ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಗಾಯಕಿ ಲತಾ ಮಂಗೇಶ್ಕರ್ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ಸೂಚಿಸಿದ್ದಾರೆ.
ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ತಾನೇ ಲತಾ ಮಂಗೇಶ್ಕರ್ ನಮ್ಮನ್ನಗಲಿದ್ದಾರೆ ಎಂಬ ಸುದ್ದಿ ಬಂದಿದೆ. ಭಾರತದ ಸಾರಸ್ವತ ಲೋಕದಲ್ಲಿ ಅವರು ಮಿನುಗುವ ತಾರೆ, ಅವರ ಹಾಡುಗಳು ಕೇವಲ ಸಿನಿಮಾಕ್ಕೆ ಸೀಮಿತವಾಗಿರಲಿಲ್ಲ, ಭಜನೆಗಳು, ದೇಶಭಕ್ತಿ ಗೀತೆಗಳು, ದೇವರ ಗೀತೆಗಳನ್ನು ಹಾಡಿದ್ದಾರೆ. ಯೇ ಮೇರೆ ವತನ್ ಕಿ ಲೋಗೋ ಹಾಡು ಇವತ್ತಿಗೂ ಕೇಳಿದ್ರೆ ದೇಶಭಕ್ತಿ ಉಕ್ಕಿಹರಿಯುತ್ತೆ, ಈ ಹಾಡು ಹಿಮಾಲಯದಷ್ಟೇ ಚಿರಸ್ಥಾಯಿ. ಲತಾ ಮಂಗೇಶ್ಕರ್ ಕನ್ನಡದಲ್ಲೂ ಹಾಡಿದ್ದಾರೆ, ಅವರಿಗೆ ಕನ್ನಡದ ನಂಟೂ ಇತ್ತು. ನಮ್ಮೆಲ್ಲರಿಗೂ ಅಪಾರ ದುಃಖವಾಗಿದೆ. ಭಾರತದ ಕೋಗಿಲೆ ಹಾಡೋದನ್ನು ನಿಲ್ಲಿಸಿದೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರು ಸಾರಸ್ವತ ಲೋಕದಲ್ಲಿ ಸದಾ ಮಿನುಗುತ್ತಿರುತ್ತಾರೆ ಎಂದು ಹೇಳಿದರು.
ನಾಳೆ ದೆಹಲಿ ಪ್ರವಾಸ:
ನಾಳೆ ಬೆಳಗ್ಗೆ ದೆಹಲಿಗೆ ಹೋಗುತ್ತಿದ್ದೇನೆ. ಸಂಸದರ ಜತೆ ಸಭೆ ನಡೆಸುತ್ತೇನೆ, ಕೇಂದ್ರದ ಸಚಿವರ ಜತೆ ಜಲ ಯೋಜನೆಗಳ ಬಗ್ಗೆ ಚರ್ಚೆ ನಡೆಸ್ತೇನೆ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಭೇಟಿಗೆ ಸಮಯ ಕೇಳಿದ್ದೇನೆ ಹಾಗೆ ಬಜೆಟ್, ಹಣಕಾಸು, ಜಿಎಸ್ಟಿ ಬಗ್ಗೆ ಚರ್ಚೆ ನಡೆಸುತ್ತೇನೆ ಮತ್ತು ಪಕ್ಷದ ವರಿಷ್ಠರ ಸಮಯವನ್ನೂ ಕೇಳಿದ್ದೇನೆ. ವರಿಷ್ಠರು ಸಂಸತ್ ಅಧಿವೇಶನ ಹಾಗೂ ಯುಪಿ ಚುನಾವಣೆಯಲ್ಲಿ ಬ್ಯುಸಿ ಇದ್ದಾರೆ. ಇವತ್ತು ಸಂಜೆ ಯಾರೆಲ್ಲರ ಭೇಟಿಗೆ ಸಮಯ ಸಿಗುತ್ತೆ ಅಂತ ಗೊತ್ತಾಗುತ್ತದೆ ಎಂದು ಮಾಹಿತಿ ನೀಡಿದರು.
ಪ್ರಧಾನಿಗಳ ಸಮಯ ಕೇಳಿಲ್ಲ. ವರಿಷ್ಠರು ಸಮಯ ಕೊಟ್ಟರೆ ಯಾವ ರೀತಿ ಚರ್ಚೆ ಇರುತ್ತೆ ಅಂತ ಈಗ ಊಹೆ ಮಾಡಕ್ಕಾಗಲ್ಲ ಎಂದರು.
ಮಾಜಿ ಪ್ರಧಾನಿ ಹೆಚ್ಡಿಡಿ, ಮಾಜಿ ಸಿಎಂ ಹೆಚ್ಡಿಕೆ ಕಂಬನಿ
ಭಾರತದ ಹೃದಯಗೀತೆ, ಸಪ್ತಸ್ವರಗಳ ಸಾಮ್ರಾಜ್ಞಿ ಆಗಿದ್ದ ಪ್ರಖ್ಯಾತ ಗಾಯಕರು, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರೂ ಭಾರತರತ್ನ ಲತಾ ಮಂಗೇಶ್ಕರ್ ಅವರ ನಿಧನ ನನಗೆ ತೀವ್ರ ಆಘಾತ ಉಂಟು ಮಾಡಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ದುಃಖ ವ್ಯಕ್ತಪಡಿಸಿದ್ದಾರೆ.
-
ಭಾರತದ ಹೃದಯಗೀತೆ, ಸಪ್ತಸ್ವರಗಳ ಸಾಮ್ರಾಜ್ಞಿ ಆಗಿದ್ದ ಪ್ರಖ್ಯಾತ ಗಾಯಕರು, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರೂ ಭಾರತರತ್ನ ಲತಾ ಮಂಗೇಶ್ಕರ್ ಅವರ ನಿಧನ ನನಗೆ ತೀವ್ರ ಆಘಾತ ಉಂಟು ಮಾಡಿದೆ. 1/3 pic.twitter.com/kYoJw0Z6LC
— H D Kumaraswamy (@hd_kumaraswamy) February 6, 2022 " class="align-text-top noRightClick twitterSection" data="
">ಭಾರತದ ಹೃದಯಗೀತೆ, ಸಪ್ತಸ್ವರಗಳ ಸಾಮ್ರಾಜ್ಞಿ ಆಗಿದ್ದ ಪ್ರಖ್ಯಾತ ಗಾಯಕರು, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರೂ ಭಾರತರತ್ನ ಲತಾ ಮಂಗೇಶ್ಕರ್ ಅವರ ನಿಧನ ನನಗೆ ತೀವ್ರ ಆಘಾತ ಉಂಟು ಮಾಡಿದೆ. 1/3 pic.twitter.com/kYoJw0Z6LC
— H D Kumaraswamy (@hd_kumaraswamy) February 6, 2022ಭಾರತದ ಹೃದಯಗೀತೆ, ಸಪ್ತಸ್ವರಗಳ ಸಾಮ್ರಾಜ್ಞಿ ಆಗಿದ್ದ ಪ್ರಖ್ಯಾತ ಗಾಯಕರು, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರೂ ಭಾರತರತ್ನ ಲತಾ ಮಂಗೇಶ್ಕರ್ ಅವರ ನಿಧನ ನನಗೆ ತೀವ್ರ ಆಘಾತ ಉಂಟು ಮಾಡಿದೆ. 1/3 pic.twitter.com/kYoJw0Z6LC
— H D Kumaraswamy (@hd_kumaraswamy) February 6, 2022
ಈ ಸಂಬಂಧ ಸ್ವೀಟ್ ಮಾಡಿರುವ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಆರೋಗ್ಯವಾಗಿ ಮನೆಗೆ ಮರಳುತ್ತಾರೆ ಎನ್ನುವ ಸಮಸ್ತ ಭಾರತೀಯರ ನಿರೀಕ್ಷೆಯನ್ನು ಹುಸಿ ಮಾಡಿ ಭಾರತವನ್ನು ಮೌನವಾಗಿಸಿ ತಮ್ಮ ಪಯಣ ಮುಗಿಸಿದ್ದಾರೆ. ಆದರೆ, ಅವರು ಸ್ವರ ತುಂಬಿದ ಸಾವಿರಾರು ಅನರ್ಘ್ಯ ಗೀತೆಗಳ ರೂಪದಲ್ಲಿ ನಮ್ಮ ನಡುವೆ ಅಜರಾಮರವಾಗಿರಲಿವೆ ಎಂದಿದ್ದಾರೆ.
