಭೈರತಿ
130ಶ್ರೀರಾಮಮಂದಿರ
131 ಶಿವನಗರ
132 ರಾಜಾಜಿನಗರ
165 ಬಿ.ವೆಂಕಟರೆಡ್ಡಿನಗರ
167ಅಶೋಕನಗರ
196 ಗವಿಗಂಗಾಧರೇಶ್ವರ
198ದೊಡ್ಡ ಗಣಪತಿ
200 ಸ್ವಾಮಿ ವಿವೇಕಾನಂದ

ಇದನ್ನೂ ಓದಿ : ಬುಧವಾರ ಒಂದೇ ದಿನ 24,500 ಆಸ್ತಿ ನೋಂದಣಿ.. 244 ಕೋಟಿ ರೂ. ಆದಾಯ ಸಂಗ್ರಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.