ಬೆಂಗಳೂರು: ಉದ್ಯೋಗ ಕೊಡಿಸುವ ನೆಪದಲ್ಲಿ ಹೊರ ರಾಜ್ಯದಿಂದ ಮಹಿಳೆಯರನ್ನ ಕರೆದುಕೊಂಡು ಬಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹೇಶ, ಮನು ಕುಮಾರ್, ನಂಜೇಗೌಡ, ಸ್ವರೂಪ, ರವಿ, ತುಕಾರಾಂ ಬಂಧಿತ ಆರೋಪಿಗಳು. ಇವರು ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಬಾಡಿಗೆಗೆ ಪಡೆದುಕೊಂಡಿದ್ದರು. ಹೊರ ರಾಜ್ಯದ ಯುವತಿಯರಿಗೆ ಉದ್ಯೋಗ ಕೊಡಿಸುತ್ತೇವೆ. ಇದರಿಂದ ಒಳ್ಳೇ ಲಾಭ ಇದೆ ಎಂದು ನಂಬಿಸಿ ನಗರಕ್ಕೆ ಕರೆ ತಂದು ಕೆ.ಆರ್.ಪುರಂ ಸುತ್ತಮುತ್ತ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರಂತೆ.
ಖಚಿತ ಮಾಹಿತಿ ಮೇರೆಗೆ ಸಿಸಿಬಿ ಡಿಸಿಪಿ ರವಿ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಲಾಗಿದೆ. ಯುವತಿಯರನ್ನ ರಕ್ಷಣೆ ಮಾಡಿ ಬಂಧಿತರಿಂದ 8 ಮೊಬೈಲ್, ನಗದು, ಸ್ಯಾಂಟ್ರೋ ಕಾರು, ಡಿಯೋ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.