ಲತಾ ಮಂಗೇಶ್ಕರ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಆಗಲಿಕೆಯನ್ನು ಭರಿಸುವ ಶಕ್ತಿಯನ್ನು ಕುಟುಂಬದವರು, ಅಭಿಮಾನಿಗಳಿಗೆ ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
-
Deeply saddened to learn about the passing away of #LataMangeshkar. She had in her voice the soul of this nation. My deepest condolences. Her music will remain with us forever. RIP. pic.twitter.com/w1Dw9TNDgS
— H D Devegowda (@H_D_Devegowda) February 6, 2022 " class="align-text-top noRightClick twitterSection" data="
">Deeply saddened to learn about the passing away of #LataMangeshkar. She had in her voice the soul of this nation. My deepest condolences. Her music will remain with us forever. RIP. pic.twitter.com/w1Dw9TNDgS
— H D Devegowda (@H_D_Devegowda) February 6, 2022Deeply saddened to learn about the passing away of #LataMangeshkar. She had in her voice the soul of this nation. My deepest condolences. Her music will remain with us forever. RIP. pic.twitter.com/w1Dw9TNDgS
— H D Devegowda (@H_D_Devegowda) February 6, 2022
ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರು, ಲತಾ ಮಂಗೇಶ್ಕರ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಅವರ ನಿಧನ ತೀವ್ರ ನೋವು ತಂದಿದೆ. ಅವರ ಧ್ವನಿಯಲ್ಲಿ ದೇಶದ ಆತ್ಮ ಅಡಗಿತ್ತು. ಅವರ ಗೀತೆಗಳು ಎಂದೆಂದಿಗೂ ನಮ್ಮ ಜೊತೆ ಅಮರವಾಗಿರಲಿದೆ ಎಂದು ಕಂಬನಿ ಮಿಡಿದಿದ್ದಾರೆ.
ಕಾಂಗ್ರೆಸ್ ನಾಯಕರ ಸಂತಾಪ:
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಲತಾಮಂಗೇಶ್ಕರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ, ಮಧುರ ಕಂಠದ ಮೂಲಕ ದಶಕಗಳಿಂದ ಜನಮನವನ್ನು ರಂಜಿಸಿದ್ದ ಗಾನಕೋಗಿಲೆ ಲತಾ ಮಂಗೇಶ್ಕರ್ ಸಾವು ನನ್ನಂತಹ ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನು ಆಘಾತಕ್ಕೀಡು ಮಾಡಿದೆ. ನಮ್ಮನ್ನು ಅಗಲಿ ಹೋದರೂ ಅಮರ ಕಂಠ ಸಿರಿಯ ಮೂಲಕ ನಮ್ಮೊಳಗೆ ಲತಾ ದೀದಿ ಅಜರಾಮರ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುವೆ ಎಂದಿದ್ದಾರೆ.
ದೇಶ ಕಂಡ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
-
ಮಧುರ ಕಂಠದ ಮೂಲಕ ದಶಕಗಳಿಂದ ಜನಮನವನ್ನು ರಂಜಿಸಿದ್ದ
— Siddaramaiah (@siddaramaiah) February 6, 2022 " class="align-text-top noRightClick twitterSection" data="
ಗಾನಕೋಗಿಲೆ
ಲತಾ ಮಂಗೇಶ್ಕರ್ ಸಾವು ನನ್ನಂತಹ ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನು ಆಘಾತಕ್ಕೀಡು ಮಾಡಿದೆ.
ನಮ್ಮನ್ನು ಅಗಲಿ ಹೋದರೂ ಅಮರ
ಕಂಠ ಸಿರಿಯ ಮೂಲಕ ನಮ್ಮೊಳಗೆ ಲತಾ ದೀದಿ ಅಜರಾಮರ.
ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುವೆ.#LataMangeshkar pic.twitter.com/VD4B4d7Mzx
">ಮಧುರ ಕಂಠದ ಮೂಲಕ ದಶಕಗಳಿಂದ ಜನಮನವನ್ನು ರಂಜಿಸಿದ್ದ
— Siddaramaiah (@siddaramaiah) February 6, 2022
ಗಾನಕೋಗಿಲೆ
ಲತಾ ಮಂಗೇಶ್ಕರ್ ಸಾವು ನನ್ನಂತಹ ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನು ಆಘಾತಕ್ಕೀಡು ಮಾಡಿದೆ.
ನಮ್ಮನ್ನು ಅಗಲಿ ಹೋದರೂ ಅಮರ
ಕಂಠ ಸಿರಿಯ ಮೂಲಕ ನಮ್ಮೊಳಗೆ ಲತಾ ದೀದಿ ಅಜರಾಮರ.
ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುವೆ.#LataMangeshkar pic.twitter.com/VD4B4d7Mzxಮಧುರ ಕಂಠದ ಮೂಲಕ ದಶಕಗಳಿಂದ ಜನಮನವನ್ನು ರಂಜಿಸಿದ್ದ
— Siddaramaiah (@siddaramaiah) February 6, 2022
ಗಾನಕೋಗಿಲೆ
ಲತಾ ಮಂಗೇಶ್ಕರ್ ಸಾವು ನನ್ನಂತಹ ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನು ಆಘಾತಕ್ಕೀಡು ಮಾಡಿದೆ.
ನಮ್ಮನ್ನು ಅಗಲಿ ಹೋದರೂ ಅಮರ
ಕಂಠ ಸಿರಿಯ ಮೂಲಕ ನಮ್ಮೊಳಗೆ ಲತಾ ದೀದಿ ಅಜರಾಮರ.
ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುವೆ.#LataMangeshkar pic.twitter.com/VD4B4d7Mzx
ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಭಾರತದ 'ಗಾನ ಕೋಗಿಲೆ' ಎಂದೇ ಪ್ರಖ್ಯಾತಿ ಪಡೆದಿರುವ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. 13ನೇ ವಯಸ್ಸಿಗೆ ಕಲಾ ಸರಸ್ವತಿಯ ಸೇವೆ ಆರಂಭಿಸಿದ ಅವರು, ಇದುವರೆಗೂ ವಿವಿಧ ಭಾಷೆಗಳಲ್ಲಿ 30 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರ ಹಾಡುಗಳನ್ನು ಕೇಳಿಕೊಂಡು ನಾವು ಬೆಳೆದಿದ್ದೇವೆ. ಹಲವು ಸುಮಧುರ ಹಿಂದಿ ಹಾಡುಗಳು ಸದಾ ನಮ್ಮ ಕಿವಿಯಲ್ಲಿವೆ.
1967 ರಲ್ಲಿ ಬಿಡುಗಡೆಯಾದ ಕನ್ನಡದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ 'ಬೆಳ್ಳನೆ ಬೆಳಗಾಯಿತು', 'ಎಲ್ಲಾರೆ ಇರತೀರೋ ಎಂದಾರೆ ಬರತೀರೋ' ಹಾಡನ್ನು ಲತಾ ಮಂಗೇಶ್ಕರ್ ಅವರು ಹಾಡಿದ್ದಾರೆ ಎಂದು ನೆನಪಿಸಿಕೊಂಡಿದ್ದಾರೆ.
ಲತಾ ಮಂಗೇಶ್ಕರ್ ಅವರ ಕಲಾ ಸೇವೆಗೆ ದೇಶದ ಪ್ರತಿಷ್ಠಿತ ನಾಗರೀಕ ಪ್ರಶಸ್ತಿ 'ಭಾರತ ರತ್ನ' ಸೇರಿದಂತೆ ಪದ್ಮ ಪ್ರಶಸ್ತಿಗಳು, ದಾದಾ ಸಾಹೇಬ್ ಪಾಲ್ಕೆ, ಫಿಲ್ಮ್ ಫೇರ್ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ಇವರ ಮುಕುಟ ಅಲಂಕರಿಸಿವೆ. ಇಂದು ದೇಶದ ಕಲಾರತ್ನವೊಂದು ನಮ್ಮಿಂದ ಕಣ್ಮರೆಯಾಗಿದ್ದು, ಹಾಡುಗಳ ಮೂಲಕ ಅವರು ಸದಾ ಜೀವಂತವಾಗಿರಲಿದ್ದಾರೆ. ಅವರ ಅಗಲಿಕೆ ದೇಶದ ಕಲಾಕ್ಷೇತ್ರಕ್ಕೇ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಅಗಲಿಕೆ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿ ಬಳಗಕ್ಕೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ಬಿಜೆಪಿ ನಾಯಕರಿಂದ ಸಂತಾಪ:
ಲತಾ ಮಂಗೇಶ್ಕರ್ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಸಂಪುಟ ಸದಸ್ಯರು ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ತೀವ್ರ ಸಂತಾಪ ಸೂಚಿಸಿದ್ದಾರೆ.
ಹಿರಿಯ ಗಾಯಕಿ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಭಾರತರತ್ನ ಲತಾ ಮಂಗೇಶ್ಕರ್ ಅಸ್ತಂಗತರಾದ ಸುದ್ದಿ ಅತೀವ ನೋವನ್ನು ಉಂಟುಮಾಡಿದೆ. ಗಾನ ಕೋಗಿಲೆ ಲತಾ ಅವರ ಅಗಲಿಕೆ ನಿಜಾರ್ಥದಲ್ಲಿ ಭಾರತೀಯ ಸಂಗೀತ ಲೋಕದ ಪಾಲಿಗೆ ಯುಗಾಂತ್ಯ. ಹಲವು ದಶಕಗಳ ಕಾಲ ಅವರು ತಮ್ಮ ಸಾರ್ಥಕ ಸಂಗೀತ ಸಾಧನೆಗಳಿಂದ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ್ದರು. ಭಾರತದಲ್ಲಿ ಅವರನ್ನು ಆರಾಧಿಸುವ ಕೋಟ್ಯಂತರ ಅಭಿಮಾನಿಗಳನ್ನು ಲತಾ ಗಳಿಸಿದ್ದರು. ಅವರು ಭೌತಿಕವಾಗಿ ನಮ್ಮನ್ನು ಅಗಲಿರುವುದು ಇಡೀ ದೇಶವನ್ನೇ ಶೋಕದಲ್ಲಿ ಮುಳುಗಿಸಿದೆ. ದೇವರು ಆ ಅದ್ಭುತ ಕಂಠಸಿರಿಯ ಮಹಾನ್ ಗಾಯಕಿಯ ಆತ್ಮಕ್ಕೆ ಸದ್ಗತಿ ನೀಡಲಿ, ಅವರ ಕುಟುಂಬ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.
ಅಶ್ವತ್ಥನಾರಾಯಣ್ ಸಂತಾಪ:ಗಾನ ಕೋಗಿಲೆ’ ಎಂದೇ ಹೆಸರಾಗಿದ್ದ ಭಾರತರತ್ನ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಂಗೀತದ ಹಿನ್ನೆಲೆಯಿದ್ದ ಮನೆತನದಿಂದ ಬಂದವರಾದ ಲತಾ ಅವರು, ಕೇಳುಗರ ಮನ ಸೂರೆಗೊಳ್ಳುವಂತಹ ಕಂಠಸಿರಿಯಿಂದ ಭಾರತೀಯ ಸಂಗೀತ ಪರಂಪರೆಯ ನೆಲೆ-ಬೆಲೆಗಳನ್ನು ಬಾನೆತ್ತರಕ್ಕೆ ಕೊಂಡೊಯ್ದರು. ಈ ಮೂಲಕ ದೇಶದ ಕಲಾ ಪರಂಪರೆಯ ಕೀರ್ತಿಯನ್ನು ವಿಶ್ವ ಮಟ್ಟದಲ್ಲಿ ಪಸರಿಸಿದರು. ಅವರ ನಿಧನದಿಂದ ಭಾರತಾಂಬೆಯ ಸುಪುತ್ರಿಯೊಬ್ಬರನ್ನು ಕಳೆದುಕೊಂಡಂತೆ ಎಂದು ತಮ್ಮ ಶೋಕ ಸಂದೇಶದಲ್ಲಿ ಸ್ಮರಿಸಿದ್ದಾರೆ.
