ETV Bharat / state

ಬಸವನಪುರ ಕೆರೆ ಸ್ವಚ್ಛಗೊಳಿಸಿ.... ಸ್ವಚ್ಛತೆ ಪಾಠ ಮಾಡಿದ ಕಾರ್ಪೋರೇಟರ್! - ಬೆಂಗಳೂರು ಬಸವನಪುರ

ಬೆಂಗಳೂರು, ಬಸವನಪುರ ವಾರ್ಡ್​ನ ಬಸವನಪುರ ಕೆರೆ ಅಂಗಳದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯದಲ್ಲಿ ಪಾಲಿಕೆ‌ ಸದಸ್ಯ ಜಯಪ್ರಕಾಶ್ ಭಾಗವಹಿಸಿ ಕೆರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಚಗೊಳಿಸಿದರು.

basavanapura-lake-cleaned-by-corporator
ಬಸವನಪುರ ಕೆರೆ ಸ್ವಚ್ಛಗೊಳಿಸಿದ ಕಾರ್ಪೋರೇಟರ್ ಜಯಪ್ರಕಾಶ್
author img

By

Published : Jan 7, 2020, 8:00 AM IST

Updated : Jan 7, 2020, 8:42 AM IST

ಬೆಂಗಳೂರು : ಬಸವನಪುರ ವಾರ್ಡ್​ನ ಬಸವನಪುರ ಕೆರೆ ಅಂಗಳದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯದಲ್ಲಿ ಪಾಲಿಕೆ‌ ಸದಸ್ಯ ಜಯಪ್ರಕಾಶ್ ಭಾಗವಹಿಸಿ ಕೆರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಚಗೊಳಿಸಿದರು.

ಸ್ವಚ್ಛತೆ ಪಾಠ ಮಾಡಿದ ಕಾರ್ಪೋರೇಟರ್

ಪಾಲಿಕೆ ಸದಸ್ಯ ಜಯಪ್ರಕಾಶ್ ಮಾತನಾಡಿ, ಎಲ್ಲೆಂದರಲ್ಲಿ ಕಸ ಹಾಕಿದರೆ ದಂಡ ಹಾಕಿ ಮತ್ತೆ ಕಸ ಹಾಕದಂತೆ ಮನದಟ್ಟು ಮಾಡುವ ಕೆಲಸ ಮಾಡುತ್ತಿದ್ದೇವೆ. ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ, ಪ್ರತಿಯೊಂದು ಬಡಾವಣೆಗಳನ್ನು ತಮ್ಮ ಮನೆಗಳಂತೆ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಹೇಳಿದರು. ಬಿಬಿಎಂಪಿ ನಿಗದಿತ ಸ್ಥಳ ಅಥವಾ ಬಿಬಿಎಂಪಿ ವಾಹನಗಳಿಗೆ ಕಸ ನೀಡುವ ಮೂಲಕ ಸ್ವಚ್ಛತೆ ಕಾಪಾಡಿ ಎಂದು ಕರೆ ನೀಡಿದರು.

ಕೆರೆ ಸ್ವಚ್ಛವಾಗಿಟ್ಟುಕೊಂಡು ಗಿಡಗಳನ್ನು ನೆಟ್ಟರೆ ಸುತ್ತಮುತ್ತಲ ಗ್ರಾಮಗಳಿಗೆ ಶುಚಿತ್ವದ ವಾತಾವರಣ, ಗಾಳಿ ನೀಡುತ್ತದೆ ಆದ್ದರಿಂದ ಕೆರೆಯಂಗಳಕ್ಕೆ ಯಾರೂ ಕಸ ಹಾಕಬೇಡಿ ಎಂದು ಮನವಿ ಮಾಡಿದರು. ಸ್ವಚ್ಚತಾ ಕಾರ್ಯದಲ್ಲಿ ಬಾಲಕೃಷ್ಣ, ತಿರುಮಲರೆಡ್ಡಿ, ತನ್ವೀರ್ ಸೇರಿರಂತೆ ಮತ್ತಿತರರು ಇದ್ದರು.

Intro:ಕೆಆರ್‌ಪುರ,

ಬಸವನಪುರ ಕೆರೆ ಸ್ವಚ್ಛಗೊಳಿಸಿದ ಕಾರ್ಪೋರೇಟರ್ ಜಯಪ್ರಕಾಶ್.

