ಬೆಂಗಳೂರು: ಮನೆ ಮುಂಭಾಗ ನಿಲ್ಲಿಸಿದ್ದ ಕಾರಿಗೆ ಬೆಂಕಿ ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಮನೆ ಮುಂಭಾಗ ನಿಲ್ಲಿಸಿದ್ದ ಕಾರಿಗೆ ಬೆಂಕಿ ಇಟ್ಟ ಘಟನೆ ಬೆಳಕಿಗೆ ಬಂದಿದ್ದು ಸದ್ಯ ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಗರದ ಜಯನಗರ 9 ನೇ ಬ್ಲಾಕ್ನಲ್ಲಿ ಸನಾವುಲ್ಲಾ ಖಾನ್ ವಾಸವಾಗಿದ್ದು ನಿನ್ನೆ ಎಂದಿನಂತೆ ಕೆಲಸ ಮುಗಿಸಿ ಮನೆಯ ಎದುರು ಕಾರು ನಿಲ್ಲಿಸಿದ್ದರು. ರಾತ್ರಿ ವೇಳೆ ಬಂದ ಕಿರಾತಕರು ಬಿಳಿ ಬಣ್ಣದ ಮಹೀಂದ್ರಾ ಎಕ್ಸ್ ಯುವಿ 500 ಕಾರಿಗೆ ಲೈಟರ್ನಿಂದ ಬೆಂಕಿ ಹಚ್ಚಿದ್ದಾರೆ. ಪರಿಣಾಮ ಕ್ಷಣಾರ್ಧದಲ್ಲಿ ಕಾರು ಧಗಧಗನೆ ಹೊತ್ತಿ ಉರಿದಿದೆ.
ಇನ್ನು ಸನಾವುಲ್ಲಾ ಹೇಳುವ ಪ್ರಕಾರ ನೂರ್ ಪಾಷ ಅಂಡ್ ಗ್ಯಾಂಗ್ ಕ್ಷುಲಕ ಕಾರಣಕ್ಕೆ ಸನಾವುಲ್ಲಾ ಖಾನ್ ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದರು. ಇದೇ ಕಾರಣಕ್ಕೆ ನೂರ್ ಪಾಷಾ ಜೊತೆ ನಿನ್ನೆ ಗಲಾಟೆಯಾಗಿತ್ತು. ಇದೇ ದ್ವೇಷಕ್ಕೆ ನೂರ್ ಪಾಷಾ ಹಾಗೂ ಸಾಜ್ಜಿದ್ ಸೇರಿದಂತೆ ನಾಲ್ವರು ದ್ವೇಷಕ್ಕೆ ಈ ಕುಕೃತ್ಯ ಮಾಡಿರುವ ಶಂಕೆ ಇದ್ದು ಕಿಡಿಗೇಡಿಗಳ ಕೃತ್ಯ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದೆ.
ಇನ್ನು ಈ ಸಂಬಂಧ ತಿಲಕನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ದ ಎಫ್ಐಆರ್ ದಾಖಲು ಆಗಿದ್ದು ತನಿಖೆ ಮುಂದುವರೆಸಿದ್ದಾರೆ.