ಬೆಂಗಳೂರು: ರಾಜಧಾನಿಯಲ್ಲಿ ನಿನ್ನೆ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿತ್ತು. ಮಳೆಯಿಂದಾಗಿ ಜನತೆ ಪಡಬಾರದ ಕಷ್ಟ ಪಟ್ಟಿದ್ದಾರೆ. ನಿನ್ನೆ ಬೆಂಗಳೂರಲ್ಲಿ ನಿರಂತರವಾಗಿ 2 ಗಂಟೆ ಕಾಲ ಮಳೆ ಸುರಿದಿದ್ದರೆ, ಅದರ ಪ್ರಮಾಣ ಮಾತ್ರ ಹೆಚ್ಚಾಗಿತ್ತು. ಅದರಲ್ಲೂ ಬೆಂಗಳೂರು ದಕ್ಷಿಣ ಹಾಗೂ ಆರ್.ಆರ್ ನಗರ ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾಗಿದ್ದು, ಕೆಲ ಪ್ರದೇಶಗಳಲ್ಲಿ 100 ಮಿ.ಮೀ.ಗೂ ಹೆಚ್ಚು ಮಳೆಯಾಗಿರುವ ವರದಿಯಾಗಿದೆ.
ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆ ಎಂದು ನೋಡುವುದಾದರೆ..
- ಆರ್.ಆರ್ ನಗರ: 109 ಮಿ.ಮೀ.
- ಹೆಮ್ಮಿಗೆಪುರ: 107 ಮಿ.ಮೀ.
- ಕೆಂಗೇರಿ: 109 ಮಿ.ಮೀ.
- ಉಲ್ಲಾಳ: 105 ಮಿ.ಮೀ.
- ವಿದ್ಯಾಪೀಠ: 97 ಮಿ.ಮೀ.
- ಹೊಸಕೆರೆಹಳ್ಳಿ: 96.5 ಮಿ.ಮೀ.
- ಉತ್ತರಹಳ್ಳಿ: 90 ಮಿ.ಮೀ.
- ಕೋಣನಕುಂಟೆ: 85 ಮಿ.ಮೀ.
- ಬಸವನಗುಡಿ, ಗವಿಗಂಗಾಧರೇಶ್ವರ ದೇವಸ್ಥಾನ: 81.5 ಮಿ.ಮೀ.
- ಶಾಖಾಂಬರಿ ನಗರ: 81 ಮಿ.ಮೀ.
- ಕುಮಾರಸ್ವಾಮಿ ಲೇಔಟ್: 81 ಮಿ.ಮೀ.
- ಜಯನಗರ: 72 ಮಿ.ಮೀ. ಮಳೆಯಾಗಿದೆ.