ಬಸವನಪುರ ವಾರ್ಡ್ನ ಬಸವನಪುರ ಕೆರೆ ಅಂಗಳದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲಿಕೆ‌ ಸದಸ್ಯ ಜಯಪ್ರಕಾಶ್ ಭಾಗವಹಿಸಿ
ಕೆರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಚತಾ ಕೆಲಸವನ್ನು ಮಾಡಿದರು.

ಇಂದು ಬಸವನಪುರ ಕೆರೆ ಅಂಗಳದಲ್ಲಿ ವಾರ್ಡ್ ನ ಮುಖಂಡರುಗಳೊಂದಿಗೆ ಸ್ವಚ್ಛತಾ ಕಾರ್ಯ ಹಮ್ಮಿಕೊಂಡು ಕೆರೆ ಅಂಗಳದಲ್ಲಿ ಬಿದ್ದಿದ್ದ ಕಸ ಕಡ್ಡಿ, ಬಿಯರ್ ಬಾಟೆಲ್, ಪ್ಲಾಸ್ಟಿಕ್ ವಸ್ತುಗಳು ಸೇರಿದಂತೆ ಎಲ್ಲವನ್ನೂ ಶುಚಿಗೊಳಿಸಿ ಕಸವನ್ನು ಬಿಬಿಎಂಪಿ ವಾಹನಕ್ಕೆ ತುಂಬಿದರು.

Body:ನಂತರ ಪಾಲಿಕೆ ಸದಸ್ಯ ಜಯಪ್ರಕಾಶ್
ಮಾತನಾಡಿ ಎಲ್ಲೆಂದರಲ್ಲಿ ಕಸ ಹಾಕಿದರೆ ದಂಡ ಹಾಕಿ ಮತ್ತೆ ಕಸ ಹಾಕದಂತೆ ಮನದಟ್ಟು ಮಾಡುವ ಕೆಲಸ ಮಾಡುತ್ತಿದ್ದೇವೆ .
ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ, ಪ್ರತಿಯೊಂದು ಬಡಾವಣೆಗಳನ್ನು ತಮ್ಮ ಮನೆಗಳಂತೆ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಹೇಳಿದರು.
ಬಿಬಿಎಂಪಿ ನಿಗದಿತ ಸ್ಥಳ ಅಥವಾ ಬಿಬಿಎಂಪಿ ವಾಹನಗಳಿಗೆ ಕಸ ನೀಡುವ ಮೂಲಕ ಸ್ವಚ್ಛತೆ ಕಾಪಾಡಿ ಎಂದು ಕರೆ ನೀಡಿದರು.
ಕಸ ಹಾಕುವುದು ಮರುಕಳಿಸಿದರೆ ದಂಡ ಇನ್ನಷ್ಟು ದುಪ್ಪಟ್ಟಾಗುತ್ತದೆ, ಈಗಿನಿಂದಲೇ ಕಸ ಮನೆಯಲ್ಲಿ ಬೇರ್ಪಡಿಸಿ ಬಿಬಿಎಂಪಿ ವಾಹನಕ್ಕೆ ನೀಡಿ ಎಂದು ಹೇಳಿದರು.
Conclusion:ಕೆರೆ ಸ್ವಚ್ಛವಾಗಿಟ್ಟುಕೊಂಡು ಗಿಡಗಳನ್ನು ನೆಟ್ಟರೆ ಸುತ್ತಮುತ್ತಲ ಗ್ರಾಮಗಳಿಗೆ ಶುಚಿತ್ವದ ವಾತಾವರಣ, ಗಾಳಿ ನೀಡುತ್ತದೆ ಆದ್ದರಿಂದ ಕೆರೆ ಅಂಗಳಕ್ಕೆ ಯಾರೂ ಕಸ ಹಾಕಬೇಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಾಲಕೃಷ್ಣ, ತಿರುಮಲರೆಡ್ಡಿ, ತನ್ವೀರ್, ಶ್ರೀರಾಮುಲು, ಕೇಬಲ್ ರಾಜು ಮತ್ತಿತರರಿದ್ದರು.
Last Updated : Jan 7, 2020, 8:42 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.