ETV Bharat / state

ನಕಲಿ ಸಹಿ ಬಳಕೆ: ಬೆಂಗಳೂರು ವಿವಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಪಂಗನಾಮ

author img

By

Published : Aug 16, 2019, 7:32 PM IST

ಅಪರಿಚಿತ ವ್ಯಕ್ತಿಗಳು ಬೆಂಗಳೂರು ವಿವಿ ಕುಲಪತಿ ಹಾಗೂ ಕುಲಸಚಿವರ ನಕಲಿ ಸಹಿ ಹಾಗೂ ಲೆಟರ್ ಹೆಡ್ ಬಳಸಿ ಉದ್ಯೋಗಾಂಕ್ಷಿಗಳಿಗೆ ವಂಚನೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ಬೆಂಗಳೂರು ವಿವಿ

ಬೆಂಗಳೂರು: ಕೆಲಸ ಕೊಡಿಸುವ ಸೋಗಿನಲ್ಲಿ ಬೆಂಗಳೂರು ವಿವಿ ಕುಲಪತಿ ಹಾಗೂ ಕುಲಸಚಿವರ ನಕಲಿ ಸಹಿ ಹಾಗೂ ಲೆಟರ್ ಹೆಡ್ ಬಳಸಿ ಲಕ್ಷಾಂತರ ರುಪಾಯಿ ವಂಚನೆ ಮಾಡಿದ್ದು, ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bangalore
ನಕಲಿ ಸಹಿ ಹಾಗೂ ಲೆಟರ್ ಹೆಡ್

ನೇರ ನೇಮಕಾತಿ ಮೂಲಕ ಬೆಂಗಳೂರು ವಿವಿಯಲ್ಲಿ ಗ್ರೇಡ್-1 ಅಧಿಕಾರಿಗಳ ಹುದ್ದೆ ಕೊಡಿಸುವುದಾಗಿ ಆರೋಪಿಗಳು ಆಮಿಷವೊಡ್ಡಿದ್ದರು. ಅಧಿಸೂಚನೆ ಹೊರಡಿಸುವ ಮೊದಲೇ 10 ಜನರಿಗೆ ಗ್ರೇಡ್-1 ಹುದ್ದೆ ಕೊಡಿಸುವುದಾಗಿ ಹೇಳಿದ್ದ ಮಧ್ಯವರ್ತಿಗಳು, ಇದೀಗ ಕುಲಪತಿ ಹಾಗೂ ಕುಲಸಚಿವರ ನಕಲಿ ಸಹಿ ಇರುವ ಆದೇಶ ಪತ್ರಗಳನ್ನು ಉದ್ಯೋಗಾಂಕ್ಷಿಗಳಿಗೆ ನೀಡಿ ತಲೆಮರೆಸಿಕೊಂಡಿದ್ದಾರೆ.

ಕೆಲಸ ಸಿಕ್ಕಿದೆ ಎಂದು ನಂಬಿ ನೇಮಕಾತಿ ಆದೇಶ ಪತ್ರ ಹಿಡಿದು ಕೆಲಸದ ಸ್ಥಳಕ್ಕೆ ಹೋದಾಗ ತಾವು ವಂಚನೆಗೊಳಗಾಗಿದ್ದೇವೆ ತಿಳಿದುಬಂದಿದೆ. ಈ ಸಂಬಂಧ ವಂಚನೆಗೊಳಗಾದ ಅಭ್ಯರ್ಥಿಗಳು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Intro:Body:ಬೆಂಗಳೂರು ಕುಲಸಚಿವರ ನಕಲಿ ಸಹಿ ಲೆಟರ್ ಬಳಸಿ ವಂಚನೆ

ಬೆಂಗಳೂರು: ಕೆಲಸ ಕೊಡಿಸುವ ಸೋಗಿನಲ್ಲಿ ಬೆಂಗಳೂರು ವಿವಿ ಕುಲಪತಿ ಹಾಗೂ ಕುಲಸಚಿವರ ನಕಲಿ ಸಹಿ ಲೆಟರ್ ಹೆಡ್ ಬಳಸಿ ಲಕ್ಷಾಂತರ ರೂ.ವಂಚನೆ ಮಾಡಿರುವ ಘಟನೆ ನಡೆದಿದ್ದು ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇರ ನೇಮಕಾತಿ ಮೂಲಕ ಬೆಂಗಳೂರು ವಿವಿಯಲ್ಲಿ ಗ್ರೇಡ್-1 ಅಧಿಕಾರಿಗಳ ಹುದ್ದೆ ಕೊಡಿಸುವುದಾಗಿ ಆರೋಪಿಗಳು ಆಮಿಷವೊಡ್ಡಿದ್ದರು.
ಅಧಿಸೂಚನೆ ಹೊರಡಿಸುವ ಮೊದಲೇ ಹತ್ತು ಗ್ರೇಡ್-1 ಅಧಿಕಾರಿಗಳ ಹುದ್ದೆ ಕೊಡಿಸುವುದಾಗಿ ಹೇಳಿದ್ದ ಮಧ್ಯವರ್ತಿಗಳು ಇದೀಗ ಕುಲಪತಿ ಹಾಗೂ ಕುಲಸಚಿವರ ಡ್ಲೂಪಿಕೇಟ್ ಸಹಿ ಇರುವ ನಕಲಿ ಆದೇಶ ಪತ್ರಗಳನ್ನು ಉದ್ಯೋಗಾಂಕ್ಷಿಗಳಿಗೆ ನೀಡಿ ತಲೆಮರೆಸಿಕೊಂಡಿದ್ದಾರೆ.

ಕೆಲಸ ಸಿಕ್ಕಿದೆ ಎಂದು ನಂಬಿ ನೇಮಕಾತಿ ಆದೇಶ ಪತ್ರ ಹಿಡಿದು ಅಧಿಕಾರ ವಹಿಸಿಕೊಳ್ಳಲು ಹೋದಾಗ ತಾವು ವಂಚನೆಗೊಳಗಾಗಿರುವುದು ಗೊತ್ತಾಗಿದೆ.
ಈ ಸಂಬಂಧ ವಂಚನೆಗೊಳಗಾದ ಅಭ್ಯರ್ಥಿಗಳಿಂದ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.