ಇದನ್ನೂ ಓದಿ: 25,000ಕ್ಕೂ ಹೆಚ್ಚು ಹಾಡುಗಳ ದನಿಯಾಗಿದ್ದ ಗಾನಕೋಗಿಲೆಗೆ ಈ 5 ಹಾಡುಗಳು ಬಹಳಾನೇ ಅಚ್ಚುಮೆಚ್ಚು..
ಲತಾ ಮಂಗೇಶ್ಕರ್ ಅವರು ತಮ್ಮ ಸಂಗೀತದ ಮೂಲಕವೇ ದೇಶಸೇವೆ ಸಲ್ಲಿಸುತ್ತಿದ್ದರು. ಭಾರತೀಯತೆ ಮತ್ತು ಭಾರತೀಯ ಮನೋಭಾವಗಳು ಮೇಳೈಸಿದ್ದ ಅವರ ಶ್ರೀಮಂತ ವ್ಯಕ್ತಿತ್ವವು ಕೋಟ್ಯಂತರ ಭಾರತೀಯರನ್ನು ಸಾಂಸ್ಕೃತಿಕವಾಗಿ ಪ್ರೇರೇಪಿಸುತ್ತಿದ್ದವು. ಈ ಮೂಲಕ ಅವರು ಯುಗಪ್ರವರ್ತಕ ಗಾಯಕಿಯಾಗಿದ್ದರು. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ದಯಪಾಲಿಸಲಿ ಮತ್ತು ಅವರ ಅಭಿಮಾನಿಗಳಿಗೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ಸಚಿವರು ಪ್ರಾರ್ಥಿಸಿದ್ದಾರೆ.
ನಳಿನ್‍ಕುಮಾರ್ ಕಟೀಲ್ ಸಂತಾಪ:
ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ನಿಧನವು ಗಾಯನ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಭಾರತೀಯ ಚಿತ್ರರಂಗದ ಶ್ರೇಷ್ಠ ಗಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಮಂಗೇಶ್ಕರ್ ಅವರು 1942ರಲ್ಲಿ 13 ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಹಾಡಿದ ‘ಯೇ ಮೇರೆ ದೇಶ್ ಕೆ ವತನ್ ಕೆ ಲೋಗೊ’, 'ಲಗ್ ಜಾ ಗಲೇ', 'ಯೇ ಗಲಿಯಾನ್ ಯೇ ಚೌಬಾರಾ', 'ಪ್ಯಾರ್ ಕಿಯಾ ತೊ ಡರ್ನಾ ಕ್ಯಾ', 'ಬಾಹೋನ್ ಮೇ ಚಲೇ ಆವೋ', 'ವೀರ್ ಜರಾ'ದ 'ತೇರೆ ಲಿಯೇ' ಮತ್ತು ಇನ್ನೂ ಅನೇಕ ಹಾಡುಗಳು ಜನಪ್ರಿಯವಾಗಿವೆ. ಅಪಾರ ದೇಶಭಕ್ತಿಯನ್ನು ಹೊಂದಿದ್ದ ಅವರು ರಾಷ್ಟ್ರ, ಧರ್ಮಕ್ಕೆ ಹಾಗೂ ಪಕ್ಷಕ್ಕೆ ನೀಡಿದ ಕೊಡುಗೆ ಅಪಾರ ಎಂದು ನೆನಪಿಸಿದ್ದಾರೆ.
ಹಲವಾರು ಭಾರತೀಯ ಭಾಷೆಗಳಲ್ಲಿ 30,000ಕ್ಕೂ ಹೆಚ್ಚು ಹಾಡುಗಳನ್ನು ಅವರು ಹಾಡಿದ್ದಾರೆ. ಭಾರತದ ನೈಟಿಂಗೇಲ್ (ಗಾನ ಕೋಗಿಲೆ) ಎಂದು ಕರೆಯಲ್ಪಡುವ ಲತಾ ಮಂಗೇಶ್ಕರ್ ಅವರು ಭಾರತರತ್ನ, ಪದ್ಮಭೂಷಣ, ಪದ್ಮವಿಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು ಬಹು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ.ಅವರ ಕುಟುಂಬ, ಅಭಿಮಾನಿಗಳು ಮತ್ತು ಬಂಧುಗಳಿಗೆ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.