ಬೆಂಗಳೂರು: ಕಾನೂನು ಸುವ್ಯವಸ್ಥೆ ದೃಷ್ಠಿಯಿಂದ ಎರಡು ದಿನಗಳ ಕಾಲ ನಗರದಲ್ಲಿ ಬಾರ್, ವೈನ್ ಸ್ಟೋರ್ ಹಾಗೂ ಪಬ್ಗಳನ್ನು ಮುಚ್ಚುವಂತೆ ಹೇರಿದ್ದ ನಿರ್ಬಂಧವನ್ನು ಒಂದು ದಿನಕ್ಕಿಳಿಸಲಾಗಿದೆ.
ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ರಾಜಕೀಯ ಸಂಘರ್ಷ ಹಿನ್ನೆಲೆಯಲ್ಲಿ ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಾರ್, ಕ್ಲಬ್ಗಳನ್ನು ಜುಲೈ 23 ಸಂಜೆ 6 ರಿಂದ 25ರ ಸಂಜೆ 6 ಗಂಟೆವರೆಗೆ ಮುಚ್ಚುವಂತೆ ಆದೇಶಿಸಿದ್ದೆವು. ಆದರೆ, ಇಂದು ಪರಿಸ್ಥಿತಿಗೆ ಅನುಗುಣವಾಗಿ ಹೊರಡಿಸಿದ್ದ ಆದೇಶವನ್ನ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರಿಸಲಾಗಿದೆ ಎಂದು ತಿಳಿಸಿದರು.
ಈ ಮೂಲಕ ಇಂದು ಸಂಜೆ ಆರು ಗಂಟೆ ನಂತರ ಬಾರ್, ವೈನ್ ಸ್ಟೋರ್, ಪಬ್ಗಳನ್ನ ತೆರೆಯಲು ಅನುಮತಿ ನೀಡಲಾಗಿದೆ. ಆದರೆ, 144 ಸೆಕ್ಷನ್ ನಾಳೆವರೆಗೂ ಮುಂದುವರೆಯಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ.