ETV Bharat / state

'ಸಹನೆಯ ಕಟ್ಟೆ ಒಡೆಯುವುದಕ್ಕಿಂತ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕು' - Basavajayamruthyunjaya sri forced to panchasali reservation

ನಮ್ಮ ಸಮುದಾಯದ ಸಹನೆಯ ಕಟ್ಟೆ ಒಡೆಯುವುದಕ್ಕಿಂತ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಕೂಡಲ ಸಂಗಮ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ಎಚ್ಚರಿಸಿದ್ದಾರೆ.

Basavajayamruthyunjaya sri forced to panchasali reservation
ಜಯಮೃತ್ಯುಂಜಯ ಶ್ರೀಗಳು
author img

By

Published : Mar 2, 2021, 11:14 PM IST

ಬೆಂಗಳೂರು: ಬೇರೆಯವರ ಮೂಲಕ ಸಂದೇಶ ಕಳುಹಿಸುವ ಬದಲು ಸ್ವತಃ ಮುಖ್ಯಮಂತ್ರಿಗಳೇ ನೇರವಾಗಿ ಬಂದು ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರ್ಪಡೆ ಮಾಡಲು ಎಷ್ಟು ಸಮಯಾವಕಾಶ ಬೇಕು ಎಂದು ಹೇಳಲಿ ಎಂದು ಕೂಡಲ ಸಂಗಮ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ಹೇಳಿದ್ದಾರೆ.

ಫ್ರೀಡಂ ಪಾರ್ಕ್ ನಲ್ಲಿ 10 ನೇ ದಿನದ ಧರಣಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರ್ಪಡೆ ಮಾಡಲು ಸರ್ಕಾರಕ್ಕೆ ಕಾನೂನಾತ್ಮಕವಾಗಿ ಅನೇಕ ದಾರಿಗಳಿವೆ. ಆದರೂ, ನ್ಯಾಯಯುತವಾಗಿ ಹಾಗು ಜನರ ಭಾವನೆಗೆ ಸ್ಪಂದಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಕಾಲಮಿತಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ತರಿಸಿಕೊಳ್ಳುವ ಅಧಿಕಾರ ಮುಖ್ಯಮಂತ್ರಿಗಳಿಗಿದೆ. ಹಾಗಾಗಿ, ವರದಿ ತರಿಸಿಕೊಂಡು ಶಿಫಾರಸ್ಸು ಮಾಡಲು ಅವಕಾಶವಿದೆ. ಹಿಂದಿನ ಹಲವು ಶಿಫಾರಸ್ಸುಗಳ ಉದಾಹರಣೆಯೂ ಇದೆ. ನೇರವಾಗಿ ಮುಖ್ಯಮಂತ್ರಿಗಳೇ ಶಿಫಾರಸ್ಸು ಮಾಡುವ ಅವಕಾಶವಿದೆ. ಕೆಲ ಸಮುದಾಯಗಳಿಗೆ ಯಾವುದೇ ಆಯೋಗದ ಶಿಫಾರಸ್ಸು ಇಲ್ಲದೆ 2ಎ ಸೇರ್ಪಡೆಯ ಅನುಷ್ಠಾನ ಮಾಡಿರುವ ಉದಾಹರಣೆಗಳು ಇವೆ. ಅದರಂತೆ ನಮಗೂ ಆದೇಶ ಮಾಡಿ ಎಂದು ಮನವಿ ಮಾಡಿದರು.

ಈಗಾಗಲೇ ನಮ್ಮ ಸಮುದಾಯ ಪ್ರವರ್ಗ 3ಬಿ ಯಲ್ಲಿ ಇರುವುದರಿಂದ ಮತ್ತೆ ವರದಿಯನ್ನು ಪಡೆಯುವ ಅಗತ್ಯವಿಲ್ಲ. ನೇರವಾಗಿ ಶಿಫಾರಸ್ಸು ಮಾಡುವ ಅವಕಾಶವಿದೆ. ಜನರ ಭಾವನೆ, ಕಾನೂನಿನ ಅಂಶಗಳನ್ನು ಪಡೆದುಕೊಂಡು ಸುಲಭವಾಗಿ ಅನುಷ್ಠಾನ ಮಾಡಿ ಎಂದರು.

ಒಂದು ವೇಳೆ ನಮ್ಮ ಸಮುದಾಯವನ್ನು ಪ್ರವರ್ಗ 2 ಎ ಗೆ ಸೇರಿಸಲು ಬಹಳ ತಡವಾಗುತ್ತದೆ ಎಂದರೆ ಎಷ್ಟು ದಿನ ಬೇಕಾಗಲಿದೆ ಎನ್ನುವುದನ್ನು ಹೇಳಬೇಕು. ಬೇರೆಯವರ ಮುಖಾಂತರ ಹೇಳಿ ಕಳಿಸುವುದಕ್ಕಿಂತ ಸ್ವತಃ ಮುಖ್ಯಮಂತ್ರಿಗಳೇ ಸ್ಥಳಕ್ಕೆ ಆಗಮಿಸಿ ವರದಿ ತರಿಸಿಕೊಳ್ಳಲು ಎಷ್ಟು ತಿಂಗಳಾಗಲಿದೆ, ಅದನ್ನು ಅನುಷ್ಠಾನ ಮಾಡಲು ಎಷ್ಟು ತಿಂಗಳಾಗಿದೆ? ಒಟ್ಟು ಎಷ್ಟು ಸಮಯಬೇಕು ಎಂದು ಕೇಳಲಿ ಎಂದರು.

ಓದಿ: ದೇವರ ದರ್ಶನ ಬಳಿಕ 'ಸಿಡಿ' ಸ್ಫೋಟ: ಅಜ್ಞಾತ ಸ್ಥಳದತ್ತ ಚಿತ್ತ ಹರಿಸಿದ ರಮೇಶ್‌ ಜಾರಕಿಹೊಳಿ!

ನಮ್ಮ ಸಮುದಾಯದ ಸಹನೆಯ ಕಟ್ಟೆ ಒಡೆಯುವುದಕ್ಕಿಂತ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕು. ನಾವು ಮೊನ್ನೆ ನಡೆದ ಸಮಾವೇಶದಲ್ಲಿಯೇ ಕ್ರಾಂತಿ ಮಾಡಬಹುದಿತ್ತು. ಆದರೆ, ಅದನ್ನು ಮಾಡಲಿಲ್ಲ. ಶಾಂತಿಯಿಂದ ಹೋರಾಟ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕ್ರಾಂತಿಯ ಮಾರ್ಗವನ್ನು ಸಮಾಜಬಾಂಧವರು ತುಳಿಯಬಾರದು ಎನ್ನುವುದು ನಮ್ಮ ಭಾವನೆ. ಶಾಂತಿ ಮಾರ್ಗದ ಮೂಲಕವೇ ನಾವು ಹೋಗುತ್ತೇವೆ. ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ನಮ್ಮ ಸಮುದಾಯವನ್ನು ಪ್ರವರ್ಗ-2ಎ ಗೆ ಸೇರ್ಪಡೆ ಮಾಡುವ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪತ್ರ ಚಳವಳಿ: ಇನ್ನು ಪಂಚಮಸಾಲಿ ಸಮುದಾಯವನ್ನ ಪ್ರವರ್ಗ 2 ಎ ಗೆ ಸೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಪತ್ರ ಚಳುವಳಿ ಆರಂಭಿಸಲಾಗಿದೆ, ರಾಜ್ಯದ ಎಲ್ಲಾ ಜಿಲ್ಲಾ, ತಾಲ್ಲೂಕು ಕೇಂದ್ರಗಳಿಂದಲೂ ರಾಜ್ಯಪಾಲರಿಗೆ ಪತ್ರ ಬರೆದು 2ಎ ಸೇರ್ಪಡೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಲಾಗುತ್ತಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.